ಸೇವೆಯೇ ನಮ್ಮ ಧ್ಯೇಯವಾಗಬೇಕು

ಕಿನ್ನಿಗೋಳಿ: ಸೇವೆಯೇ ನಮ್ಮ ಧ್ಯೇಯವಾಗಬೇಕು ಹಾಗಾದಾಗ ನಮ್ಮ ಜೀವನ ಸಾರ್ಥಕ ಸಮಾಜವು ಕೂಡಾ ನಮ್ಮನ್ನು ಗುರುತಿಸುತ್ತದೆ. ಎಂದು ಕನ್ಸೆಟ್ಟಾ ಆಸ್ಪತ್ರೆ ನಿರ್ದೇಶಕಿ ಡಾ. ಜೀವಿತಾ ಹೇಳಿದರು.
ಕಿನ್ನಿಗೋಳಿ ಕನ್ಸೆಟ್ಟಾ ಆಸ್ಪತ್ರೆ ಮತ್ತು ಸಂಜೀವಿನಿ ಸಂಸ್ಥೆ ವತಿಯಿಂದ ಮಂಗಳವಾರ ನಡೆದ ವಿದಾಯ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿರಂತರ ೧೭ ವರ್ಷಗಳಿಂದ ಸೇವಾ ಸಂಸ್ಥೆ ಸಂಜೀವಿನಿಯಲ್ಲಿ ದುಡಿದು ನೀಡಿದ ಸೇವೆ ತೃಪ್ತಿ ತಂದಿದೆ ಎಂದು ಸಂಜೀವಿನಿ ಸಂಸ್ಥೆಯ ಸಮಾಜ ಸೇವಕಿ ಲಲಿತಾ ಬಾಸ್ಕರ್ ವಿದಾಯ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಸಮಾಜ ಸೇವಕಿ ಜಯಲಕ್ಷ್ಮೀ ಅಭಿನಂದನಾ ಭಾಷಣಗೈದರು. ಈ ಸಂದರ್ಭ ವರ್ಗಾವಣೆಗೊಳ್ಳಲಿರುವ ಮೆರಿವೆಲ್ ಕಾನ್ವೆಂಟ್ ನ ಮುಖ್ಯಸ್ಥೆ ಭಗಿನಿ ವಿತಾಲಿಸ್, ಕನ್ಸೆಟ್ಟಾ ಆಸ್ಪತ್ರೆಯ ಸಹಾಯಕ ಆಡಳಿತಾಧಿಕಾರಿ ಭಗಿನಿ ಪ್ಲೋಸ್ಸಿ, ದಾದಿಯರ ಮೆಲ್ವಿಚಾರಕಿ ಭಗಿನಿ ಸೋಫಿಯಾ, ಲ್ಯಾಬ್ ಟೆಕ್ನಿಶನ್ ಭಗಿನಿ ನವ್ಯ ಅವರನ್ನು ಗೌರವಿಸಲಾಯಿತು,
ಕನ್ಸೆಟ್ಟಾ ಆಸ್ಪತ್ರೆಯ ಮಾಜಿ ನಿರ್ದೇಶಕಿ ಡಾ. ಲಿಲಿಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್ ಗುಜರನ್, ಐಕಳ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಪದ್ಮಿನಿ ವಸಂತ್ ಉಪಸ್ಥಿತರಿದ್ದರು.
ಸಂಜೀವಿನಿ ಸಂಸ್ಥೆಯ ಮೇಲ್ವಿಚಾರಕಿ ಭಗಿನಿ ಹೋಪ್ ಸ್ವಾಗತಿಸಿದರು. ದಿನೇಶ್ ಕೆ ವಂದಿಸಿದರು. ಆಶಾಲತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-25051701

Comments

comments

Comments are closed.

Read previous post:
Kinnigoli-24051701
ಕು. ಭಾವನಾ ಭಟ್ – ವಾಯಲಿನ್ ವಾದನ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದಲ್ಲಿ 2018 ರಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಅಂಗವಾಗಿ ದಿನಂಪ್ರತಿ ಸಾಂಸ್ಕೃತಿಕ ಕಾರ್ಯಕ್ರಮಗಳ ಅಂಗವಾಗಿ ಕು. ಭಾವನಾ ಭಟ್ ಅವರಿಂದ ವಾಯಲಿನ್ ವಾದನ...

Close