ಇಂಡಿಯನ್ ಓಪನ್ ಆಫ್ ಸರ್ಫಿಂಗ್

ಇಂಡಿಯನ್ ಓಪನ್ ಆಫ್ ಸರ್ಫಿಂಗ್‍ನ 2ನೇ ಸಂಚಿಕೆಗೆ ಶುಕ್ರವಾರ ನಗರದ ಹೊರವಲಯದ ಸಸಿಹಿತ್ಲು ಬೀಚ್‍ನಲ್ಲಿ ಅದ್ದೂರಿಚಾಲನೆ ನೀಡಲಾಗಿತು.

ಮೂರು ದಿನಗಳ ಈ ಸರ್ಫಿಂಗ್ ಹಬ್ಬ ಮೇ 28ರವರೆಗೆ ನಡೆಯಲಿದ್ದು, ಕರ್ನಾಟಕ ಪ್ರವಾಸೋದ್ಯಮ ಪ್ರವರ್ತಿತ ಕರ್ನಾಟಕ ಸರ್ಫಿಂಗ್ ಹಬ್ಬದಅಂಗವಾಗಿ ಆಯೋಜಿಸಲಾಗಿದೆ. ಈ ಕೂಟಕ್ಕೆ ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಮಾನ್ಯತೆ ನೀಡಿದ್ದು, ಮಂತ್ರ ಸರ್ಫ್ ಕ್ಲಬ್ ಹಾಗೂಕರ್ನಾಟಕ ವಾಟರ್ ಸ್ಪೋಟ್ರ್ಸ್ ಫೆಡರೇಜನ್ ಇತರ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದೆ.

ಅರಣ್ಯ, ಪರಿಸರ ಖಾತೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉತ್ಸವಕ್ಕೆ ಚಾಲನೆ ನೀಡಿದರು. ಮೂಲ್ಕಿ-ಮೂಡಬಿದರೆ ಶಾಸಕ ಕೆ.ಅಭಜಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಇದಕ್ಕೂ ಮುನ್ನ ಸರ್ಫಿಂಗ್ ಸ್ಪರ್ಧೆಗಳಿಗೆ ಕರ್ನಾಟಕ ಸರ್ಕಾರದಪ್ರವಾಸೋದ್ಯಮ ಇಲಾಖೆ ಕಾರ್ಯದರ್ಶಿ ನವೀನ್‍ರಾಜ್ ಸಿಂಗ್ ಚಾಲನೆ ನೀಡಿದರು.

ಈ ಸರ್ಫಿಂಗ್ ಹಬ್ಬದ ಮೊದಲ ದಿನ ಸ್ಪರ್ಧಿಗಳು ಕಠಿಣ ಪರಿಸ್ಥಿತಿಯಲ್ಲಿ ತೆರೆಗಳ ಮೇಲಾಟ ನಡೆಸಬೇಕಾಯಿತು. ಅಮಾವಾಸ್ಯೆ ಕಾರಣದಿಂದತೆರೆಗಳು ಸಾಕಷ್ಟು ಕಡಿಮೆ ಇದ್ದವು. 14ರ ವಯೋಮಿತಿ, 16ರ ವಯೋಮಿತಿ, ಹಿರಿಯರು (23-30), ಮಾಸ್ಟರ್ಸ್ (30ರ ಮೇಲ್ಪಟ್ಟವರು) ಹಾಗೂ ಮುಕ್ತ ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯುತ್ತಿವೆ. ಆರಂಭಿಕ ದಿನ ವಿವಿಧ ವರ್ಗಗಳ ಹೀಟ್ಸ್ ನಡೆಯಿತು. ಮೊದಲ ದಿನದ ಹೀಟ್ಸ್‍ನಲ್ಲಿಜಯ ಸಾಧಿಸಿದ ಸರ್ಫರ್‍ಗಳು ಮುಂದಿನ ಸುತ್ತಿಗೆ ಅರ್ಹತೆ ಪಡೆದರು. ಶನಿವಾರ (ಮೇ 27) ಸೆಮಿಫೈನಲ್ ಹಂತದ ಸ್ಪರ್ಧೆಗಳುನಡೆಯಲಿದ್ದು, ಎಲ್ಲ ವಿಭಾಗಗಳ ಫೈನಲ್ ಭಾನುವಾರ ನಡೆಯಲಿದೆ. ಆರಂಭಿಕ ದಿನ ಮಹಿಳೆಯರ ಸ್ಟ್ಯಾಂಡ್ ಅಪ್ ಪೆಡ್ಲಿಂಗ್ಚಾಂಪಿಯನ್‍ಶಿಪ್ ಕೂಡಾ ಪ್ರಮುಖ ಆಕರ್ಷಣೆಯಾಗಿತ್ತು.

