ಬಾಲಕಿ ಬರೆದ ಪತ್ರಕ್ಕೆ ಸ್ಪಂದಿಸಿದ ಇಲಾಖೆ,

ಕಿನ್ನಿಗೋಳಿ: ರೈಲ್ವೆ ಗೇಟ್ ಬಳಿ ಮೇಲ್ಸೇತುವೆ ನಿರ್ಮಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡಬೇಕು ಎಂದು ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದು ಒತ್ತಾಯಿಸಿದ ಕಿನ್ನಿಗೋಳಿ ಸಮೀಪದ ಶಿಮಂತೂರು ಶಾರಾದ ಮೊಡೆಲ್ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ದೃತಿ ಕುಲಾಲ್ ಪತ್ರಕ್ಕೆ ತ್ವರಿತವಾಗಿ ರೈಲ್ವೆ ಇಲಾಖೆಯಿಂದ ಉತ್ತರ ಬಂದಿದೆ,

ಕಿನ್ನಿಗೋಳಿ ಮಂಗಳೂರು ಮುಖ್ಯ ರಸ್ತೆಯ ಹಳೆಯಂಗಡಿಯ ಬಳಿಯ ಇಂದಿರಾನಗರದ ರೈಲ್ವೆ ಗೇಟ್ ನಿಂದ ಪ್ರಯಾಣಿಕರಿಗೆ ಆಗುವ ಸಮಸ್ಯೆ ಬಗ್ಗೆ ಪ್ರಧಾನಿಯವರಿಗೆ ಮನವರಿಕೆ ಆಗುವಂತೆ ಪತ್ರ ಬರೆದು ಮೇಲ್ಸೇತುವೆ ನಿರ್ಮಿಸಬೇಕೆಂದು ವಿನಂತಿಸಿಕೊಂಡಿದ್ದಳು. ಪತ್ರಕ್ಕೆ ಸ್ಪಂದಿಸಿದ ಪ್ರಧಾನ ಮಂತ್ರಿ ಕಚೇರಿಯಿಂದ ದೃತಿ ತಂದೆ ರಮೇಶ್ ಕುಲಾಲ್ ಗೆ ಕರೆ ಬಂದಿದ್ದು ಈ ಬಗ್ಗೆ ವಿಚಾರಿಸಿ, ರೈಲ್ವೇ ಇಲಾಖೆಗೆ ಮಾಹಿತಿ ನೀಡಿ ಇದರ ಬಗ್ಗೆ ಗಮನಹರಿಸುವಂತೆ ಸೂಚಿಸಲಾಗಿತ್ತು. ರೈಲ್ವೆ ಇಲಾಖೆ ಕೂಡಾ ದೂರವಾಣಿ ಮೂಲಕ ದೃತಿಯ ತಂದೆ ರಮೇಶ್ ಕುಲಾಲ್ ಅವರನ್ನು ಸಂಪರ್ಕಿಸಿ ರೈಲ್ವೇ ಗೇಟ್ ನ ಬಗ್ಗೆ ಸಂಪೂರ್ಣ ಮಾಹಿತಿ ಪಡೆದು, ಕೊರಿಯರ್ ಮೂಲಕ ದೃತಿ ಅವರಿಗೆ ಪತ್ರ ಬರೆದಿದ್ದಾರೆ.
ಗೇಟ್ ಸಮೀಪದಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಸ್ಥಳದ ಸಮಸ್ಯೆಯ ಬಗ್ಗೆ ಇಲಾಖೆ ಉಲ್ಲೇಖಿಸಿದ್ದು, ಮುಲ್ಕಿ ಮೂಡಬಿದ್ರಿ ಶಾಸಕರು ಮತ್ತು ದಕ್ಷಿಣ ಕನ್ನಡ ಸಂಸದರು ಈ ಮೊದಲೇ ಮೇಲ್ಸೇತುವೆ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ವಿದ್ಯಾರ್ಥಿನಿ ಮೇಲ್ಸೇತುವೆ ನಿರ್ಮಾಣಕ್ಕೆ ಪಣ ತೊಟ್ಟು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆ ಬಗ್ಗೆ ಪತ್ರ ಮುಖೇನ ದೂರು ನೀಡಲು ಮುಂದಾಗಿದ್ದಾಳೆ.
