ಸಂಸ್ಕಾರ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಸಹಕಾರಿ

ಕಿನ್ನಿಗೋಳಿ: ಕೇವಲ ಕಲಿಕೆಯಲ್ಲದೆ ಪಠ್ಯೇತರ ಚಟುವಟಿಕೆಗಳು, ಶಿಸ್ತು, ಸಂಸ್ಕಾರ ಕೂಡ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಸಹಕಾರವಾಗುತ್ತದೆ ಎಂದು ಮೂಕಾಂಬಿಕಾ ದೇವಳ ಧರ್ಮದರ್ಶಿ ವಿವೇಕಾನಂದ ಹೇಳಿದರು.
ಮೂಕಾಂಬಿಕಾ ಯುವ ಬಳಗದ ನೇತ್ರತ್ವದಲ್ಲಿ ಪುನರ್ನವ ಟ್ರಸ್ಟ್‌ವತಿಯಿಂದ ಗುತ್ತಕಾಡು ಸರಕಾರಿ ಶಾಲೆಯಲ್ಲಿ ಶನಿವಾರ ನಡೆದ ಮಕ್ಕಳಿಗೆ ಕಲಿಕಾ ಸಾಮಾಗ್ರಿಗಳ ವಿತರಣೆ ಮತ್ತು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಕಾಂಬಿಕಾ ದೇವಳ ಸಮಿತಿಯ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು.
ಪಾಂಚಜನ್ಯ ಸರ್ವಿಸಸ್ ಮಾಲಕ ಮುರಳೀಧರ್ ಶಾಲೆಗೆ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು. ಪುನರ್ನವ ಟ್ರಸ್ಟ್ ವತಿಯಿಂದ ಕಲಿಕಾ ಸಾಮಾಗ್ರಿಗಳು, ಸರಕಾರದ ವತಿಯಿಂದ ಸಮವಸ್ತ್ರಗಳನ್ನು ಉಚಿತವಾಗಿ ನೀಡಲಾಯಿತು.
ಈ ಸಂದರ್ಭ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಮಂಗಳೂರು ತಾಲೂಕು ಪಂಚಾಯಿತಿ ಸದಸ್ಯ ದಿವಾಕರ ಕರ್ಕೇರಾ, ಮೂಕಾಂಬಿಕಾ ದೇವಳ ಯುವಬಳಗದ ಅಧ್ಯಕ್ಷ ಲೋಹಿತಾಶ್ವ, ಪುನರ್ನವ ಟ್ಟಸ್ಟ್‌ನ ನವೀನ್, ಶ್ರೀಧರ್, ಗುತ್ತಕಾಡು ಸರಕಾರಿ ಶಾಲಾಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಗುತ್ತಕಾಡು ಶಾಲಾ ಮುಖ್ಯ ಶಿಕ್ಷಕಿ ರೀಟಾ ಡೇಸಾ ಸ್ವಾಗತಿಸಿದರು, ಶಿಕ್ಷಕಿ ಯಶೋಧ ಕಾರ್ಯಕ್ರಮ ನಿರೂಪಿಸಿದರು.

Kinnigoli-14061701

Comments

comments

Comments are closed.

Read previous post:
Kinnigoli-13061706
ಸೇವಾ ಧ್ಯೇಯ-ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಬೇಕು

ಕಿನ್ನಿಗೋಳಿ : ಸೇವಾ ಧ್ಯೇಯದಿಂದ ಸಮಾಜದ ಬಡ ವರ್ಗಗಳಿಗೆ ಶೈಕ್ಷಣಿಕ, ಆರೋಗ್ಯ ಹಾಗೂ ಇತರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿ ಸಹಾಯ ಹಸ್ತ ನೀಡಿ ತೃಪ್ತಿಮಯ ಜೀವನ ನಮ್ಮದಾಗಿಸಬೇಕು. ಎಂದು...

Close