ಬಳ್ಕುಂಜೆ ನದಿಯಲ್ಲಿ ಉಪ್ಪು ನೀರು

ಕಿನ್ನಿಗೋಳಿ: ಇತ್ತೀಚಿನ ವರ್ಷಗಳಲ್ಲಿ ಮುಂಗಾರು ಮಳೆ ಜೂನ್ 10 ತಾರೀಕಿನವರೆಗೂ ಕೈ ಕೊಡುವ ಕಾರಣ ಕರಾವಳಿಯ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ರೈತರಿಗೆ ಮಾತ್ರವಲ್ಲ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರಿಗೂ ತಾತ್ವರವಾಗಿದೆ.
ಮುಲ್ಕಿ ಹೋಬಳಿಯ ಕಿನ್ನಿಗೋಳಿ ಬಳ್ಕುಂಜೆ ಸುತ್ತಮುತ್ತ ಕುಡಿಯುವ ನೀರಿಗೆ ಸಮಸ್ಯೆಗಳಿದ್ದು ಜನರ ಆಶಾ ಭಾವನೆಯಾಗಿದ್ದ ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಗೊಳ್ಳದಿದ್ದರೂ ತಾತ್ಕಲಿಕವಾಗಿ ಹಲವು ಗ್ರಾಮಗಳಿಗೆ ನೀರನ್ನು ಸರಭರಾಜು ಮಾಡಲಾಗುತ್ತಿದೆ.
ಉಡುಪಿ ಜಿಲ್ಲೆಯ ಪಲಿಮಾರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಶಾಂಭವಿ ನದಿಗೆ ಕಟ್ಟಲಾದ ಕಿಂಡಿ ಅಣೆಕಟ್ಟಿಗೆ ಪ್ರತೀ ವರ್ಷ ನವಂಬರ್ ತಿಂಗಳಲ್ಲಿ ಬಾಗಿಲುಗಳನ್ನು ಹಾಕಲಾಗುತ್ತಿದ್ದು ಸುಮಾರು ಮೇ 15 ರ ಸಮಯ ವಾಡಿಕೆಯಂತೆ ಬಾಗಿಲು ತೆಗೆಯಲಾಗುತ್ತಿತ್ತು ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಗಾಗಿ ಬಳ್ಕುಂಜೆ ಸಮೀಪ ಜಾಕ್ ವೆಲ್ ನಿರ್ಮಾಣವಾದ ನಂತರ ಉಪ್ಪು ನೀರು ಹಿಮ್ಮುಖವಾಗಿ ನೀರು ಹರಿಯುವ ಸಾದ್ಯತೆ ಇರುದರಿಂದ ಮೇ ತಿಂಗಳ ಕೊನೆಯಲ್ಲಿ ಬಾಗಿಲು ತೆಗೆಯುವ ಕ್ರಮ ಪ್ರಾರಂಭವಾಯಿತು. ಈ ಸಲವೂ ಮೇ ತಿಂಗಳ ಕೊನೆಗೆ ಅಣೆಕಟ್ಟಿನ ಬಾಗಿಲು ತೆರೆದ ಪರಿಣಾಮ ಅಲ್ಲದೆ ಸರಿಯಾಗಿ ಮಳೆ ಬರದ ಕಾರಣ ಉಪ್ಪು ನೀರು ಹಿಮ್ಮುಖವಾಗಿ ಹರಿದು ಬಳ್ಕುಂಜೆಯಲ್ಲಿನ ಜಾಕ್ ವೆಲ್ ಬಳಿಯ ನೀರು ಉಪ್ಪಾಗಿದೆ. ಸರಬರಾಜಾಗುವ ನೀರು ಉಪ್ಪಾಗಿದ್ದು ಕುಡಿಯಲು ಆಯೋಗ್ಯವಾಗಿದೆ. ಆ ಕಾರಣ ನೀರು ಸರಭರಾಜು ಮಾಡುವುಅನ್ನು ಸ್ಥಗಿತಗೊಳಿಸಲಾಗಿದೆ. ಪಲಿಮಾರು ಅಣೆಕಟ್ಟು ಬಾಗಿಲುಗಳನ್ನು ಪ್ರತೀ ವರ್ಷ ಮಳೆಗಾಲದ ಮುಂಚೆ ತೆಗೆಯುವ ಅನಿವಾರ್ಯತೆ ಇದೆ. ಒಂದು ವೇಳೆ ತಡವಾಗಿ ತೆಗೆದರೆ ಜೋರಾದ ಬಿರುಸಿನ ಮಳೆಗೆ ನದಿಯಲ್ಲಿ ನೀರು ತುಂಬಿದರೆ ಅಣೆಕಟ್ಟಿನ ಬಾಗಿಲು ತೆಗೆಯಲು ಕಷ್ಟ ಸಾಧ್ಯವಾಗಿ ಅಣೆಕಟ್ಟಿಗೆ ಅಪಾಯವಾಗುವ ಸಂಭವವಿದೆ.

