ನೆಲ್ಲಿಗುಡ್ಡೆ ರಸ್ತೆ ಡಾಮರೀಕರಣ ಉದ್ಘಾಟನೆ

ಕಿನ್ನಿಗೋಳಿ : ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ-ಪಂಗಡದ ಅಭಿವೃದ್ಧಿ ನಿಗಮ , ಮಲೆನಾಡು ಅಭಿವೃದ್ಧಿ ನಿಗಮ, ಗಡಿನಾಡು ಅಭಿವೃದ್ಧಿ ನಿಗಮ ಹಾಗೂ ಅಲ್ಪ ಸಂಖ್ಯಾತ ಅಭಿವೃದ್ಧಿ ನಿಗಮದಡಿಯಲ್ಲಿ 15 ಕೋಟಿ ರೂ ವೆಚ್ಚದಲ್ಲಿ ರಸ್ತೆ ಮತ್ತು ಕುಡಿಯವ ನೀರಿನ ಯೋಜನೆಗಳು ನಡೆದಿವೆ ಎಂದು ಶಾಸಕ ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಐಕಳ ಗ್ರಾಮ ಪಂಚಾಯತ್ ವ್ಯಾಪ್ತಿಯ ನೆಲ್ಲಿಗುಡ್ಡೆ ರಸ್ತೆ ಡಾಮರೀಕರಣ ಕಾಮಗಾರಿ ಉದ್ಘಾಟಿಸಿ ಮಾತನಾಡಿದರು.
೫ಲಕ್ಷರೂ ಶಾಸಕರ ನಿಧಿ, ೫ಲಕ್ಷರೂ ಮಲೆನಾಡು ಅಭಿವೃದ್ಧಿ ಹಾಗೂ ದಾನಿಗಳ ನೆರವಿನಿಂದ ಸುಮಾರು 15 ಲಕ್ಷರೂ ವೆಚ್ಚದಲ್ಲಿ ಕಾಮಗಾರಿ ನಡೆದಿದೆ ಎಂದರು.
ಈ ಸಂದರ್ಭ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿವಾಕರ ಚೌಟ, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೋ, ಧನಪಾಲ್, ಕೃಷ್ಣ ಮಾರ್ಲ, ದುರ್ಗಾಪ್ರಸಾದ್ ಹೆಗ್ಡೆ, ಜಯಪಾಲ ಶೆಟ್ಟಿ, ಸ್ವರಾಜ್ ಶೆಟ್ಟಿ, ಸೆವ್ರಿನ್ ಲೋಬೋ, ಯೋಗೀಶ್ ಕೋಟ್ಯಾನ್, ಡೊಲ್ಪಿ ಸಂತುಮಾಯೋರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-14061705

Comments

comments

Comments are closed.

Read previous post:
Kinnigoli-14061704
ಕಟೀಲು : ಕಾಮಗಾರಿ ನಾಮಪಲಕ ಹಾನಿ

ಕಿನ್ನಿಗೋಳಿ : ಕಟೀಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡಿಗೆರೆ ಸಮೀಪದ ಕೊಂಡೇಲ ಮದಕದ ಕಾಂಕ್ರಿಟೀಕರಣ ರಸ್ತೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಈಶ್ವರ್ ಕಟೀಲು ಅವರ ಮತ್ತು ಇತರ ಅನುದಾನಗಳಲ್ಲಿ...

Close