ಕಿನ್ನಿಗೋಳಿ : ಮಾಹಿತಿ ಕಾರ್ಯಗಾರ

ಕಿನ್ನಿಗೋಳಿ : ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿನ ವಿವಿಧ ಮುಖ್ಯ ಪ್ರದೇಶಗಳನ್ನು ಗುರುತಿಸಿ ಅದಕ್ಕೆ ಆಧುನಿಕ ತಂತ್ರಜ್ಞಾನದ ರೂಪ ಕೊಟ್ಟು ತ್ವರಿತವಾಗಿ ಜಗತ್ತಿಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ. ಈ ಬಗ್ಗೆ ಅಗತ್ಯ ಮಾಹಿತಿಗಳನ್ನು ಕಲೆ ಹಾಕಬೇಕಾಗಿದೆ. ಎಂದು ಆಳ್ವಾಸ್ ಕಾಲೇಜು ಇಂಜಿನಿಯರಿಂಗ್ ಕಾಲೇಜು ಪ್ರಿನ್ಸಿಪಾಲ್ ಡಾ. ಪೀಟರ್ ಫೆರ್ನಾಂಡಿಸ್ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಕಿನ್ನಿಗೋಳಿ, ಮೆನ್ನಬೆಟ್ಟು ಐಕಳ, ಬಳ್ಕುಂಜೆ, ಕಲ್ಲಮುಂಡ್ಕೂರು, ಗ್ರಾಮ ಪಂಚಾಯಿತಿ ಸದಸ್ಯರು , ಪಿಡಿಒ ಗಳಿಗೆ ಉಪಗ್ರಹ ಆಧಾರಿತ ಭುವನ್ ಆಪ್ ಮಾಹಿತಿ ಕಲೆ ಹಾಕುವ ಕಾರ್ಯಗಾರದಲ್ಲಿ ಬುಧವಾರ ಮಾಹಿತಿ ನೀಡಿ ಮಾತನಾಡಿದರು.
ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿನ ಆಸ್ತಿ ನಕಾಶೆಯನ್ನು ಗುರುತಿಸಿ ಹೆಸರಿಸಿ ಸಂಗ್ರಹಿಸಿಬೇಕಾಗಿದೆ ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಅಗತ್ಯವಾಗಿ ಬೇಕು ಸದಸ್ಯರು ಮುತುವರ್ಜಿ ವಹಿಸಬೇಕಾಗಿದೆ ಎಂದು ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಕಾರ್ಯಗಾರ ಉದ್ಘಾಟಿಸಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಗುಜರನ್, ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಂದರಿ ಸಾಲ್ಯಾನ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ ಉಪಸ್ಥಿತರಿದ್ದರು.
ಶ್ರೀವಸ್ತ, ರಾಘವೇಂದ್ರ ಪ್ರಸಾದ್, ಮಧೂಸೂದನ್ ತರಬೇತಿ ನೀಡಿದರು. ಕಿನ್ನಿಗೋಳಿ ಗ್ರಾ. ಪಂ. ಪಿಡಿಒ ಅರುಣ್ ಪ್ರದೀಪ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli04051702

Comments

comments

Comments are closed.

Read previous post:
Kinnigoli04051701
ಕಟೀಲು : 9 ನೇ ವರ್ಷದ ಸಾಮೂಹಿಕ ವಿವಾಹ

ಕಟೀಲು : ಬಡಕುಟುಂಬಗಳಿಗೆ ಆರ್ಥಿಕ ಹೊರೆ ಬೀಳದಂತೆ ಸುಲಭ ರೀತಿಯ ಸಾಮೂಹಿಕ ಮದುವೆಗಳು ಸಹಕಾರಿಯಾಗಲಿದೆ ಟ್ರಸ್ಟ್ ಹಾಗೂ ಲಕ್ಷ್ಮೀನಾರಾಯಣ ಆಸ್ರಣ್ಣ ಅವರ ಕಾರ್ಯ ಅಭಿನಂದನೀಯ ಎಂದು ಕಟೀಲು ದೇವಳ...

Close