ಹಟ್ಟಿಗೆ ಆಕಸ್ಮಿಕ ಬೆಂಕಿ ಒಂದು ಜಾನುವಾರು ಸಾವು

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ (ಕಜೆಗುರಿ) ಬಳಿ ರೊನಾಲ್ಡ್ ಅರಾಹ್ನ ಎಂಬುವರಿಗೆ ಸೇರಿದ ದನದ ಹಟ್ಟಿಗೆ ಬುಧವಾರ ತಡ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಒಂದು ಹಸು ಸಾವನ್ನಪ್ಪಿದೆ ಹಾಗೂ ಇನ್ನೊಂದು ಗಂಭೀರ ಗಾಯಗೊಂಡಿದೆ.
ರಾತ್ರಿ ಸುಮಾರು 11 ಗಂಟೆಗೆ ರೊನಾಲ್ಡ್ ಅರಾಹ್ನರವರ ಮನೆಯ ಪಕ್ಕದಲ್ಲೇ ಇರುವ ಸ್ನಾನದ ಕೋಣೆ ಹಾಗೂ ಅದಕ್ಕೆ ತಾಗಿಕೊಂಡೇ ದನದ ಹಟ್ಟಿ ಇದ್ದು, ಬೆಂಕಿಯ ಕಿಡಿ ದನದ ಹಟ್ಟಿಗೆ ಆಕಸ್ಮಿಕವಾಗಿ ತಗುಲಿದೆ. ಕೂಡಲೇ ಎಚ್ಚೆತ್ತ ರೊನಾಲ್ಡ್ ಆದಷ್ಟು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಮೂಡಬಿದ್ರೆ ಅಗ್ನಿಶಾಮಕ ದಳ ಬಂದು ಬೆಂಕಿಯನ್ನು ನಂದಿಸಿದರೂ ಒಂದು ದನ ಮೃತಪಟ್ಟಿದ್ದು ಸುಮಾರು ಒಂದುವರೆ ಲಕ್ಷ ರೂ.ನಷ್ಟ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ರೊನಾಲ್ಡ್ ಅರಾಹ್ನ ಕೂಲಿ ಹಾಗು ಕೃಷಿ ಕೆಲಸ ಮಾಡುತ್ತಿದ್ದು ಜೀವನಾಪಯೋಗಕ್ಕೆ ದನವನ್ನು ಸಾಕುತ್ತಿದ್ದರು. ಕಂದಾಯ ಇಲಾಖಾಕಾರಿಗಳು, ಐಕಳ ಗ್ರಾಮ ಪಂಚಾಯಿತಿ ಅಕಾರಿಗಳು ಭೇಟಿನೀಡಿ ಪರಿಶೀಲಿಸಿ ತನಿಖೆ ನಡೆಸುತ್ತಿದ್ದಾರೆ.

Kinnigoli-02061707 Kinnigoli-02061708

Comments

comments

Comments are closed.

Read previous post:
Kinnigoli-02061701
ರಾಷ್ಟ್ರಮಟ್ಟದ ಪ್ರತಿಭೆಗಳಿಗೆ ಗೌರವ

ಕಿನ್ನಿಗೋಳಿ: ಕಿನ್ನಿಗೋಳಿ ರಾಜರತ್ನಪುರದ ಕಿನ್ನಿಗೋಳಿ ವೀರಮಾರುತಿ ವ್ಯಾಯಾಮ ಶಾಲಾ ಆಶ್ರಯದಲ್ಲಿ ಸಾಧಕ ವಿದ್ಯಾರ್ಥಿಗಳಾದ ರಾಷ್ಟ್ರಮಟ್ಟದ ಪ್ರತಿಭೆಗಳಾದ ಅನನ್ಯ, ರಿಷಬ್, ಪ್ರತಿಕ್ಷಾ ಅವರನ್ನು ಗೌರವಿಸಲಾಯಿತು. ಯುಗಪುರುಷ ಪ್ರಧಾನ ಸಂಪಾದಕ...

Close