ದ್ರವ ತ್ಯಾಜ್ಯ ವಿಲೇವಾರಿ ಘಟಕ ಕಾಮಗಾರಿ ಮೊಟಕು

ಕಿನ್ನಿಗೋಳಿ: ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದ ಪ್ರತೀ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಅಕ್ರೋಶಕ್ಕೆ ಕಾರಣವಾದ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಿನ್ನಿಗೋಳಿ ಮಾರ್ಕೆಟ್ ಹಾಗೂ ಬಸ್ ನಿಲ್ದಾಣಗಳ ಪರಿಸರದ ದ್ರವ ತಾಜ್ಯ ನೀರು ವಿಲೇವಾರಿ ಕೊನೆಗೂ ಒಂದು ತಾರ್ಕಿಕ ಹಂತಕ್ಕೆ ಮುಟ್ಟಿ ನೀರನ್ನು ಸಂಸ್ಕರಿಸುವ 36 ಲಕ್ಷ ರೂ ವೆಚ್ಚದ ಘಟಕದ ಕಾಮಗಾರಿ ಬಿತ್ತುಲ್ ಪರಿಸರದಲ್ಲಿ ನಡೆಯುತ್ತಿತ್ತು.
ಆದರೆ ಪರಿಸರದ ಬಾವಿಗಳ ನೀರು ಕಲುಷಿತಗೊಂಡು ಕುಡಿಯಲು ಆಯೋಗ್ಯವಾಗಿದ್ದು ಒಂದು ತರಹ ವಾಸನೆ ಬರುತ್ತಿತ್ತು ಆದ ಕಾರಣ ಕಳೆದ ಒಂದು ತಿಂಗಳಿನಿಂದ ಕಾಮಗಾರಿ ಸ್ಥಗಿತಗೊಂಡಿದೆ.
ಕಿನ್ನಿಗೋಳಿ ಮೀನು ಮಾರ್ಕೆಟ್ ಹಾಗೂ ಬಸ್ ನಿಲ್ದಾಣ ಪರಿಸರದ ಹೊಟೇಲ್ ಉದ್ದಿಮೆಗಳ ತ್ಯಾಜ್ಯ ನೀರು ಬಸ್ ನಿಲ್ದಾಣದ ಹಿಂಬದಿ ಬಿತ್ತುಲ್ ಪರಿಸರದಲ್ಲಿ ತೆರೆದ ಚರಂಡಿಯಲ್ಲಿ ಹರಿಯುತ್ತಿದ್ದು ಜನರು ಖಾಯಿಲೆ ಬೀಳುತ್ತಿದ್ದರು. ಪರಿಸರದ ಸುಮಾರು ಮೂವತ್ತಕ್ಕೂ ಹೆಚ್ಚು ಮನೆಗಳಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದ್ದು ತೆರೆದ ಚರಂಡಿಯ ನೀರು ಹತ್ತಿರದ ಬಾವಿಗಳಿಗೆ ಸೇರಿ ಕಲುಷಿತಗೊಂಡು ಕುಡಿಯಲು ಆಯೋಗ್ಯವಾಗಿತ್ತು ಹಲವು ವರ್ಷಗಳ ಹಿಂದಿನಿಂದಲೇ ಬಿತ್ತುಲ್ ಪರಿಸರದ ಗ್ರಾಮಸ್ಥರು ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ಗ್ರಾಮ ಸಬೆ ವಾರ್ಡ್ ಸಭೆಗಳಲ್ಲಿ ಅಹವಾಲು ತೋಡಿಕೊಂಡರೂ ಪರಿಹಾರ ಕಾಣಲ್ಲಿ 2016 ನೇ ವರ್ಷದಲ್ಲಿ ಗ್ರಾಮ ಸಭೆ ನಡೆಸುವ ಮೊದಲು ಸ್ಥಳ ಪರಿಶೀಲನೆ ಮಾಡಲು ಗ್ರಾಮಸ್ಥರು ಒತ್ತಡ ಹಾಕಿದಾಗ ಜಿಲ್ಲಾ ಪಂಚಾಯಿತಿ ಅಕಾರಿಗಳು ಸ್ಥಳ ಪರಿಶೀಲನೆ ಮಾಡಿ ಗ್ರಾಮ ಪಂಚಾಯಿತಿ ಸೇರಿ ಘಟಕ ಸ್ಥಾಪಿಸುವ ಬಗ್ಗೆ ಯೋಜನೆ ರೂಪುಗೊಂಡು ಜಿಲ್ಲಾಕಾರಿಗಳಿಗೆ ಮನವಿ ನೀಡಲಾಗಿತ್ತು
ಈ ಬಾರಿಯ ಸ್ವಚ್ಚಭಾರತ್ ಯೋಜನೆಯಡಿಯಲ್ಲಿ 20 ಲಕ್ಷ ರೂ ಮಂಜೂರು ಆಗಿದ್ದು ಕಾಮಗಾರಿ ನಡೆಯುತ್ತಿತ್ತು. ಕಿನ್ನಿಗೋಳಿ ಮಾರ್ಕೆಟ್ ಹಾಗೂ ಬಸ್ಸು ನಿಲ್ದಾಣದಿಂದ ಬಿತ್ತುಲ್ ಪರಿಸರದ ತನಕ ಕಾಮಗಾರಿ ನಡೆದಿದ್ದು ಘಟಕದ ಕೊನೆಯ ದ್ರವ ತ್ಯಾಜ್ಯದ ಶುದ್ದಿಕರಣ ಘಟಕದ ಹಂತದಲ್ಲಿ ನೀರನ್ನು ಮತ್ತೆ ತರೆದ ಚರಂಡಿಯಲ್ಲಿ ಬಿಟ್ಟ ಕಾರಣ ಪಕ್ಕದಲ್ಲಿ ವಾಸ್ತವ್ಯವಿರುವ 2 ಮನೆಯ ತರೆದ ಬಾವಿಯ ನೀರಿಗೆ ಸೇರಿ ಕುಡಿಯಲು ಅಯೋಗ್ಯವಾಗಿದೆ ಎಂದು ಅಲ್ಲಿನ ಜನರು ತಿಳಿಸಿದ್ದಾರೆ.