ಸಿಹಿ ನೀರಿನ ಮೀನುಗಳು ನಾಶ
ಕೆಲ ದಿನಗಳ ಹಿಂದೆ ನದಿಯಲ್ಲಿ ಉಪ್ಪು ನೀರು ಬಂದ ಕಾರಣ ಸಿಹಿ ನೀರಿನ ಮೀನುಗಳು ಸತ್ತುಹೋಗಿದ್ದು, ಮಡೆಂಜಿ, ಇರ್ಪೆ, ಕೆವಜ್ ಮತ್ತಿತರ ಮೀನುಗಳು ಹೆಚ್ಚಾಗಿ ಈ ನೀರಿನಲ್ಲಿ ಇದ್ದು, ಉಪ್ಪು ನೀರಿನ ಪರಿಣಾಮ ಮರಿ ಮೀನುಗಳೂ ಸತ್ತು ಬಿದ್ದಿತ್ತು ಹೀಗಾದಲ್ಲಿ ಈ ಬಾಗದಲ್ಲಿ ಮೀನಿನ ಸಂತತಿ ನಾಶವಾಗುವ ಸಾದ್ಯತೆಗಳು ಹೆಚ್ಚಿವೆ.

ಕೃಷಿ ಚಟುವಟಿಕೆಗಳಿಗೆ ಹಾನಿ
ಕಿನ್ನಿಗೋಳಿ ಸಮೀಪದ ಉಳೆಪಾಡಿಯಿಂದ ಬಳ್ಕುಂಜೆ ಪಲಿಮಾರು ಪರಿಸರದ ರೈತರು ಮಾತ್ರ ತಲೆಮೇಲೆ ಕೈ ಇಡುವ ಪರಿಸ್ಥಿತಿ ಬಂದೊದಗಿದೆ. ಶಾಂಭವಿ ನದಿಗೆ ಉಪ್ಪು ಮಿಶ್ರಿತ ನೀರು ಕೃಷಿ ಭೂಮಿಯ ಮಣ್ಣನ್ನು ಸೇರಿ ಬೆಳೆಗೆ ಮಾರಕವಾಗಲಿದೆ. ಇದರಿಂದ ಈ ಭಾಗದ ರೈತರು ಸಂಕಷ್ಟದಲ್ಲಿದ್ದಾರೆ. ಮಳೆಯ ಪ್ರಮಾಣ ಕಡಿಮೆಯ ಕಾರಣ ರೈತರು ಕಂಗಾಲಾಗಿದ್ದಾರೆ ಇನ್ನೇನು ಭತ್ತದ ನಾಟಿ ಶುರುವಾಗಲಿದ್ದು, ಅದಕ್ಕಾಗಿ ಗದ್ದೆಗಳು ಹದಗೊಳ್ಳಬೇಕಾಗಿದ್ದು, ಮಳೆ ಸಮಸ್ಯೆಯಿಂದ ಇನ್ನೂ ಕೃಷಿ ಚಟುವಟಿಕೆ ಪ್ರಾರಂಭವಾಗಿಲ್ಲ, ಕರ್ನಿರೆ ಬಳ್ಕುಂಜೆ ಬಾಗದಲ್ಲಿ ಉಪ್ಪು ನೀರು ಪರಿಣಾಮ ಭತ್ತದ ಸಸಿ ಬೆಳೆಯಲೂ ಕಷ್ಟವಾಗಿದೆ, ನದಿಯ ಸಂಪರ್ಕ ಹೊಂದಿದ ಕೃಷಿಕರಿಗೆ ಕೃಷಿ ಚಟುವಟಿಕೆ ಚಾಲನೆ ನೀಡುತ್ತಿದ್ದರು, ಆದರೆ ಈ ಬಾರಿ ತುಂಬಾ ಸಮಸ್ಯೆ ಉಂಟಾಗಿದೆ, ಒಂದು ವೇಳೆ ಇನ್ನೂ ಕೆಲ ದಿನಗಳು ಮಳೆ ಬಾರದಿದ್ದರೆ, ಉಪ್ಪು ನೀರು ಸಂಕಲಕರಿಯತನಕ ಹರಿದು ಸಾವಿರಾರು ಎಕರೆ ಪ್ರದೇಶಗಳ ಕೃಷಿ ಕೆಲಸ ಕಾರ್ಯಗಳಿಗೆ ಸಮಸ್ಯೆ ಉಂಟಾಗಲಿದೆ,

