ಮೇಜರ್ ಉದಯ ಶ್ರೀಯಾನ್‌ಗೆ ಅಂತಿಮ ನಮನ

ಸಸಿಹಿತ್ಲು : ಭಾರತೀಯ ಗಡಿ ರಕ್ಷಣಾ ಪಡೆಯಲ್ಲಿ ಪಶ್ಚಿಮ ಬಂಗಾಳದ ಕೊಲ್ಕತಾದ ಹರಿಣ್‌ಘಾಟ್‌ನಲ್ಲಿ ಮೇಜರ್ ಆಗಿ ಸೇವೆಯಲ್ಲಿದ್ದಾಗಲೇ ತೀವ್ರ ಅನಾರೋಗ್ಯದಿಂದ ನಿಧನರಾಗಿದ್ದ ಸಸಿಹಿತ್ಲು ನಿವಾಸಿ ಉದಯ ವಿ. ಶ್ರೀಯಾನ್ (50)ಅವರ ಪಾರ್ಥಿವ ಶರೀರವನ್ನು ಸಕಲ ಸರಕಾರಿ ಗೌರವ ಹಾಗೂ ಸಾರ್ವಜನಿಕರ ಅಂತಿಮ ದರ್ಶನದೊಂದಿಗೆ ಅವರ ಹುಟ್ಟೂರಾದ ಸಸಿಹಿತ್ಲುವಿನ ಹಿಂದು ರುದ್ರಭೂಮಿಯಲ್ಲಿ ಶವ ಸಂಸ್ಕಾರ ನಡೆಸಲಾಯಿತು. ಅಪಾರ ಬಂಧು ವರ್ಗ ಈ ಸಂದರ್ಭಕ್ಕೆ ಸಾಕ್ಷಿಯಾಯಿತು.
ಸಸಿಹಿತ್ಲುವಿನ ಬಬ್ಬರ್ಯ ದೈವಸ್ಥಾನದ ಬಳಿಯ ನಿವಾಸಿಯಾಗಿದ್ದ ಉದಯ ವಿ. ಶ್ರೀಯಾನ್‌ರವರ ಪಾರ್ಥಿವ ಶರೀರವನ್ನು ಕೊಲ್ಕತ್ತಾದಿಂದ ವಿಮಾನದ ಮೂಲಕ ಬೆಂಗಳೂರಿಗೆ ತಂದು, ಅಲ್ಲಿಂದ ಸರಕಾರಿ ವಾಹನ ಮೂಲಕ ಮುಂಜಾನೆ 3.30ಗಂಟೆಗೆ ಸುರತ್ಕಲ್ ಪೊಲೀಸ್ ಠಾಣೆಗೆ ದಾಖಲಾತಿ ಪರಿಶೀಲಿಸಣೆ ಮಾಡಿ ಆನಂತರ ಅವರ ಮನೆಗೆ ತರಲಾಯಿತು. ಸಾರ್ವಜನಿಕರ ದರ್ಶನದ ಬಳಿಕ ರುದ್ರಭೂವಿಗೆ ತರಲಾಯ್ತು.
ಕೊಲ್ಕತ್ತಾ ಬೆಟಾಲಿನ್‌ನ ಕೆ.ಎಸ್. ರೂಪ್ ಸಿಂಗ್‌ರವರ ನೇತೃತ್ವದ ತಂಡ ಉದಯ ಶ್ರೀಯಾನ್ ಅವರ ಪಾರ್ಥಿವ ಶರೀರವನ್ನು ಸಸಿಹಿತ್ಲಿಗೆ ತರಲಾಗಿತ್ತು. ಬಿಎಎಸ್‌ಎಫ್ ಎಸ್‌ಟಿಸಿ ಕ್ಯಾಡರ್‌ನ ಇನ್ಸ್‌ಪೆಕ್ಟರ್ ಕೆ.ಜಿ. ಸುದೇಶ್, ಕೆ. ರವೀಂದ್ರನ್, ಮಂಜುನಾಥ್, ಜೆನ್ಸಿನ್ ಒ.ಎಸ್., ವಿಗುಲ್ ಶಿವಕುಮಾರ್, ಎ. ಗಣೇಶನ್, ಚಂಪಕ್ ಡಿ.ವರ್ಮನ್, ರವಿಕುಮಾರ್ ಯಾದವ್, ಪ್ರೇಮ್ ಪ್ರಕಾಶ್ ಗುಪ್ತ, ಕಿಶನ್ ರವಿದಾಸ್, ಬಲ್ಜಿತ್ ಸಿಂಗ್‌ರವರು ಜತೆಯಲ್ಲಿದ್ದು, ಸರಕಾರಿ ಗೌರವವನ್ನು ನೀಡಿದರು.
