ನಡುಗೋಡು : ವಿದ್ಯಾರ್ಥಿಗಳಿಗೆ ಅಭಿನಂದನೆ

ಕಿನ್ನಿಗೋಳಿ : ಗ್ರಾಮೀಣ ಮಟ್ಟದ ಸರಕಾರಿ ಶಾಲೆ ಸತತ ನಾಲ್ಕು ವರ್ಷ ನೂರು ಶೇಕಡ ಫಲಿತಾಂಶ ಪಡೆಯುತ್ತಿರುವುದು ಅಭಿನಂದಾನರ್ಹ ಎಂದು ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ ಹೇಳಿದರು.
ಕಿನ್ನಿಗೋಳಿ ಸಮೀಪದ ನಡುಗೋಡು ಸರಕಾರಿ ಪ್ರೌಡ ಶಾಲಾ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ 2016-17 ರ 100ಶೇಕಡಾ ಸಾಧನೆಗೈದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಅಭಿನಂದನೆ ಮತ್ತು ಶಾಲಾ ಮುಖ್ಯ ಶಿಕ್ಷಕಿ ಶೋಭ ಅವರನ್ನು ಸನ್ಮಾನಿಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರಕಾರದ ಸವಲತ್ತಿನ ಜೊತೆ ದಾನಿಗಳ ಸಹಕಾರ ಪಡೆದು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಶಿಕ್ಷಕರು ನೀಡುತ್ತಿದ್ದಾರೆ. ಹಳೆ ವಿದ್ಯಾರ್ಥಿ ಸಂಘವೂ ಕೂಡ ಇದಕ್ಕೆ ಸಹಕರಿಸುತ್ತಾ ಮಾದರಿ ಶಾಲೆಯಾಗಿದೆ ಎಂದರು.
ಈ ಸಂದರ್ಭ ಎಸ್.ಎಸ್.ಎಲ್.ಸಿ.ಯಲ್ಲಿ ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಶಾಲಾ ಮುಖ್ಯ ಶಿಕ್ಷಕಿ ಶೋಭಾ ಹಾಗೂ ಶಿಕ್ಷಕ ವೃಂದದವರನ್ನು ಗೌರವಿಸಲಾಯಿತು,
ಮಂಗಳೂರು ತಾಲೂಕು ಪಂಚಾಯತ್ ಸದಸ್ಯೆ ಶುಭಲತಾ ಶೆಟ್ಟಿ, ಕಟೀಲು ಗ್ರಾಮ ಪಂಚಾಯಿತಿ ಸದಸ್ಯ ತಿಲಕ್ ರಾಜ್ ಶೆಟ್ಟಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಶ್ಚಂದ್ರ ಆಚಾರ್ಯ, ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ, ನಿವೃತ್ತ ಮುಖ್ಯ ಶಿಕ್ಷಕ ವಿಶ್ವನಾಥ ಶೆಟ್ಟಿ, ಎಸ್.ಡಿ ಎಮ್.ಸಿ ಅಧ್ಯಕ್ಷ ಜಗದೀಶ್ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಚರಣ್ ಶೆಟ್ಟಿ, ರಾಜೇಂದ್ರ ಶೆಟ್ಟಿ, ಮೆನ್ನಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಪೂಜಾರಿ, ಶಿಕ್ಷಕರಾದ ಮೇರಿ ವಿಜಯ ಗೋವಿಯಸ್, ವಿದ್ಯಾ, ರೇಖಾ, ಸುಂದರ್, ನಾಗರಾಜ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಹೇಮಂತ್ ಶೆಟ್ಟಿ, ಸುಧೀರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಶೋಭಾ ಸ್ವಾಗತಿಸಿದರು. ಮಂಗಳ ನಾಯಕ್ ವಂದಿಸಿದರು. ಸೀತಾ ಚಂದ್ರಿಕ ಕಾರ್ಯಕ್ರಮ ನಿರೂಪಿಸಿದರು.

Kinnigoli-14061702

Comments

comments

Comments are closed.

Read previous post:
Kinnigoli-14061701
ಸಂಸ್ಕಾರ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಸಹಕಾರಿ

ಕಿನ್ನಿಗೋಳಿ: ಕೇವಲ ಕಲಿಕೆಯಲ್ಲದೆ ಪಠ್ಯೇತರ ಚಟುವಟಿಕೆಗಳು, ಶಿಸ್ತು, ಸಂಸ್ಕಾರ ಕೂಡ ವ್ಯಕ್ತಿತ್ವ ವಿಕಸನದ ಬೆಳವಣಿಗೆಗೆ ಸಹಕಾರವಾಗುತ್ತದೆ ಎಂದು ಮೂಕಾಂಬಿಕಾ ದೇವಳ ಧರ್ಮದರ್ಶಿ ವಿವೇಕಾನಂದ ಹೇಳಿದರು. ಮೂಕಾಂಬಿಕಾ ಯುವ ಬಳಗದ...

Close