ಧರ್ಮ ರಕ್ಷಣೆ ಮಾಡುವುದೇ ಲೋಕಕ್ಕೆ ಮಾದರಿ

ಮುಲ್ಕಿ: ಹಿರಿಯರ ಮಾರ್ಗದರ್ಶನದಲ್ಲಿ ನಡೆಯುವುದೇ ಧರ್ಮ, ಕಷ್ಟ ಬಂದಾಗ ಮಾತ್ರ ಭಗವಂತನನ್ನು ಪ್ರಾರ್ಥಿಸುವುದು ಸರಿಯಲ್ಲ, ನಿರಂತರ ಭಗವಂತನ ಸ್ಮರಣೆ ಮಾಡಿಕೊಂಡು ಭಕ್ತಿ, ಶೃದ್ದೆ, ದಯೆ ಎಂಬ ತ್ರಿಕರ್ಣಗಳ ಮೂಲಕ ಭಗವಂತನ ಸ್ಮರಣೆ ಮಾಡಿದರೆ ಸುಖ , ನೆಮ್ಮದಿಯ ಅನುಗ್ರಹ ಪ್ರಾಪ್ತಿಯಾಗುತ್ತದೆ, ಧಮವನ್ನು ರಕ್ಷಣೆ ಮಾಡುವುದೇ ಲೋಕಕ್ಕೆ ಮಾದರಿ ಎಂದು ವೇದಮೂರ್ತಿ ಕೃಷ್ಣರಾಜ ಭಟ್ ಬಪ್ಪನಾಡು ಹೇಳಿದರು.
ಬಪ್ಪನಾಡು-ಒಡೆಯರಬೆಟ್ಟು ಶ್ರೀ ಮಹಂತರ ಮಠದಲ್ಲಿ ಸೋಮವಾರ ಶ್ರೀ ದೇವರ ಪುನರ್‌ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.
ಉದ್ಯಮಿ ನಾರಾಯಣ ಶೆಟ್ಟಿ ಬೆಂಗಳೂರು, ಜಯದೇವ ಚಿಕ್ಕಮಗಳೂರು, ಕ್ಷೇತ್ರದ ಮೊಕ್ತೇಸರ ಎಮ್.ಚಂದ್ರಶೇಖರ, ದಾನಿ ಹಾಗೂ ಮೂಲ್ಕಿ ಮಯೂರಿ ಫೌಂಡೇಶನ್ ಅಧ್ಯಕ್ಷ ಜಯ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ, ಕಾರ್ಯಾಧ್ಯಕ್ಷ ಸಂಜೀವ ದೇವಾಡಿಗ, ಕೋಶಾಧಿಕಾರಿ ಹರೀಶ್ ಉಡುಪಿ, ಪ್ರಧಾನ ಕಾರ್ಯದರ್ಶಿ ಜಯಪ್ರಕಾಶ್, ಹರಿಶ್ಚಂದ್ರ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ಮಹಂತರ ಮಠದ ಬ್ರಹ್ಮಕಲಶೋತ್ಸವಕ್ಕೆ ಶ್ರಮಿಸಿದ ನೆಲೆಯಲ್ಲಿ ದಾನಿಗಳಾದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಸುನಿಲ್ ಆಳ್ವ ಸಹಿತ 15 ಜನರನ್ನು ಗೌರವಿಸಲಾಯಿತು.
ಸುನಿಲ್ ಆಳ್ವ ಸ್ವಾಗತಿಸಿದರು. ದಿನೇಶ್ ಕೋಲ್ನಾಡು ಕಾರ್ಯಕ್ರಮ ನಿರೂಪಿಸಿದರು.

Mulki-09051703

Comments

comments

Comments are closed.

Read previous post:
Mulki-09051701
ಅಂತರಾಷ್ತ್ರೀಯ ಮಟ್ಟದ ಸರ್ಫಿಂಗ್

ಮೂಲ್ಕಿ: ಯು ಎಸ್ ಎ (ಅಮೇರಿಕಾ) ದ ನಾರ್ತ್ ಕೆರೋಲಿನಾದಲ್ಲಿ ಎಪ್ರಿಲ್ ತಿಂಗಳಿನಲ್ಲಿ ಜರಗಿದ ಅಂತರಾಷ್ತ್ರೀಯ ಮಟ್ಟದ ಸರ್ಫಿಂಗ್ ಎರಡು ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಎಕೈಕ ಯುವತಿ...

Close