ಕನ್ನಡ ಸಾಹಿತ್ಯ ಸಮ್ಮೇಳನ – 2017 ಉದ್ಘಾಟನೆ

ಕಿನ್ನಿಗೋಳಿ: ಕನ್ನಡ ಭಾಷೆ ಬಗ್ಗೆ ಚಿಂತನೆ ಮುಖ್ಯ. ಸರ್ವವ್ಯಾಪ್ತಿ ಇಂಗ್ಲೀಷ್‌ನಿಂದಾಗಿ ಕನ್ನಡ ಭಾಷಾ ಶಾಲೆಗಳು ಮುಚ್ಚುತ್ತಿವೆ. ಹಳ್ಳಿ ಹಳ್ಳಿಯಲ್ಲಿ ಸಾಹಿತ್ಯದ ಚಟುವಟಿಕೆ ನಡೆಯ ಬೇಕು. ಯುವ ಜನಾಂಗ ಅದರಲ್ಲಿ ತೊಡಗಿಸಿಕೊಳ್ಳ ಬೇಕು. ಎಂದು ಮಾಜಿ ಕಸಾಪ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕಿನ್ನಿಗೋಳಿ ಯುಗಪುರುಷ ಸಹಯೋಗದೊಂದಿಗೆ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಸಮ್ಮೇಳನ – 2017 ಉದ್ಘಾಟಿಸಿ ಮಾತನಾಡಿದರು.
ಕಟೀಲು ದೇವಳ ಅರ್ಚಕ ಕೆ.ಲಕ್ಷ್ಮೀನಾರಾಯಣ ಆಸ್ರಣ್ಣರು ಆಶೀರ್ವಚನ ನೀಡಿದರು.
ಕಿನ್ನಿಗೋಳಿ ಚರ್ಚ್ ಧರ್ಮಗುರು ರೆ.ಫಾ. ವಿನ್ಸೆಂಟ್ ಮೊಂತೆರೋ ಶುಭಾಶಂಸನೆಗೈದರು.

ಹಿರಿಯ ಸಾಹಿತಿ ಶಕುಂತಳಾ ಭಟ್ ಹಳೆಯಂಗಡಿ ಅಧ್ಯಕ್ಷತೆ ವಹಿಸಿ ಮಾತನಾಡಿ ಒಂದು ಭಾಷೆ ಅಳಿದರೆ ಅದರ ಹಿಂದೆ ಸಂಸ್ಕ್ರತಿ ಸಂಸ್ಕಾರ ಆಚಾರ ವಿಚಾರ ವಿಹಾರ ನಂಬಿಕೆ ಸಂಪ್ರದಾಯ ಜನಪದ ಸಾಹಿತ್ಯ ಎಲ್ಲವೂ ಅಳಿದಂತೆ ಈಗಿನ ಕಾಲದ ಮನೋರಂಜನೆಗಿರುವ ಕನ್ನಡ ಸಿನೆಮಾಗಳ ಸಂಭಾಷಣೆ ಅತ್ತಇರಲಿ ಅದರ ಶೀರ್ಷಿಕೆಯಲ್ಲೂ ಅನ್ಯ ಭಾಷೆಗಳು ಮಿಂಚುತ್ತಿರುವುದು ನಮ್ಮ ದುರದೃಷ್ಟ. ವ್ಯವಹಾರಕ್ಕೆ ಇಂಗ್ಲೀಷ್ ಬೇಕು ಆದರೆ ಪ್ರಾಥಮಿಕ ಶಿಕ್ಷಣ ಕಡ್ಡಾಯವಾಗಿ ಕನ್ನಡದಲ್ಲಿರಬೇಕು. ತುಳು ಭಾಷಿಕರು ಕನ್ನಡ ತಾಯಿಯನ್ನು ಅಭಿಮಾನದಿಂದ ಕಾಣುತ್ತಾ ತಲೆಯೆತ್ತಿ ನಿಲ್ಲಬೇಕು ಎಂದರು.

