ಕಿನ್ನಿಗೋಳಿ: ಸಹಕಾರಿ ಸಂಘ ವಿದಾಯ ಕೂಟ

ಕಿನ್ನಿಗೋಳಿ : ಕಿನ್ನಿಗೋಳಿ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕಳೆದ ೩೫ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಹೊನ್ನಮ್ಮ ಶೆಟ್ಟಿ ಅವರ ವಿದಾಯ ಕೂಟ ಬುಧವಾರ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು. ಸಹಕಾರಿ ಸಂಘದ ಅಧ್ಯಕ್ಷ ಲವ ಶೆಟ್ಟಿ ಸಭೆಯ ಅಧ್ಯಕ್ಷತೆವಹಿಸಿದ್ದರು. ಸಂಸ್ಥೆಯ ವತಿಯಿಂದ ಚಿನ್ನದ ನಾಣ್ಯ ಕೊಡುಗೆಯಾಗಿನೀಡಿ ಗೌರವಿಸಲಾಯಿತು. ಈ ಸಂದರ್ಭ ಉಪಾಧ್ಯಕ್ಷ ಜೋಸೆಫ್ ಕ್ವಾಡ್ರಸ್, ನಿರ್ದೇಶಕ ರಘುರಾಮ ಆಡ್ಯಂತಾಯ, ಪಕ್ಷಿಕೆರೆ ಶಾಖೆಯ ವ್ಯವಸ್ಥಾಪಕ ವಿವೇಕಾನಂದ ಸಂಘದ ಪ್ರಧಾನ ವ್ಯವಸ್ಥಾಪಕ ಶೇಖರ ಮಾಡ, ವನಜ ಶೆಟ್ಟಿ, ಜ್ಯೋತಿ ಶೆಟ್ಟಿ, ಪುರಂದರ ಶೆಟ್ಟಿ, ಶೇಷರಾಮ ಶೆಟ್ಟಿ, ಪ್ರವೀಣ್ ಮಾಡ, ಶೀನ ಎಮ್, ನಾರಾಯಣ ಕುಂದರ್, ಸಹಕಾರಿ ಸಂಘದ ಸಿಂಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.

Kinnigoli-02061704

Comments

comments

Comments are closed.

Read previous post:
Kinnigoli-02061703
ಗುತ್ತಕಾಡು ಶಾಲೆಯಲ್ಲಿ ಪುಸ್ತಕ ವಿತರಣೆ

ಕಿನ್ನಿಗೋಳಿ: ಗುತ್ತಕಾಡು ಸರಕಾರಿ ಶಾಲೆಯಲ್ಲಿ ದಾನಿಗಳಾದ ತಾಳಿಪಾಡಿ ಗುತ್ತು ಧನಪಲಾ ಶೆಟ್ಟಿ ಮತ್ತು ಸಹೋದರರು ಒದಗಿಸಿದ ನೋಟ್ ಬುಕ್‌ಗಳ ವಿತರಣೆ ಬುಧವಾರ ಶಾಲಾ ಸಭಾಭವನದಲ್ಲಿ ನಡೆಯಿತು. ಈ ಸಂದರ್ಭ...

Close