ಪಲಿಮಾರು ಅಣೆಕಟ್ಟಿನ ಬಾಗಿಲು ತೆರೆದ ಪರಿಣಾಮ ಉಪ್ಪು ನೀರು ಹಿಮ್ಮಖವಾಗಿ ಹರಿಯುತ್ತಿದೆ, ಇದರಿಂದ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಸರಬರಾಜಿಗೆ ಕೂಡಾ ತುಂಬಾ ತೊಂದರೆಯಾಗಿದೆ. ಬಹುಗ್ರಾಮ ಕುಡಿಯುವ ನೀರು ಯೋಜನೆ ಬಂದ ನಂತರ ಕುಡಿಯುವ ನೀರಿಗೆ ತೊಂದರೆ ಆಗದಂತೆ ಈ ಅಣೆಕಟ್ಟಿನ ಬಾಗಿಲನ್ನು ತಡವಾಗಿ ತೆಗೆಯಲಾಗುತ್ತಿದೆ, ಆದರೆ ಈ ಬಾರಿ ಮಳೆ ಕಡಿಮೆ ಆದ ಕಾರಣ ಈ ಸಮಸ್ಯೆ ಉಂಟಾಗಿದೆ.

ದಿನೇಶ್ ಪುತ್ರನ್
ಅಧ್ಯಕ್ಷರು ಬಳ್ಕುಂಜೆ ಗ್ರಾಮ ಪಂಚಾಯಿತಿ .

Kinnigoli-13061701 Kinnigoli-13061702 Kinnigoli-13061703

Comments

comments

Comments are closed.

Read previous post:
Kinnigoli-12061703
ಅಟೋ ರಿಕ್ಷಾ- ಅಧ್ಯಕ್ಷ ಚಂದ್ರಶೇಖರ್ ಕದಿಕೆ

ಕಿನ್ನಿಗೋಳಿ: ಹಳೆಯಂಗಡಿ ಅಟೋ ರಿಕ್ಷಾ ಚಾಲಕರ - ಮಾಲಕರ ಸಂಘ (ರಿ) ಇದರ ನೂತನ ಅಧ್ಯಕ್ಷರಾಗಿ ಶ್ರೀ ಚಂದ್ರಶೇಖರ್ ಕದಿಕೆ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಅಹಮ್ಮದ್ ಬಾವ, ಇಂದಿರಾನಗರ, ಕಾರ್ಯದರ್ಶಿ...

Close