ಪಕ್ಷಿಕೆರೆ ಕೊಯಿಕುಡೆ ಹಾಡು ಹಗಲೇ ದರೋಡೆ

ಕಿನ್ನಿಗೋಳಿ: ಪಕ್ಷಿಕೆರೆ ಸಮೀಪದ ಕೊಯಿಕುಡೆಯಲ್ಲಿ ಹಾಡು ಹಗಲೇ ಮನೆಗೆ ನುಗ್ಗಿ ಮಹಿಳೆಯ ಕುತ್ತಿಗೆಯಿಂದ ಚಿನಾಭರಣ ದರೋಡೆ ಮಾಡಿದ ಘಟನೆ ಗುರುವಾರ ಮಧ್ಯಾಹ್ನ 12ರ ಸುಮಾರಿಗೆ ನಡೆದಿದೆ. ಕೊಯಿಕುಡೆ ನಿವಾಸಿ ಕುಪ್ಪ ಸ್ವಾಮಿ ಎಂಬುವವರ ಮನೆಯಲ್ಲಿ ಅವರ ಪತ್ನಿ ಕಾವೇರಮ್ಮ ಒಬ್ಬರೇ ಇರುವ ಸಂದರ್ಭ ಇಬ್ಬರು ಅಪರಿಚಿತರು ಬೈಕಿನಲ್ಲಿ ಬಂದು ಕುಪ್ಪ ಸ್ವಾಮಿ ಅವರನ್ನು ಕೇಳಿದ್ದು, ಕಾವೇರಮ್ಮ ಬಾಗಿಲು ತೆಗೆದ ಕೂಡಲೇ ಎರಡು ಮಂದಿ ಮನೆಯೊಳ ನುಗ್ಗಿ ಕಾವೇರಮ್ಮ ಅವರ ಬಾಯಿಗೆ ಬಟ್ಟೆಯನ್ನು ತುರುಕಿಸಲು ಪ್ರಯತ್ನಿಸಿದ್ದಾಗ ಕಾವೇರಮ್ಮ ದರೋಡೆಕೋರರ ಕೈಗೆ ಕಚ್ಚಿದ್ದಾರೆ, ಅವರ ಕೈಕಾಲನ್ನು ಬಟ್ಟೆಯಿಂದ ಕಟ್ಟಿ ಕಾವೇರಮ್ಮನ ಕುತ್ತಿಗೆಯಲ್ಲಿದ್ದ ಸುಮಾರು 23 ಪವನ್ ತೂಕದ ಮೂರು ಚಿನ್ನದ ಸರವನ್ನು ಕಿತ್ತುಕೊಂಡು, ಮನೆಯಲ್ಲಿನ ಕಪಾಟನ್ನು ಜಾಲಾಡಿದ ಕಳ್ಳರು, ಚಿನ್ನಾಭರಣಕ್ಕಾಗಿ ಹುಡುಕಾಡಿದ್ದು ನಂತರ ಅಲ್ಲಿಂದ ತೆರಳಿದ್ದಾರೆ, ಬಳಿಕ ಕಾವೇರಮ್ಮ ಬೊಬ್ಬೆ ಹಾಕಿದ್ದು , ಕೂಡಲೆ ಸ್ಥಳೀಯ ನಿವಾಸಿಗಳಾದ ದಿನೇಶ್ ಹರಿಪಾದೆ ಮತ್ತು ಸಂಗಡಿಗರು ಅಲ್ಲಿಗೆ ತೆರಳಿ ನೋಡಿದಾಗ ಕಾವೇರಮ್ಮನವರ ಬಾಯಿಯಿಂದ ರಕ್ತ ಸುರಿಯುತ್ತಿದ್ದುದನ್ನು ನೋಡಿ ಪ್ರಕರಣ ಬೆಳಕಿಗೆ ಬಂತು. ಸ್ಥಳೀಯರು ಸ್ಥಳೀಯ ವೈದ್ಯರನ್ನು ಕರೆಸಿ ಕಾವೇರಮ್ಮ ಅವರಿಗೆ ಪ್ರಥಮ ಚಿಕಿತ್ಸೆ ಕೊಡಿಸಿ ಮುಲ್ಕಿ ಠಾಣೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೇಟಿ ನೀಡಿದ ಡಿಸಿಪಿ ಸಂಜೀವ್ ಪಾಟೀಲ್, ಎಸಿಪಿ ರಾಜೇಂದ್ರ, ಮುಲ್ಕಿ ನಿರೀಕ್ಷಕ ಅನಂತ ಪದ್ಮನಾಭ ಹಾಗೂ ಬೆರಳಚ್ಚು ತಜ್ಞರು ತನಿಖೆ ನಡೆಸುತ್ತಿದ್ದಾರೆ.

Kinnigoli-02061705 Kinnigoli-02061706

 

Comments

comments

Comments are closed.

Read previous post:
Kinnigoli-02061707
ಹಟ್ಟಿಗೆ ಆಕಸ್ಮಿಕ ಬೆಂಕಿ ಒಂದು ಜಾನುವಾರು ಸಾವು

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲಿಗುಡ್ಡೆ (ಕಜೆಗುರಿ) ಬಳಿ ರೊನಾಲ್ಡ್ ಅರಾಹ್ನ ಎಂಬುವರಿಗೆ ಸೇರಿದ ದನದ ಹಟ್ಟಿಗೆ ಬುಧವಾರ ತಡ ರಾತ್ರಿ ಆಕಸ್ಮಿಕ ಬೆಂಕಿ ತಗುಲಿ ಒಂದು...

Close