ಲ್ಯಾಬ್ ವರದಿ : ಬಾವಿ ನೀರು ಕುಡಿಯಲು ಅಯೋಗ್ಯ
ಬಿತ್ತುಲು ಪರಿಸರದಲ್ಲಿ ಹರಿಯುವ ನೀರು ದುರ್ವಾಸನೆಯಿಂದ ಕೂಡಿದ್ದು ಬಾವಿಯ ನೀರನ್ನು ಸುರತ್ಕಲ್ ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ದೃಡ ಪಟ್ಟಿದೆ ಎಂದು ಬಿತ್ತುಲ್ ಗ್ರಾಮಸ್ಥರು ತಿಳಿಸಿದ್ದಾರೆ.

ಮಲೇರಿಯಾ ಡೆಂಗ್ಯು ಸೋಂಕು ರೋಗಗಳ ಭೀತಿ
ಬಿತ್ತುಲ್ ಪರಿಸರದಲ್ಲಿ ಘಟಕದ ಬದಿಯಲ್ಲಿ ನೀರು ತರೆದ ಹೊಂಡದಲ್ಲಿ ನಿಂತಿರುವುದರಿಂದ ಸಾಕಷ್ಟು ರೋಗಗಳು ಬರುವ ಸಂಭವ ಹೆಚ್ಚಿದೆ. ಅಲ್ಲಿನ ನಿವಾಸಿ ಯೊಬ್ಬರ ಮೈಯಲ್ಲಿ ಗುಳ್ಳೆಗಳು ಕಾಣಿಸಿಕೊಂಡಿವೆ ಎನ್ನಲಾಗುತ್ತಿದೆ.
ಇನ್ನು ಮಳೆಗಾಲ ಪ್ರಾರಂಭವಾದರೆ ಪರಿಸರದಲ್ಲಿ ಉಕ್ಕಿ ಹರಿಯಲಿದೆ ನೀರು ಆಗ ಜನರ ವಾಸ್ತವ್ಯದ ಸ್ಥಿತಿ ಕಠಿಣವಾಗಲಿದೆ.

Kinnigoli-030617094

Comments

comments

Comments are closed.

Read previous post:
Kinnigoli-030617093
ಕಮ್ಮಾಜೆ: ಕಾಂಕ್ರೀಟ್ ರಸ್ತೆಯ ಉದ್ಘಾಟನೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮ್ಮಾಜೆ ಕಲ್ಲಕುಮೇರು ರಸ್ತೆಗೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆಯ ಉದ್ಘಾಟನೆಯನ್ನು ಮುಲ್ಕಿ ಮೂಡಬಿದಿರೆ ಶಾಸಕ ಕೆ ಅಭಯಚಂದ್ರ ಜೈನ್...

Close