ಕಿನ್ನಿಗೋಳಿ ಉಚಿತ ವೈದ್ಯಕೀಯ ಶಿಬಿರ

ಕಿನ್ನಿಗೋಳಿ: ಒತ್ತಡಗಳ ಜೀವನದಿಂದಾಗಿ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷದಿಂದಿರುವುದು ಖೇದಕರ ಸಂಗತಿ. ಆರೋಗ್ಯದ ಬಗ್ಗೆ ತಿಳುವಳಿಕೆ ಅಗತ್ಯ ಎಂದು ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಮ್ಯಾನೇಜಿಂಗ್ ಟ್ರಸ್ಟಿ ರೆ.ಫಾ. ವಿನ್ಸೆಂಟ್ ಮೊಂತೆರೋ ಹೇಳಿದರು.
ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ, ಮುಂಡ್ಕೂರು ಬಾರ್ಗವ ಜೇಸಿಐ, ಸಂಜೀವಿನಿ ಸಂಸ್ಥೆ, ಕಿನ್ನಿಗೋಳಿ ರೋಟರಿ, ರೋಟರ‍್ಯಾಕ್ಟ್, ಇನ್ನರ್‌ವೀಲ್ ಕ್ಲಬ್ ಹಾಗೂ ಉಜ್ವಲ್ ಸ್ತ್ರೀ ಸಂಘಟನೆಗಳ ನೇತೃತ್ವದಲ್ಲಿ ಮಂಗಳೂರಿನ ಫಾದರ್ ಮುಲ್ಲರ್ಸ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಸಹಯೋಗದಿಂದ ಭಾನುವಾರ ನಡೆದ ಉಚಿತ ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಂಕನಾಡಿ ಫಾದರ್ ಮುಲ್ಲರ್ಸ್ ವೈದ್ಯೆ ಡಾ. ಸೌಮ್ಯಾ, ಕನ್ಸೆಟ್ಟಾ ಆಸ್ಪತ್ರೆಯ ನಿರ್ದೇಶಕಿ ಡಾ.ಜೀವಿತಾ, ಮುಂಡ್ಕೂರು ಭಾರ್ಗವ ಜೇಸಿಐ ಅಧಕ್ಷೆ ರಮ್ಯಾ ರಾವ್, ಕಿನ್ನಿಗೋಳಿ ರೋಟರಿ ನಿಯೋಜಿತ ಅಧ್ಯಕ್ಷೆ ಸೆವರಿನ್ ಲೋಬೋ, ಇನ್ನರ್‌ವೀಲ್ ನಿಯೋಜಿತ ಅಧ್ಯಕ್ಷೆ ರಾಧಾ ಶೆಣೈ, ಸಂಜೀವಿನೀ ಸಂಸ್ಥೆ ಸಂಯೋಜಕಿ ಭಗಿನಿ ಹೋಪ್, ಜೇಸಿಐನ ಅಧಿಕಾರಿ ಸುರೇಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.
ರಮ್ಯಾ ರಾವ್ ಸ್ವಾಗತಿಸಿ, ಸೆವರಿನ್ ಲೋಬೊ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23051702

Comments

comments

Comments are closed.

Read previous post:
Kinnigoli-23051701
ಪುನರೂರು ದೇವಳದಲ್ಲಿ ವಸಂತ ಪೂಜೆ

ಕಿನ್ನಿಗೋಳಿ: ಪುನರೂರು ಶ್ರೀ ವಿಶ್ವನಾಥ ದೇವಳದಲ್ಲಿ ವಿಶೇಷ ವಸಂತ ಪೂಜೆ ನಡೆಯಿತು.

Close