ಬಾಲಕಿ ತನ್ನ ತಂದೆಯ ಜೊತೆ ಕಿನ್ನಿಗೋಳಿಯಿಂದ ಸುರತ್ಕಲ್ ಗೆ ಮತ್ತು ಮಂಗಳೂರಿಗೆ ಹೆಚ್ಚಿನ ದಿನಗಳಲ್ಲಿ ಪ್ರಯಾಣಿಸುತ್ತಿದ್ದು ಇಂದಿರಾನಗರ ರೈಲ್ವೆ ಸಮಸ್ಯೆ ಬಗ್ಗೆ ಅರಿತಿದ್ದಳು, ಒಂದು ದಿನ ಇದೇ ಮಾರ್ಗವಾಗಿ ಸಂಚರಿಸುವಾಗ ರೈಲ್ವೆ ಗೇಟ್ ಹಾಕಲಾಗಿತ್ತು ಒಂದಡೆ ಸಾಲಾಗಿ ನಿಂತಿರುವ ವಾಹನಗಳ ಸರದಿ ಹಾಗೂ ರೈಲು ಬಾರದ ಕಾರಣ ರೈಲ್ವೆ ಗೇಟ್ ಮುಚ್ಚಿರುವ ಸ್ಥಿತಿಯಲ್ಲಿರುವ ಸಮಯ ಬಾಲಕಿ ಪ್ರಯಾಣಿಸುತ್ತಿದ್ದ ಬಸ್ ನ ಸಮೀಪದಲ್ಲೇ ಅಂಬುಲೆನ್ಸ್ ಒಂದು ನಿಂತಿದ್ದು ಅದರಲ್ಲಿ ಗರ್ಭಿಣಿ ಮಹಿಳೆ ಹೆರಿಗೆ ನೋವಿನಿಂದ ಬಳಲುತ್ತಿದ್ದಳು. ಅದನ್ನು ತಂದೆ ರಮೇಶ್ ಕುಮಾರ್ ಬಳಿ ಕೇಳಿ ತಿಳಿದ ಬಾಲಕಿ ಈ ಬಗ್ಗೆ ಪೋಲಿಸ್ ಅವರಿಗೆ ದೂರು ನೀಡುವ ಎಂದು ತಂದೆಯ ಬಳಿ ಹೇಳಿದ್ದು, ದೂರು ನೀಡಲು ಸಾದ್ಯವಿಲ್ಲ ಎಂದು ಗೊತ್ತಾದಾಗ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವ ಆಲೋಚನೆ ಹೊಳೆಯಿತು. ತನ್ನ ತಂದೆ ಮತ್ತಿತ್ತರ ಸಹಾಯ ಪಡೆದು ಜನನಿಬಿಡ ರಸ್ತೆ ಹಾಗೂ ಇಂದಿರಾನಗರ ರೈಲ್ವೇ ಗೇಟ್ ಸಮಸ್ಯೆಯ ಬಗ್ಗೆ ಸುಮಾರು ಮೂರು ಪುಟದಷ್ಟು ಬರೆದು ತನ್ನ ಹಸ್ತಾಕ್ಷರದಲ್ಲೇ ಇರುವ ಪತ್ರವನ್ನು ಮೋದಿಯವರಿಗೆ ಪತ್ರ ರವಾನಿಸಿದಳು. ಪ್ರತ್ಯುತ್ತರವಾಗಿ ಪ್ರಧಾನಿ ಕಚೇರಿ ಮತ್ತು ಪೋಲಿಸ್ ಇಲಾಖೆಯಿಂದ ಕರೆ ಬಂದಿದ್ದು ಒಂದು ತಿಂಗಳ ಒಳಗಾಗಿ ಪತ್ರಕ್ಕೆ ಉತ್ತರ ಸಿಕ್ಕಿದೆ.

ಮೂಲತಃ ಪುತ್ತೂರು ನಿವಾಸಿಯಾದ ರಮೇಶ್ ಕುಲಾಲ್ ಮತ್ತು ಕುಸುