ಜೈನ ಬಸದಿಗಳು ಸಂಸ್ಕೃತಿ ಸಂಸ್ಕಾರದ ಕೇಂದ್ರ

ಮೂಲ್ಕಿ: ಧಾರ್ಮಿಕ ನೆಲೆಯಲ್ಲಿ ಕರಾವಳಿಯ ಜೈನ್ ಬಸದಿಗಳು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಪ್ರತಿಬಿಂಬಿಸುವ ಕೇಂದ್ರವಾಗಿದ್ದು ಇದರ ಅಭಿವೃದ್ಧಿ ಹಾಗೂ ಪುರಾತನ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಭವಿಷ್ಯದಲ್ಲಿ ನಮ್ಮ ಪರಂಪರೆಯನ್ನು ಭದ್ರವಾಗಿರಿಸಬಹುದು ಎಂದು ಶಾಸಕ ಕೆ.ಅಭಯಚಂದ್ರ ಜೈನ್ ಹೇಳಿದರು.
ಅವರು ಮೂಲ್ಕಿ ಸೀಮೆಯ ಅರಮನೆಯಲ್ಲಿ ಮೂಲ್ಕಿ ಜೈನ ಬಸದಿಯ ಜೀರ್ಣೋದ್ಧಾರಕ್ಕಾಗಿ ಸರಕಾರದಿಂದ ಮಂಜೂರಾದ 10 ಲಕ್ಷ ರೂ.ವನ್ನು ಸೀಮೆಯ ಅರಸರಾದ ಎಂ.ದುಗ್ಗಣ್ಣ ಸಾವಂತರಿಗೆ ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಎಂ.ಭುಜಂಗ ಶೆಟ್ಟಿ ಕೊಲ್ನಾಡು, ಜಿನಚಂದ್ರ ಜೈನ್, ವಿಮಲ್‌ಕುಮಾರ್, ಗೌತಮ್ ಜೈನ್, ಅಶೋಕ್‌ರಾಜ್ ಎರ್ಮಾಳು ಬೀಡು, ಶ್ರೀವರ್ಮ ಜೈನ್, ಬಿ.ಸೂರ್ಯಕುಮಾರ್ ಹಾಗೂ ಮೂಲ್ಕಿ ಜೈನ್ ಸಮುದಾಯದ ಪ್ರಮುಖರು ಇದ್ದರು.

Mulki-13051701

Comments

comments

Comments are closed.