ವೀರಮಾರುತಿ ವ್ಯಾಯಾಮ ಶಾಲೆ-ಪುಸ್ತಕ ವಿತರಣೆ

ಕಿನ್ನಿಗೋಳಿ: ಸಂಘ ಸಂಸ್ಥೆಗಳು ಶಿಕ್ಷಣಕ್ಕೆ ಸಹಕಾರ ಪ್ರೋತ್ಸಾಹ, ಅರ್ಹರಿಗೆ ಸಹಾಯ ಹಸ್ತ ನೀಡಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ಶ್ಲಾಘನೀಯ ಎಂದು ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿ ರಾಜರತ್ನಪುರದ ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲಾ ಆಶ್ರಯದಲ್ಲಿ ಪರಿಸರದ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬರೆಯುವ ಪುಸ್ತಕ ವಿತರಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಷ್ಟ್ರಮಟ್ಟದ ಕ್ರೀಡಾ ಪಟು ವಿಜಯಕಾಂಚನ್, ಮಂಜುನಾಥ ಮಲ್ಯ , ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸರೋಜಿನಿ ಎಸ್. ಗುಜರನ್, ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಸಾಲಿನ್ಸ್ , ಭ್ರಾಮರೀ ಮಹಿಳಾ ಸಮಾಜದ ಅಧ್ಯಕ್ಷೆ ರೇವತಿ ಪುರುಷೋತ್ತಮ , ಕಿಲ್ಪಾಡಿ ಗ್ರಾಮ ಪಂಚಾಯಿತಿ ಸದಸ್ಯ ನಾಗರಾಜ ಕುಬೆವೂರು, ಆದರ್ಶ ಬಳಗದ ಅಧ್ಯಕ್ಷ ದಾಮೋದರ ಶೆಟ್ಟಿ ಕೊಡೆತ್ತೂರು, ಉದ್ಯಮಿ ಕೇಶವ ಸಂಗಮ್, ರಾಜರತ್ನಪುರ ಬಾಲಗಣೇಶೋತ್ಸವ ಸಮಿತಿ ಅಧ್ಯಕ್ಷ ವಿನ್ಸಂಟ್ ರೊಡ್ರಿಗಸ್, ಬಸ್ಸು ನಿರ್ವಾಹಕರ ಸಂಘದ ಭಾಸ್ಕರ ಪೂಜಾರಿ, ಹರಿಪ್ರಸಾದ್ ಆಚಾರ್ಯ, ಬೇಬಿ ಕೆಮ್ಮಡೆ, ಮೋನಪ್ಪ , ಅನುಷಾ ಕೊಡೆತ್ತೂರು ಮತ್ತಿತರರು ಉಪಸ್ಥಿತರಿದ್ದರು.
ವೀರಮಾರುತಿ ವ್ಯಾಯಾಮ ಶಾಲೆ ಅಧ್ಯಕ್ಷ ಈಶ್ವರ್ ಕಟೀಲು ಪ್ರಸ್ತಾವನೆಗೈದರು. ಕೇಶವ ಕರ್ಕೇರಾ ಸ್ವಾಗತಿಸಿದರು. ಮನೋಜ್ ಕಾರ್ಯಕ್ರಮ ನಿರೂಪಿಸಿದರು. 250ಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಯಿತು.

Kinnigoli-29051705

Comments

comments

Comments are closed.

Read previous post:
Kinnigoli-27051704
ಸಸಿಹಿತ್ಲು ಸರ್ಫಿಂಗ್ ತಾಣದಲ್ಲಿ ಖಾದ್ಯದ ಸ್ಟಾಲ್‌

ಕಿನ್ನಿಗೋಳಿ: ಬೋರ್ಗರೆಯುವ ಕರಾವಳಿ ಕಡಲಿನ ಅಲೆಗಳಿಗೆ ಎದೆಗುಂದದೆ ಅಲೆಗಳೊಂದಿಗೆ ಸೆಣಸಾಟ ನಡೆಸಿ ಮುಂದಿನ ಸುತ್ತಿನ ಭರವಸೆಯಲ್ಲಿ ಸ್ಪರ್ಧಿಗಳಿದ್ದರೆ, ಕಡಲ ತಟದಲ್ಲಿ ಶುಚಿ ರುಚಿಯಾದ ಅಪ್ಪಟ ದೇಶೀಯ ಊಟವನ್ನು ಸವಿಯುತ್ತಿದ್ದ...

Close