ಪಾಂಡಿಚೇರಿ ಮುಖ್ಯಮಂತ್ರಿ : ಕಟೀಲಿಗೆ ಭೇಟಿ

ಕಿನ್ನಿಗೋಳಿ: ಪಾಂಡೆಚೇರಿ(ಪುದುಚೇರಿ) ಮುಖ್ಯಮಂತ್ರಿ ಕೆ.ವಿ. ನಾರಾಯಣಸ್ವಾಮಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು.
ಚಿನ್ನದ ವಸಂತ ಮಂಟಪ, ಚಿನ್ನದ ರಥವನ್ನು ವೀಕ್ಷಿಸಿದ ಅವರು ದೇಗುಲದ ಎದುರು ಮಕ್ಕಳಿಗೆ ಅನ್ನ ಪ್ರಾಶನ ಮಾಡಿಸುತ್ತಿರುವುದನ್ನು ಕಂಡು ಆ ಬಗ್ಗೆ ಮಾಹಿತಿ ಕೇಳಿ ಪಡೆದರು. ಬಳಿಕ ಅನ್ನಪ್ರಸಾದ ಸ್ವೀಕರಿಸಿ ತೆರಳಿದರು.
ಮೊಕ್ತೇಸರರಾದ ಕೊಡೆತ್ತೂರುಗುತ್ತು ಸನತ್‌ಕುಮಾರ್ ಶೆಟ್ಟಿ, ಅರ್ಚಕರಾದ ಅನಂತ ಪದ್ಮನಾಭ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ದೇಗುಲದ ಪ್ರಬಂಧಕ ತಾರಾನಾಥ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-300517010 Kinnigoli-300517011

Comments

comments

Comments are closed.

Read previous post:
Kinnigoli-30051709
ಕುಡಿಯುವ ನೀರಿನ ಬಗ್ಗೆ ಅಧ್ಯಯನ

ಕಿನ್ನಿಗೋಳಿ: ಆಂದ್ರ ಪ್ರದೇಶದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಅಧ್ಯಯನ ತಂಡವು ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಕುಡಿಯುವ ನೀರಿನ ಬಗ್ಗೆ ಅಧ್ಯಯನ ನಡೆಸಿದರು. ಕಿನ್ನಿಗೋಳಿ ಗ್ರಾಮ...

Close