ಕಟೀಲಿನಲ್ಲಿ ಎನ್‌ಸಿಸಿ ಸಿಎಟಿಸಿ ಶಿಬಿರ

ಕಿನ್ನಿಗೋಳಿ: ಉತ್ತಮ ವ್ಯಕ್ತಿಯಾಗಿ ದೇಶ ಸೇವೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಸೈನ್ಯ ಸೇರಲು ಎನ್‌ಸಿಸಿ ಪ್ರೇರಣೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿದರು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ವಿದ್ಯಾಸಂಸ್ಥೆಗಳ ಆವರಣದಲ್ಲಿ ಮಂಗಳವಾರ ನಡೆದ 10ದಿನಗಳ ಎನ್‌ಸಿಸಿ ಸಿಎಟಿಸಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ಶಿಬಿರದಲ್ಲಿ ವಿವಿಧ ಶಾಲೆಗಳ 450 ಎನ್‌ಸಿಸಿ ಕೆಡೆಟ್‌ಗಳು ಭಾಗವಹಿಸಿದ್ದರು.
ಈ ಸಂದರ್ಭ ಕ್ಯಾಂಪ್ ಕಮಾಂಡೆಂಟ್ ಕಮಾಂಡಿಗ್ ಆಫೀಸರ್ ಎಂ.ಸಿ. ಬೆಳ್ಳಿಯಪ್ಪ ಮಂಗಳೂರು ಹಾಗೂ ಕಟೀಲು ದೇವಳ ಪದವಿಪೂರ್ವ ಕಾಲೇಜು ಪ್ರಿನ್ಸಿಪಾಲ್ ಜಯರಾಮ ಪೂಂಜ ಅವರನ್ನು ಸನ್ಮಾನಿಸನಿಸಲಾಯಿತು.
ಕಟೀಲು ದೇವಳ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಸನತ್‌ಕುಮಾರ್ ಶೆಟ್ಟಿ, ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ, ಕಮಾಂಡಿಗ್ ಆಫೀಸರ್ ಉಡುಪಿಯ ವಿಶಾಲ್ ಕುಮಾರ್, ಕಟೀಲು ಪ್ರೌಢಶಾಲಾ ವೈಸ್ ಪ್ರಿನಿಪಾಲ್ ಸೋಮಪ್ಪ ಅಲಂಗಾರು, ಕಟೀಲು ಹಿ.ಪ್ರಾ. ಶಾಲಾ ಮುಖ್ಯ ಶಿಕ್ಷಕಿ ಸರೋಜಿನಿ, ಗೋಪಾಲ ಶೆಟ್ಟಿ, ಎನ್‌ಸಿಸಿ ಫಸ್ಟ್ ಆಫೀಸರ್ ಸಾಯಿನಾಥ ಶೆಟ್ಟಿ, ಅಧಿಕಾರಿಗಳಾದ ವಿನಯ ಚಂದ್ರ, ಅರುಣ್ ಪ್ರಸಾದ್ ರೈ, ಗ್ಲೆನ್ ಲೋಬೋ ಮತ್ತಿತರರು ಉಪಸ್ಥಿತರಿದ್ದರು.

Kinnigoli-25051702

Comments

comments

Comments are closed.

Read previous post:
Kinnigoli-25051701
ಸೇವೆಯೇ ನಮ್ಮ ಧ್ಯೇಯವಾಗಬೇಕು

ಕಿನ್ನಿಗೋಳಿ: ಸೇವೆಯೇ ನಮ್ಮ ಧ್ಯೇಯವಾಗಬೇಕು ಹಾಗಾದಾಗ ನಮ್ಮ ಜೀವನ ಸಾರ್ಥಕ ಸಮಾಜವು ಕೂಡಾ ನಮ್ಮನ್ನು ಗುರುತಿಸುತ್ತದೆ. ಎಂದು ಕನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಡಾ. ಜೀವಿತಾ ಹೇಳಿದರು. ಕಿನ್ನಿಗೋಳಿ ಕನ್ಸೆಟ್ಟಾ...

Close