ಬಪ್ಪನಾಡು ಚಂಡಿಕಾ ಯಾಗ ಮಂಟಪ ಉದ್ಘಾಟನೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತ್ರತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂಲ್ಕಿ ಹೋಬಳಿಯ ಸಂಘ,ಸಂಸ್ತೆಗಳು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಜರಗಲಿರುವ ಶ್ರೀ ಶತ ಚಂಡಿಕಾದ್ವರ ಯಾಗದ ಅಂಗವಾಗಿ ಇಂದು ದೇವಳದ ವಠಾರದಲ್ಲಿ ನಿರ್ಮಾಣಗೊಂಡ ಯಾಗ ಮಂಟಪವನ್ನು ರಾಜ್ಯ ಧಾರ್ಮಿಕ ಪರಿಷತ್ ನ ಸದಸ್ಯ ವೇದಮೂರ್ತೀ ಕೇಂಜ ಶ್ರೀಧರ ತಂತ್ರಿಯವರು ಉದ್ಘಾಟಿಸಿದರು.ಬಳಿಕ ಯಾಗ ಮಂಟಪದಲ್ಲಿ ಮಂಟಪ ಸಂಸ್ಕಾರ,ಅಗ್ನಿ ಜನನ,ವಾಸ್ತು ವಿಽ ಮುಂತಾದ ಧಾರ್ಮಿಕ ವಿಧಾನಗಳು ನೆರವೇರಿತು.ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಅನುವಂಶಿಕ ಮೊಕ್ತೇಸರ ಎನ್ ಎಸ್ ಮನೋಹರ್ ಶೆಟ್ಟಿ,ಪ್ರಧಾನ ಅರ್ಚಕರಾದ ಶ್ರೀಪತಿ ಉಪಾಧ್ಯಾಯ,ನರಸಿಂಹ ಭಟ್,ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಚಂದ್ರಶೇಖರ ಸುವರ್ಣ,ಕೋಶಾಽಕಾರಿ ಸಂಜೀವ ದೇವಾಡಿಗ,ವೇದಮೂರ್ತೀ ವಾದಿರಾಜ ಉಪಾಧ್ಯಾಯ ಕೊಲಕಾಡಿ,ಯಾಗ ದೀಕ್ಷಕ ನಿಡ್ಡೋಡಿ ಚಾವಡಿ ಮನೆ ಜಗನ್ನಾಥ ಶೆಟ್ಟಿ ಮತ್ತಿತರಿದ್ದರು.

Mulki-04051703

Comments

comments

Comments are closed.

Read previous post:
Mulki-04051702
ಶ್ರೀಮದ್ರಾಮಯಣ ಕಥಾ ಪ್ರವಚನ

ಹಳೆಯಂಗಡಿ : ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಜಯ ದೇವಾಡಿಗ ಪಡುಪಣಂಬೂರು ಇವರ ವಾಚನದೊಂದಿಗೆ ಕಿರಣ್ ಕುಮಾರ್ ಪಿ. ಪಡುಪಣಂಬೂರು ಇವರಿಂದ ಶ್ರೀಮದ್ರಾಮಯಣ ಕಥಾ ಪ್ರವಚನ...

Close