ಕುಡಿಯುವ ನೀರಿನ ಬಗ್ಗೆ ಅಧ್ಯಯನ

ಕಿನ್ನಿಗೋಳಿ: ಆಂದ್ರ ಪ್ರದೇಶದ ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಅಧ್ಯಯನ ತಂಡವು ಕಿನ್ನಿಗೋಳಿ ಗ್ರಾಮ ಪಂಚಾಯಿತಿಗೆ ಸೋಮವಾರ ಭೇಟಿ ನೀಡಿ ಕುಡಿಯುವ ನೀರಿನ ಬಗ್ಗೆ ಅಧ್ಯಯನ ನಡೆಸಿದರು. ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ, ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮಾಹಿತಿ ನೀಡಿದರು. ಆಂದ್ರ ಪ್ರದೇಶದ ಜಿಲ್ಲಾ ಪಂಚಾಯಿತಿ ಅಧ್ಯಯನ ತಂಡದ ಅಧಿಕಾರಿಗಳಾದ ಎಮ್. ಶ್ರೀನಿವಾಸ್, ಇಂಜಿನಿಯರ್ ಎನ್. ಕಾಂತಾರಾಜು, ಅಧಿಕಾರಿ ಸತ್ತಾರ್ ಹುಸೇನ್, ದ. ಕ. ಜಿಲ್ಲಾ ಪಂಚಾಯಿತಿ ಹಿರಿಯ ಅಧಿಕಾರಿ ದಯಾನಂದ ನಾಯಕ್ , ಜಿಲ್ಲಾಪಂಚಾಯಿತಿ ಕಿರಿಯ ಅಭಿಯಂತಕರು ವಿಶ್ವನಾಥ್, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.

Kinnigoli-30051709

Comments

comments

Comments are closed.

Read previous post:
Kinnigoli-30051708
ಪಿ. ರಮೇಶ್ ಕಾಮತ್ ಕೆಂಚನಕೆರೆ

ಕಿನ್ನಿಗೋಳಿ: ಕೆಂಚನಕೆರೆ ಪಿ. ರಮೇಶ್ ಕಾಮತ್ ಹೃದಯಾಘಾತದಿಂದ ಮಂಗಳವಾರ ನಿಧನ ಹೊಂದಿದರು. ಮುಲ್ಕಿ ಲಯನ್ಸ್ ಕ್ಲಬ್ ಮಾಜಿ ಸದಸ್ಯ, ಡಾ. ಎಮ್. ಸಿ. ಮೋದಿ ಅವರ ಉಚಿತ ಕಣ್ಣಿನ...

Close