ಸಸಿಹಿತ್ಲು ಸರ್ಫಿಂಗ್ ತಾಣದಲ್ಲಿ ಖಾದ್ಯದ ಸ್ಟಾಲ್‌

ಕಿನ್ನಿಗೋಳಿ: ಬೋರ್ಗರೆಯುವ ಕರಾವಳಿ ಕಡಲಿನ ಅಲೆಗಳಿಗೆ ಎದೆಗುಂದದೆ ಅಲೆಗಳೊಂದಿಗೆ ಸೆಣಸಾಟ ನಡೆಸಿ ಮುಂದಿನ ಸುತ್ತಿನ ಭರವಸೆಯಲ್ಲಿ ಸ್ಪರ್ಧಿಗಳಿದ್ದರೆ, ಕಡಲ ತಟದಲ್ಲಿ ಶುಚಿ ರುಚಿಯಾದ ಅಪ್ಪಟ ದೇಶೀಯ ಊಟವನ್ನು ಸವಿಯುತ್ತಿದ್ದ ಪ್ರವಾಸಿಗರು ಅವರೊಂದಿಗೆ ಸ್ಪರ್ಧಾಳುಗಳು ರುಚಿ ಸವಿಯುತ್ತಿರುವುದು ಹಳೆಯಂಗಡಿ ಗ್ರಾಮ ಪಂಚಾಯಿತಿ ವ್ಯಪ್ತಿಯ ಸಸಿಹಿತ್ಲು ಮುಂಡಾ ಬೀಚಿನಲ್ಲಿ ನಡೆಯುತ್ತಿರುವ ಒಂಡಿಯನ್ ಓಪನ್ ಸರ್ಫಿಂಗ್ ಕೂಟದಲ್ಲಿ ಕಂಡು ಬರುತ್ತಿತ್ತು.
ಸಸಿಹಿತ್ಲು ಬೀಚ್ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಒಟ್ಟು 15 ಸ್ಟಾಲ್‌ಗಳನ್ನು ಸರ್ಫಿಂಗ್ ವೀಕ್ಷಣೆಗೆ ಹಾಗೂ ಭಾಗವಹಿಸಲು ಬಂದಂತಹ ಸ್ಪರ್ಧಾಳುಗಳ ದಾಹ ತಣಿಸಲು ಬಗೆ ಬಗೆಯ ತಿಂಡಿ ತಿನಿಸುಗಳನ್ನು ತೆರೆದಿಟ್ಟಿದೆ. ಸ್ಥಳೀಯರಿಗೆ 6 ಸ್ಟಾಲ್‌ಗಳನ್ನು ಮೀಸಲಿಟ್ಟಿದ್ದು ಅದರಲ್ಲಿ ಮೀನುಗಾರರ ಸಂಘ, ಮಹಿಳಾ ಮೊಗವೀರರ ಸಂಘ, ಬಿಲ್ಲವ ಸಮಾಜದವರಿಗೆ ಹಾಗೂ ಅಯ್ಯಪ್ಪ ಸ್ವಾಮಿಯ ಸಂಸ್ಥೆಯೊಂದಕ್ಕೆ ಉಚಿತವಾಗಿ ಹಂಚಲಾಗಿದ್ದು ಜನರಿಗೆ ಕೈಗೆಟಕುತ್ತಿರುವ ಸ್ಪರ್ಧಾತ್ಮಕ ದರದಲ್ಲಿ ವಿವಿಧ ಖಾದ್ಯಗಳು ವಿಶೇಷವಾಗಿ ಮೀನುಗಳ ಖಾದ್ಯಗಳು ಖಾದ್ಯ ಪ್ರಿಯರ ಮನ ತಣಿಸಿದೆ.
ಕರಾವಳಿ ಸೊಬಗಿನ ಮನೆ ಊಟದಂತೆ ಗಂಜಿ ಗೊಲಾಯಿತರು ಚಟ್ನಿ, ಒಣ ಮೀನಿನ ಪದಾರ್ಥ, ತುಳುನಾಡಿನ ಪುಂಡಿ ಗಸಿ, ನೀರ್ ದೋಸೆ, ಬೇಯಿಸಿದ ಮೊಟ್ಟೆ, ಗೋಳಿ ಬಜೆ, ಪೋಡಿ, ಮರುವಾಯಿ ಅಡ್ಯ, ಮರುವಾಯಿ ಸುಕ್ಕ, ಮೀನು ಗಸಿ ಮಸಲಾ, ಬಂಗುಡೆ ಪ್ರೈ, ಬೊಂಡಾಸ್ ಸುಕ್ಕ, ಜೆಂಜಿ ಗಸಿ ಸುಕ್ಕ, ಡಿಸ್ಕೋ ಮೀನು ಪ್ರೈ, ಬಟಾಟೆ ಬಟಾಣಿ ಗಸಿ, ಕೋಳಿ ಖಾದ್ಯಗಳು ಮತ್ತಿತರ ಸ್ವಾದಿಷ್ಟ ತಿನಿಸುಗಳು, ಚಹಾ ಕಾಫಿ, ಕಬ್ಬಿನ ರಸ, ಸೋಡಾ ಶರಬತ್, ತಂಪು ಪಾನೀಯ, ಐಸ್‌ಕ್ರೀಂ, ಪಪ್ಸ್, ಕೇಕ್, ಚರುಮುರಿ, ಮಾವಿನ ಹಣ್ಣು, ಚೈನೀಸ್, ನೂಡಲ್ಸ್, ಮಾಂಸಹಾರಿ ಸಸ್ಯಹಾರಿ ಎಲ್ಲಾ ವರ್ಗದ ಜನರನ್ನು ಆಕರ್ಷಿಸುತ್ತಿತ್ತು.
ಮಹಿಳೆಯರೇ ಮುಂದಾಳುತ್ವ ವಹಿಸಿದ್ದ ಕದಿಕೆ ಮೊಗವೀರ ಮಹಿಳಾ ಸಭಾ ಸಸಿಹಿತ್ಲು ಹಾಗೂ ಬಿರುವಾಸ್ ಪುಡ್ ಪಾಯಿಂಟ್ ಸಾರ್ವಜನಿಕರ ಗಮನ ಸೆಳೆದಿದೆ.