ದೃಶ್ಯಮಾಧ್ಯಮದ ಟಿವಿ ಚಾನಲ್ ಗಳ ಧಾರಾವಾಹಿಗಳಲ್ಲಿ ಮತ್ತು ನಿರೂಪಕರ ಹೇಳಿಕೆಗಳಲ್ಲಿ ಕನ್ನಡ ಶಬ್ದವನ್ನು ಹುಡುಕಬೇಕಾಗಿದೆ.
ಹಿಂದೆ ಅಜ್ಜಿ ಕತೆ ಹೇಳಲು ಮೊಮಕ್ಕಳು ಅಜ್ಜಿಯನ್ನು ಪೀಡಿಸುತ್ತಿದ್ದರು ಇಂದು ಆ ಸ್ಥಾನವನ್ನು ಕಂಪ್ಯೂಟರ್ ಕಾರ್ಟೂನ್ ಗಳು ಆಕ್ರಮಿಸಿವೆ.
ಯುವ ಜನತೆ ಭಾಷಾ ಅಭಿಮಾನ ಶೂನ್ಯರಾಗಿ ಸದಾ ಅಂಗೈ ಅಗಲದ (ಮೊಬೈಲ್) ಯಂತ್ರದಲ್ಲಿ ಮುಳುಗಿರುವವರೆಗೆ ಓದುವ ಆಸಕ್ತಿ ಇಲ್ಲದಿರುವಾಗ ಬರೆಯುವ ಆಸಕ್ತಿ ಕನಸಿನ ಮಂಡಿಗೆಯೇ ಸರಿ
ಗಡಿ ಪ್ರದೇಶ ಕಾಸರಗೋಡಿನಲ್ಲಿಕನ್ನಡದ ಬದಲು ಮಲಯಾಳ ಪಠ್ಯ ಆಚರಣೆ ತಂದಿರುವುದು ನಮ್ಮ ಸೋಲೆಂದು ಒಪ್ಪಿಕೊಳ್ಳುವ ಸಂಗತಿಯಾಗಿದೆ..

ದ.ಕ.ಕಸಾಪ ಅಧ್ಯಕ್ಷ ಪ್ರದೀಪಕುಮಾರ ಕಲ್ಕೂರ, ಹಿರಿಯ ಸಾಹಿತಿ ಗಣೇಶ ಮಲ್ಯ, ಮಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ವಿಜಯಲಕ್ಷ್ಮೀ ಶೆಟ್ಟಿ, ಮಾಜಿ ಅಧ್ಯಕ್ಷರಾದ ಮೋಹನದಾಸ ಸುರತ್ಕಲ್, ಸರ್ವೋತ್ತಮ ಅಂಚನ್, ಮುಲ್ಕಿ ವಿಜಯ ಕಾಲೇಜು ಪ್ರಿನ್ಸಿಪಾಲ್ ಡಾ. ನಾರಾಯಣ ಪೂಜಾರಿ ಮಾಜಿ ಕಸಾಪ ಗೌರವ ಕಾರ್ಯದರ್ಶಿ ಮತ್ತು ಖಚಾಂಚಿ ಕೊಡೆತ್ತೂರು ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು.
ಮುಲ್ಕಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎನ್.ಪಿ. ಶೆಟ್ಟಿ ಸ್ವಾಗತಿಸಿದರು.
ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಉದಯ ಕುಮಾರ್ ಹಬ್ಬು ರಚಿತ “ಭೂಮಿಯ ಸುತ್ತ” “ವಾಸ್ತು ಮತ್ತು ಫೆಂಗ್ವಾಯಿ” ಕೃಷ್ಣ ಶೆಟ್ಟಿ ಕುಡು ಮಲ್ಲಿಗೆ “ಯಕ್ಷಗಾನ ಪುನಾಣ ಜ್ಞಾನ ನಂದಾದೀಪ” ಕೃತಿಗಳು ಬಿಡುಗಡೆ ಗೊಂಡವು.

Kinnigoli-030617010 Kinnigoli-030617011      

 

Comments

comments

Comments are closed.

Read previous post:
Kinnigoli-030617095
ಶಿಕ್ಷಣದೊಂದಿಗೆ ಸಂಸ್ಕಾರ

ಕಿನ್ನಿಗೋಳಿ: ಶಾಲಾ ಶಿಕ್ಷಣದಲ್ಲಿ ಜ್ಞಾನಾರ್ಜನೆಯೊಂದಿಗೆ ವಿನಯತೆ, ಸಂಸ್ಕಾರಗಳನ್ನೂ ಕಲಿಸಿಕೊಡಬೇಕು ಎಂದು ಕಟೀಲು ದೇವಳದ ಅರ್ಚಕ ಕಮಲಾದೇವಿಪ್ರಸಾದ ಆಸ್ರಣ್ಣ ಹೇಳಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಆಂಗ್ಲ ಮಾಧ್ಯಮ ಕಿರಿಯ...

Close