ಅನುದಾನಗಳ ಬಳಕೆ ಗ್ರಾಮಾಭಿವೃದ್ಧಿ ಸಾಧ್ಯ

ಕಿನ್ನಿಗೋಳಿ: ಮೂಲಭೂತ ವ್ಯವಸ್ಥೆಗಳಿಗಾಗಿ ಸರಕಾರದ ಯೋಜನೆ ಹಾಗೂ ಅನುದಾನಗಳನ್ನು ಗ್ರಾಮ ಪಂಚಾಯಿತಿಗಳು ಸಮರ್ಪಕವಾಗಿ ವಿನಿಯೋಗಿಸಿದಾಗ ಶೀಘ್ರ ಗ್ರಾಮಾಭಿವೃದ್ಧಿಯಾಗಬಲ್ಲದು ಎಂದು ದ.ಕ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುನರೂರು ವಾರ್ಡಿನ ಕುಡಿಯುವ ನೀರಿನ ಪೂರೈಕೆಗಾಗಿ ರೂ೩ಲಕ್ಷ ವೆಚ್ಚದಲ್ಲಿ ಬೋರ್ ವೆಲ್ ಪಂಪ್ ಹಾಗೂ ನೀರಿನ ಸಂಪರ್ಕ ವ್ಯವಸ್ಥೆ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಮಂಗಳೂರು ತಾ ಪಂ.ಸದಸ್ಯ ದಿವಾಕರ ಕರ್ಕೇರಾ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರಾ, ಕಿನ್ನಿಗೋಳಿ ಪಂ.ಸದಸ್ಯರಾದ ದೇವಪ್ರಸಾದ್ ಪುನರೂರು, ರವೀಂದ್ರ ದೇವಾಡಿಗ, ಸೇವಂತಿ, ಪಿಡಿಒ ಅರುಣ್ ಪ್ರದೀಪ್ ಡಿಸೋಜ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

Kinnigoli-13061704

Comments

comments

Comments are closed.

Read previous post:
Kinnigoli-13061702
ಬಳ್ಕುಂಜೆ ನದಿಯಲ್ಲಿ ಉಪ್ಪು ನೀರು

ಕಿನ್ನಿಗೋಳಿ: ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ಜೂನ್ 10 ತಾರೀಕಿನವರೆಗೂ ಕೈ ಕೊಡುವ ಕಾರಣ ಕರಾವಳಿಯ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ರೈತರಿಗೆ ಮಾತ್ರವಲ್ಲ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರಿಗೂ...

Close