ಉಳೆಪಾಡಿ ಪ್ರತಿಷ್ಠಾ ವರ್ಧಂತಿ , ಸಾಮೂಹಿಕ ವಿವಾಹ

ಕಿನ್ನಿಗೋಳಿ: ದೇವಸ್ಥಾನಗಳು ಸಂಸ್ಕೃತಿಯ ಪ್ರತೀಕವಾಗಿದ್ದು , ಧಾರ್ಮಿಕ ಆಚರಣೆಯ ಜತೆಗೆ ಸಮಾಜಿಕ ಚಿಂಚನೆಯ , ಸಾಮೂಹಿಕ ವಿವಾಹದಂತಹ ಸಮಾಜದ ಅಭಿವೃದ್ಧಿಯ ಕೆಲಸ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಕಟೀಲು ದೇವಸ್ಥಾನದ ಅರ್ಚಕ ಕಮಲಾದೇವಿ ಪ್ರಸಾದ್ ಆಸ್ರಣ್ಣ ಹೇಳಿದರು.
ಉಳೆಪಾಡಿ ಭಾನುವಾರ ನಡೆದ ಶ್ರೀ ದುರ್ಗಾಪರಮೇಶ್ವರೀ ಮಾಹಮ್ಮಾಯೀ ದೇವಸ್ಥಾನದಲ್ಲಿ 7 ನೇ ವರ್ಷದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ಉಚಿತ ಸಾಮೂಹಿಕ ವಿವಾಹ ಸಂದರ್ಭ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದರು.
ಯು.ಪಿ.ಸಿ.ಎಲ್ ಅದಾನಿ ಗ್ರೂಫ್‌ನ ಕಿಶೋರ್ ಆಳ್ವ, ಮಾತನಾಡಿ ಗ್ರಾಮೀಣ ಪದೇಶದಲ್ಲಿ ದೇವಸ್ಥಾನಗಳು ಇಂತಹ ಸಮಾಜಿಕ ಕೆಲಸ ಶ್ಲಾಘನೀಯ ಇದಕ್ಕೆ ನಮ್ಮ ಸಂಸ್ಥೆಯ ಸಹಕಾರವಿದೆ ಎಂದು ಹೇಳಿದರು.
ಮೂಲ್ಕಿ ಸೀಮೆಯ ಅರಸರಾದ ದುಗ್ಗಣ್ಣ ಸಾಮಂತರ ಅರಸರು, ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಾಮೂಹಿಕ ವಿವಹಾದ ಸಂಚಾಲಕ ಬಳ್ಕುಂಜೆಗುತ್ತು ಡಾ| ಕೃಷ್ಣಕುಮಾರ್ ಶೆಟ್ಟಿ, ಕಾರ್ಯಧ್ಯಕ್ಷ ನಾರಾಯಣ ಶೆಟ್ಟಿ ಉಳೆಪಾಡಿ, ಉದ್ಯಮಿ ಕೆ. ಸುಧಾಕರ ಆಳ್ವ, ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಯುಗಪುರಯಷದ ಭುವನಾಭಿರಾಮ ಉಡುಪ, ಚೇತಾನ ಮೋಹನದಾಸ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭ ತಾಳಿಪಾಡಿ ಮಠದ ಮುಖ್ಯಸ್ಥ ಎಂ. ಚಂದ್ರಶೇಖರ್, ಮೂಕಾಮಬಿಕಾ ದೇವಸ್ಥಾನದ ವಿವೇಕಾನಂದ, ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ವನಿತಾ ಯು ಕೋಟ್ಯಾನ್, ದಾವೂದ್ ಹಕೀಂ, ರಾಧಾಕೃಷ್ಣ ನಾಯಕ್ , ಸುಧಾಕರ ಮೆಸ್ಕಾಂ ಅವರನ್ನು ಗೌರವಿಸಲಾಯಿತು. ದೇವಳದ ಧರ್ಮದರ್ಶಿ ಮೋಹನದಾಸ ಸುರತ್ಕಲ್ ಸ್ವಾಗತಿಸಿದರು. ಅರ್ಪಿತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಜೋಡಿಗಳಾದ ರಮೇಶ – ಸುಂದರಿ, ಉಲ್ಲಾಸ್- ಚಂದ್ರಿಕಾ, ಶೀನ- ಜಾನಕಿ, ಸುರೇಶ್ – ಹರಿಣಿ, ಶಂಕರ- ಸುಮಲತಾ, ವಿಶ್ವನಾಥ ಕುಲಾಲ್- ಪವಿತ್ರಾ, ಪ್ರವೀಣ್ ಭಂಡಾರಿ- ಗೀತಾ

Kinnigoli-19051702

Comments

comments

Comments are closed.

Read previous post:
Kinnigoli-19051701
ಎಸ್. ಕೆ. ಗೋಲ್ಡ್‌ಸ್ಮಿತ್ ಕಿನ್ನಿಗೋಳಿ ಶಾಖೆ

ಕಿನ್ನಿಗೋಳಿ: ದಕ್ಷಿಣ ಕನ್ನಡದ ಕರಾವಳಿ ಭಾಗದಲ್ಲಿ ಎಸ್. ಕೆ. ಜಿ. ಸಂಸ್ಧೆಯು ಪಾರದರ್ಶಕವಾಗಿ ಉತ್ತಮ ಪ್ರಾಮಾಣಿಕ ಸೇವೆ ಗ್ರಾಹಕರಿಗೆ ನೀಡಿದ್ದರಿಂದ ಸಮಾಜದ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿ ಇಷ್ಟು ಎತ್ತರಕ್ಕೆ...

Close