ದೇಶ ವಿದೇಶದಿಂದ ಬಂದವರು ಕುತೂಹಲದಿಂದ ನಮ್ಮ ಸ್ವದೇಶಿ ಖಾದ್ಯವನ್ನು ಸವಿದು ಇಲ್ಲಿನ ಎಲ್ಲಾ ವ್ಯವಸ್ಥೆಗೆ ಹರ್ಷಪಟ್ಟಿದ್ದಾರೆ. ಸ್ವಚ್ಚತೆಗೂ ಎಲ್ಲಾ ಅಂಗಡಿಯವರು ಗಮನ ನೀಡಿದ್ದಾರೆ
ವನಜಾ ಕರ್ಕೇರ
ಕದಿಕೆ ಮೊಗವೀರ ಮಹಿಳಾ ಸಭಾ ಸಸಿಹಿತ್ಲು ಹಿರಿಯ ಸದಸ್ಯೆ

ಹಳೆಯಂಗಡಿ ಗ್ರಾಮ ಪಂಚಾಯಿತಿ ಸ್ವಚ್ಚತೆಗೆ ತುಂಬಾ ಒತ್ತು ನೀಡುತ್ತದೆ ಮುಂದಿನ ದಿನಗಳಲ್ಲಿ ಉತ್ಕಷ್ಟ್ರ ಮಟ್ಟದ ಸೇವೆ ಹಾಗೂ ಮಾದರಿ ಬೀಚ್ ಮಾಡಲು ಸರಕಾರದೊಂದಿಗೆ ಕೈ ಜೋಡಿಸಿ ಶ್ರಮಿಸಲಾಗುತ್ತದೆ. ಈಗಾಗಲೇ ಶಾಸಕರ ಮುಖಾಂತರ ಪ್ರವಾಸೋಧ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಬೀಚ್ ಅಭಿವೃದ್ಧಿ ಬಗ್ಗೆ ಮನವಿ ನೀಡಲಾಗಿದೆ.
ವಸಂತ್ ಬರ್ನಾಡ್
ಬೀಚ್ ಅಭಿವೃದ್ಧಿ ಸಮಿತಿ ಅಧ್ಯಕ್ಷರು

Kinnigoli-27051704 Kinnigoli-27051705

 

Comments

comments

Comments are closed.