ರಜಾ ಕಾಲದ ವಸಂತ ವೇದ ಶಿಭಿರ

ಮೂಲ್ಕಿ: ಬೇಸಿಗೆ ರಜಾ ಕಾಲದ ವಸಂತ ವೇದ ಶಿಭಿರಗಳು ವಿದ್ಯಾರ್ಥಿಗಳಿಗೆ ಸಂಸ್ಕೃತ ಹಾಗೂ ವೇದ ಜ್ಞಾನ ಗಳಿಕೆಗೆ ಉತ್ತಮ ಬುನಾದಿಯಂತಾಗುತ್ತದೆ ಎಂದು ಪುನರೂರು ಪ್ರತಿಷ್ಠಾನದ ಜನ ವಿಕಾಸ ಸಮಿತಿಯ ಅಧ್ಯಕ್ಷ ಸುರೇಶ್ ರಾವ್ ನೀರಳಿಕೆ ಹೇಳಿದರು.
ಪುನರೂರು ಶ್ರೀ ವಿಶ್ವನಾಥ ದೇವಸ್ಥಾನ ಮತ್ತು ವಿಪ್ರಸಂಪದ ಪುನರೂರು ಜಂಟಿಯಾಗಿ ಬ್ರಾಹ್ಮಣ ವಿದ್ಯಾರ್ಥಿಗಳಿಗಾಗಿ ಆಯೋಜಿಸಿ 15 ದಿನಗಳ ಕಾಲ ನಡೆದ ವಸಂತ ವೇದ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವೇದ ಜ್ಞಾನ ಹಾಗೂ ಬ್ರಾಹ್ಮಣ ಸಂಸ್ಕಾರಗಳನ್ನು ಎಳೆಯ ಪ್ರಾಯದಲ್ಲಿ ಅರಿತುಕೊಂಡಲ್ಲಿ ಮುಂದೆ ಸಂಸ್ಕಾರವಂತ ವ್ಯಕ್ತಿಯಾಗಿ ಬೆಳೆಯಲು ಸಾಧ್ಯವಿರುವ ಕಾರಣ ಎಲ್ಲಾ ವಿದ್ಯಾರ್ಥಿಗಳು ಇಲ್ಲಿ ಪಡೆದ ಜ್ಞಾನವನ್ನು ಸದುಪಯೋಗ ಗಳಿಸಿಕೊಳ್ಳಬೇಕು ಎಂದರು.
ಈ ಸಂದರ್ಭ ಶಿಭಿರದ ಗುರು ಕೊಲಕಾಡಿ ಶ್ರೀವತ್ಸ ಉಪಾದ್ಯಾಯ, ಯುಗಪುರುಷದ ಕೆ.ಭುವನಾಭಿರಾಮ ಉಡುಪ,ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್ ಪುನರೂರು,ವಿಪ್ರ ಸಂಪದ ಪದಾಧಿಕಾರಿಗಳಾದ ಜನಕರಾಜ್,ಸುಧಾಕರ ರಾವ್,ವಿಶ್ವನಾಥ ರಾವ್,ಗಣಪತಿ ಆಚಾರ್ಯ,ರಾಘವೇಂದ್ರ ರಾವ್ ಅತಿಥಿಗಳಾಗಿದ್ದರು.ಜನಕರಾಜ್ ಸ್ವಾಗತಿಸಿದರು,ಸುಧಾಕರ ರಾವ್ ನಿರೂಪಿಸಿದರು,ಗಣಪತಿ ಆಚಾರ್ಯ ವಂದಿಸಿದರು.

Mulki-18051701

Comments

comments

Comments are closed.

Read previous post:
Mulki-13051701
ಜೈನ ಬಸದಿಗಳು ಸಂಸ್ಕೃತಿ ಸಂಸ್ಕಾರದ ಕೇಂದ್ರ

ಮೂಲ್ಕಿ: ಧಾರ್ಮಿಕ ನೆಲೆಯಲ್ಲಿ ಕರಾವಳಿಯ ಜೈನ್ ಬಸದಿಗಳು ನಮ್ಮ ಸಂಸ್ಕೃತಿ ಸಂಸ್ಕಾರವನ್ನು ಪ್ರತಿಬಿಂಬಿಸುವ ಕೇಂದ್ರವಾಗಿದ್ದು ಇದರ ಅಭಿವೃದ್ಧಿ ಹಾಗೂ ಪುರಾತನ ಮಾಹಿತಿಯನ್ನು ಸಂಗ್ರಹಿಸುವ ಮೂಲಕ ಭವಿಷ್ಯದಲ್ಲಿ ನಮ್ಮ ಪರಂಪರೆಯನ್ನು...

Close