ಎಸ್. ಕೆ. ಗೋಲ್ಡ್‌ಸ್ಮಿತ್ ಕಿನ್ನಿಗೋಳಿ ಶಾಖೆ

ಕಿನ್ನಿಗೋಳಿ: ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಎಸ್. ಕೆ. ಜಿ. ಸಂಸ್ಧೆಯು ಪಾರದರ್ಶಕವಾಗಿ ಉತ್ತಮ ಪ್ರಾಮಾಣಿಕ ಸೇವೆ ಗ್ರಾಹಕರಿಗೆ ನೀಡಿದ್ದರಿಂದ ಸಮಾಜದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿ ಇಷ್ಟು ಎತ್ತರಕ್ಕೆ ಬೆಳೆದಿದೆ ಎಂದು ಅರೆಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಶ್ರೀ ಶ್ರೀ ಶಿವಸುಜ್ಞಾನ ತೀರ್ಥ ಮಹಾಸ್ವಾಮೀಜಿಯವರು ಹೇಳಿದರು.
ಶನಿವಾರ ಕಿನ್ನಿಗೋಳಿಯಲ್ಲಿ ಎಸ್. ಕೆ. ಗೋಲ್ಡ್‌ಸ್ಮಿತ್ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ. ಲಿ. ಕಿನ್ನಿಗೋಳಿ ಶಾಖೆಯ ನೂತನ ಸ್ವಂತ ಕಟ್ಟಡ ಉದ್ಘಾಟಿಸಿ ಯುಗಪುರುಷ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದರು. ಕಟಪಾಡಿ ಅನೆಗುಂದಿ ಜಗದ್ಗುರು ಮಹಾಸಂಸ್ಥಾನ ಮಠದ ಶ್ರೀ ಶ್ರೀ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಸೊಸೈಟಿಯ ಭದ್ರತಾ ಕೋಶದ ಉದ್ಘಾಟನೆ ಮಾಡಿ ಮಾತನಾಡಿ ಈ ಸೊಸೈಟಿ ಉತ್ತಮ ಸೇವೆಯ ಮೂಲಕ ರಾಜ್ಯ ಮಟ್ಟದಲ್ಲಿ ಜನಮನ ಗೆದ್ದಿದೆ, ಸಮಾಜದ ಜನರ ಕಷ್ಟಕ್ಕೂ ಸ್ಪಂದನ , ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲು ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಬ್ಯಾಂಕಿಂಗ್ ವ್ಯವಹಾರದ ಪರಿಚಿಯಿಸುವ ಮೂಲಕವಾಗಿ ಅರ್ಥಿಕವಾಗಿ ಸದೃಡರಾಗಿ, ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಉತ್ತಮ ಸಹಕಾರಿ ಸಂಸ್ಥೆ ಎಂಬ ಪ್ರಶಸ್ತಿಗೆ ಭಾಜನರಾದ ಸಂಸ್ಥೆ ಎಂದು ಹೆಗ್ಗಳಿಕೆ ಪಡೆದುಕೊಂಡಿದೆ ಎಂದು ಹೇಳಿದರು. ಎಸ್. ಕೆ. ಜಿ. ಐ. ಕೋ. ಅಪರೇಟಿವ್ ಸೊಸೈಟಿಯ ಅಧ್ಯಕ್ಷ ಬಿ. ಎಂ. ರವೀಂದ್ರ ಆಚಾರ್ಯ ಅಧ್ಯಕ್ಷತೆವಹಿಸಿ ಬ್ಯಾಂಕ್‌ನ ಸಾಧನೆಯ ಮೈಲಿಗಲ್ಲು ಬಗ್ಗೆ ತಿಳಿಸಿ, ಗ್ರಾಹಕರಿಂದಲೇ ಬ್ಯಾಂಕ್ ಯಶಸ್ಸು ಸಾಧಿಸಿದೆ ಎಂದು ಹೇಳಿದರು.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಮಂಗಳೂರಿನ ಧನಂಜಯ ಕುಮಾರ್ ಪಾಲ್ಕೆ , ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ , ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿಲ್ಪಿ ಶಿವಪ್ರಸಾದ್ ಆಚಾರ್ಯ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯೆ ಮೀನಾಕ್ಷಿ , ಕಿನ್ನಿಗೋಳಿ ಜಿಎಸ್‌ಬಿ ಅಸೋಸಿಯೇಶನ್ ಕಾರ್ಯದರ್ಶಿ ಸುರೇಂದ್ರನಾಥ ಶೆಣೈ, ಶಾಖಾ ವ್ಯವಸ್ಥಾಪಕ ವನಮಾಲ ಯು ಆಚಾರ್ಯ, ಬ್ಯಾಂಕ್ ನಿರ್ದೇಶಕ ಸಾವಿತ್ರಿ ಯು ಆಚಾರ್, ಎ. ಆನಂದ ಆಚಾರ್ಯ, ಎಸ್. ರಮೇಶ್ ಆಚಾರ್ಯ, ಕೆ. ರಮೇಶ ಆಚಾರ್ಯ, ಕೆ. ಗೋಪಾಲಕೃಷ್ಣ ಆಚಾರ್ಯ, ವಿ. ಜಯ ಆಚಾರ್ಯ, ಸುಜಾತ ಉಪಸ್ಥಿತರಿದ್ದರು.
ಸಾಧಕರಿಗೆ ಸಮ್ಮಾನ :
ಹಿರಿಯ ರಥ ಶಿಲ್ಪಿ ದಿ. ಬಾಬುರಾಯ ಆಚಾರ್ಯ ಆಶ್ವಥಪುರ ಅವರ ಪರವಾಗಿ ಪುತ್ರನಿಗೆ ಗೌರವಿಸಲಾಯಿತು. ನಿತ್ಯಾನಂದ ಆಚಾರ್ಯ ಉಡುಪಿ, ಗಣಪತಿ ಆಚಾರ್ಯ, ಜನಾರ್ದನ ಆಚಾರ್ಯ, ಶೋಭಾ ಆಚಾರ್ಯ ಬೆಳ್ಮಣ್ಣು ಅವರನ್ನು ಸಮ್ಮಾನಿಸಲಾಯಿತು. ಸಂಸ್ಥೆಯ ಉಪಾಧ್ಯಕ್ಷ ಕೆ. ಯಜ್ಞೇಶ್ವರ ಆಚಾರ್ಯ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಕೆ. ಉಮೇಶ ಆಚಾರ್ಯ ಪ್ರಸ್ತಾವನೆಗೈದರು. ನಿರ್ದೇಶಕರಾದ ಬಕಾಡಿ ಜನಾರ್ದನ ಆಚಾರ್ ಹಾಗೂ ಪಿ. ಉಪೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-19051701

Comments

comments

Comments are closed.

Read previous post:
Mulki-18051701
ರಜಾ ಕಾಲದ ವಸಂತ ವೇದ ಶಿಭಿರ

ಮೂಲ್ಕಿ: ಬೇಸಿಗೆ ರಜಾ ಕಾಲದ ವಸಂತ ವೇದ ಶಿಭಿರಗಳು ವಿದ್ಯಾರ್ಥಿಗಳಿಗೆ ಸಂಸ್ಕೃತ ಹಾಗೂ ವೇದ ಜ್ಞಾನ ಗಳಿಕೆಗೆ ಉತ್ತಮ ಬುನಾದಿಯಂತಾಗುತ್ತದೆ ಎಂದು ಪುನರೂರು ಪ್ರತಿಷ್ಠಾನದ ಜನ ವಿಕಾಸ ಸಮಿತಿಯ...

Close