ಸಂಸದ ನಳಿನ್‌ಕುಮಾರ್ ಕಟೀಲು, ದ.ಕ.ಜಿ.ಪಂ. ಸದಸ್ಯ ವಿನೋದ್ ಬೊಳ್ಳೂರು, ಮೂಡಾ ಸದಸ್ಯ ಎಚ್. ವಸಂತ ಬೆರ್ನಾಡ್, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಸದಸ್ಯರಾದ ಅಶೋಕ್‌ಬಂಗೇರ, ಚಿತ್ರಾ ಸುಖೇಶ್, ಮಾಲತಿ ಕೋಟ್ಯಾನ್, ಚಂದ್ರ ಕುಮಾರ್, ಅನಿಲ್ ಪೂಜಾರಿ, ಅಬ್ದುಲ್ ಖಾದರ್, ಕದಿಕೆ ಮೊಗವೀರ ಮಹಾಸಭಾದ ಅಧ್ಯಕ್ಷ ವಿಠಲ ಬಂಗೇರ, ಉಪಾಧ್ಯಕ್ಷ ವಾಸುದೇವ ಸಿ. ಸಾಲ್ಯಾನ್, ಕಾರ್ಯದರ್ಶಿಗಳಾದ ಅನಿಲ್ ಕುಂದರ್, ಅನಿಲ್ ಕಾಂಚನ್, ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಂಕರ ಬಂಗೇರ, ಉತ್ಥಾನ ಬಳಗದ ವಿಶ್ವಸ್ಥ ಭಾಸ್ಕರ ಸಾಲ್ಯಾನ್, ದ.ಕ. ಜಿಲ್ಲಾ ಬಿಜೆಪಿ ಮೀನುಗಾರರ ಪ್ರಕೋಷ್ಠದ ಸಂಚಾಲಕ ಶೋಭೇಂದ್ರ ಸಸಿಹಿತ್ಲು, ಬಿಲ್ಲವ ಹಿತವರ್ಧಕ ಸಂಘದ ಕೋಶಾಧಿಕಾರಿ ದಯಾನಂದ ಅಂಚನ್, ಆಂಜನೇಯ ವ್ಯಾಯಾಮ ಶಾಲೆಯ ಅಧ್ಯಕ್ಷ ವಿನೋದ್‌ಕುಮಾರ್, ರುದ್ರಭೂಮಿ ಸಮಿತಿಯ ಅಧ್ಯಕ್ಷ ಮಾಧವ ತಿಂಗಳಾಯ, ಮೀನುಗಾರರ ಮುಖಂಡರಾದ ಜಗನ್ನಾಥ ಸಾಲ್ಯಾನ್, ಹಳೆಯಂಗಡಿ ಪಿಸಿಎ ಬ್ಯಾಂಕ್ ಅಧ್ಯಕ್ಷ ಸತೀಶ್ ಭಟ್ ಕೊಳುವೈಲು ಹಾಗೂ ವಿವಿಧ ಸಂಘ ಸಂಸ್ಥೆಗಳ ಪ್ರಮುಖರು, ಪ್ರತಿನಿಧಿಗಳು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

Mulki-12051701 Mulki-12051702 Mulki-12051703

Comments

comments

Comments are closed.

Read previous post:
Mulki-11051701
ಉದಯ ವಿ. ಶ್ರೀಯಾನ್

ಸಸಿಹಿತ್ಲು : ಭಾರತದ ಗಡಿ ರಕ್ಷಣಾ ಪಡೆಯ ಕಲ್ಕತ್ತಾದ ಕಲ್ಯಾಣಿಯಲ್ಲಿ ಮೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಉದಯ ವಿ. ಶ್ರೀಯಾನ್ ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. ಅವರ ಮೃತದೇಹವು...

Close