ಎಲ್ಲ ವಿಭಾಗಗಳ ಸ್ಪರ್ಧಿಗಳಿಗೆ 15 ನಿಮಿಷಗಳ ಕಾಲಾವಕಾಶ ನೀಡಲಾಗುತ್ತದೆ. ಈ ಅವಧಿಯಲ್ಲಿ 10 ಅಲೆಗಳನ್ನು ಕ್ಯಾಚ್ ಮಾಡಿಕೊಂಡುತಮ್ಮ ಕೌಶಲಗಳನ್ನು ಪ್ರದರ್ಶಿಸಲು ಅವಕಾಶ ಇರುತ್ತದೆ. ಈ ಪೈಕಿ ಎರಡು ಅಲೆಗಳಲ್ಲಿ ಅವರು ತೋರುವ ಅತ್ಯುತ್ತಮ ಪ್ರದರ್ಶನವನ್ನುತೀರ್ಪುಗಾರರು ಅವರಿಗೆ ಅಂಕ ನೀಡಲು ಪರಿಗಣಿಸುತ್ತಾರೆ. ಸಮುದ್ರದಲ್ಲಿ ಸರ್ಫರ್‍ಗಳು ತೋರುವ ಕ್ಷಮತೆ ಮತ್ತು ಅಲೆಗಳನ್ನು ಕ್ಯಾಚ್ಮಾಡುವಲ್ಲಿ ಅವರ ಚಾಕಚಕ್ಯತೆಯ ಆಧಾರದಲ್ಲಿ ಅಂಕಗಳನ್ನು ನೀಡಲಾಗುತ್ತದೆ.

ದಿನದ ಆರಂಭದಲ್ಲಿ ಮಾಸ್ಟರ್ಸ್ ವಿಭಾಗದ ಸ್ಪರ್ಧೆ ನಡೆಯಿತು. 9 ಸರ್ಫರ್‍ಗಳು ಈ ವರ್ಗದಲ್ಲಿ ಭಾವಹಿಸಿದ್ದರು. ಈ ಪೈಕಿ ಆರು ಮಂದಿಸೆಮಿಫೈನಲ್ ಹಂತಕ್ಕೆ ಮುನ್ನಡೆದರು. ಅವರುಗಳೆಂದರೆ ಮೂರ್ತಿ ಮೇಘವನ್, ಸಂದೀಪ್ ಸ್ಯಾಮ್ಯುಯೆಲ್, ಮುಖೇಶ್ ಪಂಜನಾಥನ್, ಎ.ವೆಂಟಕೇಶನ್, ವೇಲುಮುರುಗನ್, ವೆಂಕಟ್ ಕ್ವೇರೆ.

ಹಿರಿಯರ ವಿಭಾಗದಲ್ಲಿ 26 ಸರ್ಫರ್‍ಗಳು ಪಾಲ್ಗೊಂಡಿದ್ದರು. ಈ ಪೈಕಿ 15 ಮಂದಿ ಎರಡನೇ ಸುತ್ತಿಗೆ ಅರ್ಹತೆ ಪಡೆದರು. 13 ಸರ್ಫರ್‍ಗಳುಫ್ರಾನ್ಸ್, ಮಾಲ್ಡೀವ್ಸ್, ಮಡಗಾಸ್ಕರ್ ಹಾಗೂ ಭಾರತದ ವಿವಿಧ ರಾಜ್ಯಗಳಿಂದ ಆಗಮಿಸಿದ್ದರು. ಫ್ರಾನ್ಸ್‍ನ ಪ್ರೆಸ್‍ವೆಲ್ ಫಯಾನ್ ಹಾಗೂಮಾಲ್ಡೀವ್ಸ್‍ನ ಇಸ್ಮಾಯಿಲ್ ಮಿಗ್‍ಲಾಲ್ ಮತ್ತು ಅಮ್ಮಾಡೆ ಸೆಮಿಫೈನಲ್ ತಲುಪಿದ್ದಾರೆ. ಭಾರತದ ಧರಣಿ ಸೆಲ್ವಕುಮಾರ್, ಮಣಿಕಂಠನ್ಅಪ್ಪು, ರಾಹುಲ್ ಗೋವಿಂದ್, ಶೇಖರ್ ಪಿಚ್ಚೈ ಕೂಡಾ ಸೆಮಿಫೈನಲ್ ಹಂತಕ್ಕೆ ಮುನ್ನಡೆದಿದ್ದಾರೆ.

14 ವರ್ಷ ವಯೋಮಿತಿ ವಿಭಾಗದಲ್ಲಿ, 24 ಮಂದಿ ಪಾಲ್ಗೊಂಡಿದ್ದಾರೆ. ಈ ಪೈಕಿ 11 ಮಂದಿ ಮುಂದಿನ ಸುತ್ತು ಪ್ರವೇಶಿಸಿದ್ದಾರೆ. ಇವರಲ್ಲಿತಯೀಂಗ್ ಅರುಣ್, ಚಾಂದ್, ಸುಬ್ರಮಣಿ ಮುನಿಯನ್, ಸೆಲ್ವ ಮುನಿಯನ್, ಮಂಜು, ಸುರಭಿ ಕೃಷ್ಣನ್, ಅಖಿಲನ್, ಓಕಾಂರ್ ಭಟ್,ಶ್ರೀಕಾಂತ್, ಅಬ್ದುಲ್ ರಜಾಕ್, ಜಮಾಲುದ್ದೀನ್ ಮತ್ತು ದೀಕ್ಷಿತ್ ಭಾಸ್ಕರ್ ಸೇರಿದ್ದಾರೆ.

