ಕಟೀಲು : 9 ನೇ ವರ್ಷದ ಸಾಮೂಹಿಕ ವಿವಾಹ

ಕಟೀಲು : ಬಡಕುಟುಂಬಗಳಿಗೆ ಆರ್ಥಿಕ ಹೊರೆ ಬೀಳದಂತೆ ಸುಲಭ ರೀತಿಯ ಸಾಮೂಹಿಕ ಮದುವೆಗಳು ಸಹಕಾರಿಯಾಗಲಿದೆ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅವರ ಕಾರ್ಯ ಅಭಿನಂದನೀಯ ಎಂದು ಕಟೀಲು ದೇವಳ ಆಡಳಿತ ಮಂಡಳಿ ಅಧ್ಯಕ್ಷ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರುಗುತ್ತು ಹೇಳಿದರು.
ಕಟೀಲು ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನದಲ್ಲಿ ಕಟೀಲು ಗೋಪಾಲಕೃಷ್ಣ ಆಸ್ರಣ್ಣ ಟ್ರಸ್ಟ್ ಹಾಗೂ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ ಅಭಿನಂದನಾ ಸಮಿತಿ ಕಟೀಲು, ಇದರ ಆಶ್ರಯದಲ್ಲಿ ಮಂಗಳವಾರ ನಡೆದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಟ್ರಸ್ಟ್ ನ ಅಧ್ಯಕ್ಷ ಕೆ. ಲಕ್ಷ್ಮೀ ನಾರಾಯಣ ಆಸ್ರಣ್ಣ ಪ್ರಸ್ತಾವನೆಗೈದು ಮಾತನಾಡಿ ಕಳೆದ ೮ ವರ್ಷಗಳಿಂದ ೧೦೦ ಕ್ಕೂ ಮಿಕ್ಕಿ ಜೋಡಿಗಳು ಮದುವೆಯಲ್ಲಿ ಭಾಗವಹಿಸಿ ಯಶಸ್ವಿ ಜೀವನ ನಡೆಸುತ್ತಿದ್ದಾರೆ ಎಂದು ಹೇಳಿದರು.
ಓರಿಯಂಟಲ್ ವಿಮಾ ಕಂಪೆನಿಯ ಸುರತ್ಕಲ್ ಶಾಖಾ ಪ್ರಬಂಧಕ ಯಾದವ ದೇವಾಡಿಗ ಅಧ್ಯಕ್ಷತೆ ವಹಿಸಿದ್ದರು.
ದಿವಾಕರ – ಲತಾ, ರವಿ – ರಾಧಾ, ಹರೀಶ್ – ಜ್ಯೋತಿ, ಅಭಿಲಾಷ್ ಸುಜಾತ ಒಟ್ಟು ೪ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಮುಂಬಯಿ ಪೂವಾಯಿ ಶ್ರೀ ಮಹಾಶೇಷ ರುಂಡಮಾಲಿನಿ ಮಂದಿರದ ಧರ್ಮದರ್ಶಿ ಶ್ರೀ ಸುವರ್ಣಬಾಬಾ, ಮುಂಬಯಿ ಉದ್ಯಮಿ ಕೇಶವ ಅಂಚನ್ ಮುಂಬಯಿ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಮೂಡಬಿದಿರೆ ಉದ್ಯಮಿ ಶ್ರೀಪತಿ ಭಟ್, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಮುಂಬಯಿಯ ಸಮಾಜ ಸೇವಕ ಸತೀಶ್ ಎನ್ ಬಂಗೇರ, ಉದ್ಯಮಿ ನಿಲೇಶ್ ಶೆಟ್ಟಿಗಾರ್, ಪ್ರಕಾಶ್ ಹೆಗ್ಡೆ, ಸುನೀತಾ ಹೆಗ್ಡೆ, ಸುಧಾಕರ ರಾವ್ ಪೇಜಾವರ , ಗೋಪಾಲಕೃಷ್ಣ ಆಸ್ರಣ್ಣ , ಜಯಂತಿ ಆಸ್ರಣ್ಣ , ಪಿ. ಸತೀಶ್ ರಾವ್ ದೊಡ್ಡಯ ಮೂಲ್ಯ ಕಟೀಲು, ಲೋಕಯ್ಯ ಕಟೀಲು ಮತ್ತಿತರರು ಉಪಸ್ಥಿತರಿದ್ದರು.
ರಮ್ಯ ರವಿತೇಜ ಕಾರ್ಯಕ್ರಮ ನಿರೂಪಿಸಿದರು.

Kinnigoli04051701

Comments

comments

Comments are closed.

Read previous post:
Mulki-04051703
ಬಪ್ಪನಾಡು ಚಂಡಿಕಾ ಯಾಗ ಮಂಟಪ ಉದ್ಘಾಟನೆ

ಮೂಲ್ಕಿ: ಮೂಲ್ಕಿಯ ಬಪ್ಪನಾಡು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ನೇತ್ರತ್ವದಲ್ಲಿ ಲೋಕಕಲ್ಯಾಣಾರ್ಥವಾಗಿ ಮೂಲ್ಕಿ ಹೋಬಳಿಯ ಸಂಘ,ಸಂಸ್ತೆಗಳು ಹಾಗೂ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಳದ ಸಹಕಾರದೊಂದಿಗೆ ಜರಗಲಿರುವ ಶ್ರೀ...

Close