ಕಿನ್ನಿಗೋಳಿ ವಿಶ್ವಕರ್ಮ ಭಜನಾ ಮಂಗಲೋತ್ಸವ

ಕಿನ್ನಿಗೋಳಿ : ಭಜನೆಯ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗಬಹುದು. ದಾಸ ಶ್ರೇಷ್ಟರು ಕೀರ್ತನೆಯ ಮೂಲಕ ನಾಡಿಗೆ ನೀಡಿದ ಸಂದೇಶ ಮಹತ್ತರವಾಗಿದೆ. ಎಂದು ಎಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ ಹೇಳಿದರು.
ಭಾನುವಾರ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ (ರಿ) ಇದರ ವಿಶ್ವಕರ್ಮ ಭಜನಾ ಮಂಡಳಿಯ ವತಿಯಿಂದ ಸೂರ‍್ಯೋದಯದಿಂದ ಸೂರ‍್ಯಾಸ್ತಮಾನದವರೆಗೆ ನಡೆದ ಭಜನಾ ಮಂಗಲೋತ್ಸವ ಉದ್ಘಾಟಿಸಿ ಮಾತನಾಡಿದರು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಶಿವಪ್ರಸಾದ್ ಆಚಾರ್ಯ ಕೆಂಚನಕೆರೆ, ಸಭಾಭವನ ಸಮಿತಿಯ ಅಧ್ಯಕ್ಷ ಎಂ. ಪ್ರಥ್ವಿರಾಜ್ ಆಚಾರ್ಯ, ಕಾಳಿಕಾಂಬಾ ಮಹಿಳಾ ವೃಂದದ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ, ಪುರೋಹಿತ್ ಯೋಗೀಶ್ ಆಚಾರ್ಯ ಬೆಳುವಾಯಿ, ಏಳಿಂಜೆ ಭಾಸ್ಕರ ಆಚಾರ್ಯ, ಪ್ರಭಾಕರ ಆಚಾರ್ಯ, ಹರೀಶ್ ಆಚಾರ್ಯ, ಯೋಗೀಶ್ ಆಚಾರ್ಯ, ಸುಧಾಕರ ಆಚಾರ್ಯ ಮೂರುಕಾವೇರಿ, ಕೆ. ಬಿ. ಸುರೇಶ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-14061703

Comments

comments

Comments are closed.

Read previous post:
Kinnigoli-14061702
ನಡುಗೋಡು : ವಿದ್ಯಾರ್ಥಿಗಳಿಗೆ ಅಭಿನಂದನೆ

ಕಿನ್ನಿಗೋಳಿ : ಗ್ರಾಮೀಣ ಮಟ್ಟದ ಸರಕಾರಿ ಶಾಲೆ ಸತತ ನಾಲ್ಕು ವರ್ಷ ನೂರು ಶೇಕಡ ಫಲಿತಾಂಶ ಪಡೆಯುತ್ತಿರುವುದು ಅಭಿನಂದಾನರ್ಹ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು. ಕಿನ್ನಿಗೋಳಿ...

Close