16 ವರ್ಷ ವಯೋಮಿತಿಯ ವರ್ಗದಲ್ಲಿ 24 ಸರ್ಫರ್‍ಗಳ ಪೈಕಿ 11 ಮಂದಿ ಮುಂದಿನ ಸುತ್ತಿಗೆ ಅರ್ಹತೆ ಪಡೆದಿದ್ದಾರೆ. ಸಂಜಯ್ ಸೆಲ್ವಮಣಿ, ಹರೀಶ್ ಮುತ್ತು, ವಿಶಾಲ್ ಮೆಂಡನ್, ಸುಬ್ರಮಣಿ ಮುಂಜನ್, ಸುನೀಲ್ ದಯಾಳನ್, ಕೀರ್ತಿ ಮುನುಸ್ವಾಮಿ, ನಿತೀಶ್ ವರುಣ್ತಿರುವೆಂಗಡಂ, ಅಜೀಶ್ ಅಲಿ, ಸಂತೋಷನ್, ಸಂತೋಕ್ ಉಮರ್, ಶಿವರಾಜ್ ಟೈಬು, ಮಣಿಕಂಠನ್ ಎಂ.

ಸ್ಟ್ಯಾಂಡ್ ಅಪ್ ಪೆಡಲಿಂಗ್ ಸ್ಪರ್ಧೆಯಲ್ಲಿ ಆರು ಮಹಿಳೆಯರು ಪಾಲ್ಗೊಂಡಿದ್ದರು. ಭಾರತದ ಅಗ್ರಗಣ್ಯ ಸ್ಟ್ಯಾಂಡ್ ಅಪ್ ಪೆಡ್ಲರ್ ಮತ್ತು ಸ್ಥಳೀಯಹುಡುಗಿ ತನ್ವಿ ಜಗದೀಶ್ ಚಾಂಪಿಯನ್ ಆಗಿ ಹೊರಹೊಮ್ಮಿದರು. ಹರ್ಷಿತಾ ಆಚಾರ್ ಎರಡನೇ ಹಾಗೂ ವಿಲಾಸಿನಿ ಸುಂದರ್ ಮೂರನೇಸ್ಥಾನ ಗಳಿಸಿದರು.

ಸಸಿಹಿಗ್ಲು ಭೀಚಿನಲ್ಲಿ ಶುಕ್ರವಾರ ಹಬ್ಬದ ವಾತಾವರಣ ಕಂಡುಬಂತು. ಸ್ಥಳೀಯರು ಸರ್ಫಿಂಗ್ ಸ್ಪರ್ಧೆಯನ್ನು ಆಸ್ವಾದಿಸಿದರೆ, ವಿವಿಧ ಡಾನ್ಸ್ಗ್ರೂಪ್‍ಗಳು ಹಾಗೂ ಸಾಹಸ ಕ್ರೀಡೆಗಳಾದ ಸ್ಕೇಟ್‍ಬೋರ್ಡಿಂಗ್ ಹಾಗೂ ಸ್ಲೇಕ್‍ಲೈನಿಂಗ್ ಕ್ರೀಡೆಗಳು ಕ್ರೀಡಾಪ್ರೇಮಿಗಳಿಗೆ ರೋಮಾಂಚನನೀಡಿದವು.

ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಟಿಟಿ ಗ್ರೂಪ್ ಆಫ್ ಕಂಪನೀಸ್ ಮತ್ತು ಕಾಕ್ಸ್ ಅಂಡ್ ಕಿಂಗ್ಸ್‍ನ ಟ್ರಿಪ್ 360 ಎರಡನೇ ಸಂಚಿಕೆಯಇಂಡಿಯನ್ ಓಪಲ್ ಆಫ್ ಸರ್ಫಿಂಗ್‍ಗೆ ಪ್ರಾಯೋಜಕತ್ವ ವಹಿಸಿವೆ.

Sasihithlu-27051701 Sasihithlu-27051702 Sasihithlu-27051703Sasihithlu-270517012 Sasihithlu-27051706 Sasihithlu-27051707 Sasihithlu-27051708 Sasihithlu-27051709 Sasihithlu-270517010 Sasihithlu-270517011

Comments

comments

Comments are closed.

Read previous post:
Kinnigoli-25051702
ಕಟೀಲಿನಲ್ಲಿ ಎನ್‌ಸಿಸಿ ಸಿಎಟಿಸಿ ಶಿಬಿರ

ಕಿನ್ನಿಗೋಳಿ: ಉತ್ತಮ ವ್ಯಕ್ತಿಯಾಗಿ ದೇಶ ಸೇವೆಯಲ್ಲಿ ಎಲ್ಲರೂ ಕೈಜೋಡಿಸಬೇಕು. ಸೈನ್ಯ ಸೇರಲು ಎನ್‌ಸಿಸಿ ಪ್ರೇರಣೆ ಎಂದು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ನಿಕ್ ಹೇಳಿದರು. ಕಟೀಲು ಶ್ರೀ...

Close