ಅಂತರಾಷ್ತ್ರೀಯ ಮಟ್ಟದ ಸರ್ಫಿಂಗ್

ಮೂಲ್ಕಿ: ಯು ಎಸ್ ಎ (ಅಮೇರಿಕಾ) ದ ನಾರ್ತ್ ಕೆರೋಲಿನಾದಲ್ಲಿ ಎಪ್ರಿಲ್ ತಿಂಗಳಿನಲ್ಲಿ ಜರಗಿದ ಅಂತರಾಷ್ತ್ರೀಯ ಮಟ್ಟದ ಸರ್ಫಿಂಗ್ ಎರಡು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಕೈಕ ಯುವತಿ 17 ರ ಹರೆಯದ ಮೂಲ್ಕಿ ಮಂತ್ರ ಸರ್ಫಿಂಗ್ ಕ್ಲಬ್ ನ ಸದಸ್ಯೆ, ಮೂಲ್ಕಿ ಕೊಳಚಿಕಂಬಳದ ನಿವಾಸಿ ತನ್ವಿ ಜಗದೀಶ್ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.
ಎಪ್ರಿಲ್ 15ರಿಂದ 17 ರ ವರೆಗೆ ಅಮೇರಿಕಾದ ಸಾಲ್ತ್ ಲೈಫ್ ಪ್ರಾಯೋಜಕತ್ವದಲ್ಲಿ ಅಮೇರಿಕಾದ ನಾರ್ತ್ ಕೆರೋಲಿನಾದಲ್ಲಿ ಜರಗಿದ ಡಬ್ಲ್ಯು ಬಿ ಎಸ್ ಯು ಪಿ ಸರ್ಫ್ ಪ್ರೋ ಎ ಎಂ ಅಂತರಾಷ್ಟ್ರ‍ೀಯ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ಸ್ತಾಂಡ್ ಅಫ್ ಪಾಡ್ಲಿಂಗ್(ಎಸ್ ಯು ಪಿ) ರೇಸ್ ಮತ್ತು ಸರ್ಫ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ತನ್ವಿ ಜಗದೀಶ್ ರವರು ತೃತೀಯ ಪ್ರಶಸ್ತಿಯನ್ನು ಪಡೆದಿದ್ದಾರೆ. ತನ್ವಿ ಚಿಕ್ಕಂದಿನಿಂದಲೇ ಸರ್ಫಿಂಗ್ ನತ್ತ ಆಸಕ್ತಿಯನ್ನು ಹೊಂದಿದ್ದು ಮೂಲ್ಕಿ ಕೊಳಚಿಕಂಬಳದ ತನ್ನ ಅಜ್ಜನ ಮನೆಯ ಪಕ್ಕದಲ್ಲಿರುವ ಮಂತ್ರ ಸರ್ಫಿಂಗ ಕ್ಲಬ್ ನಲ್ಲಿ ತರಬೇತಿಯನ್ನು ಪಡೆಯುತ್ತಿದ್ದು ಈಗಾಗಲೇ ರಾಷ್ಟ್ರ‍ೀಯ,ಅಂತರಾಷ್ಟ್ರ‍ೀಯ ಮಟ್ಟದಲ್ಲಿ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸರ್ಫಿಂಗ್ ನಲ್ಲಿ ಆಸಕ್ತಿಯನ್ನು ಹೊಂದಿರುವ ತನ್ವಿ ಇನ್ನು ಹೆಚ್ಚಿನ ಕಲಿಕೆಗಾಗಿ ಅಂತರಾಷ್ತ್ರೀಯ ಮಟ್ಟದ ಸ್ಪರ್ಧೆಯ ಬಳಿಕ ಇದೀಗ ಮುಂಬಾಯಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದು ಮೇ ತಿಂಗಳ ಅಂತ್ಯದಲ್ಲಿ ಸಸಿಹಿತ್ಲುವಿನಲ್ಲಿ ಜರಗಲಿರುವ ರಾಷ್ತ್ರ ಮಟ್ಟದ ಸರ್ಫಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ.Mulki-09051701Mulki-09051702

Comments

comments

Comments are closed.

Read previous post:
Kinnigoli-05051706
ಕಲಶಾಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ

ಕಿನ್ನಿಗೋಳಿ : ಶ್ರೀ ನಾಗರಕ್ತೇಶ್ವರೀ ಮತ್ತು ಪರಿವಾರ ಶಕ್ತಿಗಳ ಪುನ: ಪ್ರತಿಷ್ಠಾ ಮಹೋತ್ಸವ ಕಲಶಾಭಿಷೇಕ ಹಾಗೂ ಆಶ್ಲೇಷ ಬಲಿ ಸೇವೆ ಮಂಗಳವಾರ ವೇ. ಮೂ. ವಾದಿರಾಜ ಉಪಾಧ್ಯಾಯ ಕೊಲೆಕಾಡಿ...

Close