ಶ್ರೇಯೋಭಿವೃದ್ಧಿ ನಿಧಿಯಿಂದ ಸಹಾಯಧನ-ಗಂಗಯ್ಯ ಶೆಟ್ಟಿ

ಕಿನ್ನಿಗೋಳಿ : ಕಟೀಲು ಕ್ಷೇತ್ರದ ಮೇಳಗಳ ತಿರುಗಾಟದ ಕೊನೆಯ ಸೇವೆಯಾಟದ ಸಂದರ್ಭ ಕಟೀಲು ಮೇಳದಲ್ಲಿ ನಾಲ್ಕು ದಶಕಗಳಿಂದ ಖ್ಯಾತ ಕಲಾವಿದರಾಗಿದ್ದು, ಇತ್ತೀಚಿಗೆ ರಂಗಸ್ಥಳದಲ್ಲೇ ನಿಧನರಾದ ಗೇರುಕಟ್ಟೆ ಗಂಗಯ್ಯ ಶೆಟ್ಟಿ ಅವರ ಕುಟುಂಬಕ್ಕೆ ಮೇಳಗಳ ಕಲಾವಿದರ ಶ್ರೇಯೋಭಿವೃದ್ಧಿ ನಿಧಿಯಿಂದ ಕಟೀಲು ಯಕ್ಷಧರ್ಮಬೋಧಿನೀ ಟ್ರಸ್ಟ್ ಹಾಗೂ ವಿವಿಧ ಯಕ್ಷಗಾನಾಭಿಮಾನಿಗಳ ಸಹಾಯಧನವನ್ನು ಒಟ್ಟುಗೂಡಿಸಿ ರೂ. 5ಲಕ್ಷವನ್ನು ಗಂಗಯ್ಯ ಶೆಟ್ಟಿ ಅವರ ಧರ್ಮಪತ್ನಿ ಕಮಲಾ ಅವರಿಗೆ ಕಟೀಲು ದೇಗುಲದ ಮೊಕ್ತೇಸರ ವಾಸುದೇವ ಆಸ್ರಣ್ಣ ಹಸ್ತಾಂತರಿಸಿದರು.
ಈ ಸಂದರ್ಭ ಕಟೀಲು ದೇವಳ ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಮೇಳಗಳ ಸಂಚಾಲಕ ಕಲ್ಲಾಡಿ ದೇವೀಪ್ರಸಾದ ಶೆಟ್ಟಿ, ಹಿರಿಯ ಕಲಾವಿದ ಸುಣ್ಣಂಬಳ ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-26051701

Comments

comments

Comments are closed.

Read previous post:
Sasihithlu-270517012
ಇಂಡಿಯನ್ ಓಪನ್ ಆಫ್ ಸರ್ಫಿಂಗ್

ಇಂಡಿಯನ್ ಓಪನ್ ಆಫ್ ಸರ್ಫಿಂಗ್‍ನ 2ನೇ ಸಂಚಿಕೆಗೆ ಶುಕ್ರವಾರ ನಗರದ ಹೊರವಲಯದ ಸಸಿಹಿತ್ಲು ಬೀಚ್‍ನಲ್ಲಿ ಅದ್ದೂರಿಚಾಲನೆ ನೀಡಲಾಗಿತು. ಮೂರು ದಿನಗಳ ಈ ಸರ್ಫಿಂಗ್ ಹಬ್ಬ ಮೇ 28ರವರೆಗೆ...

Close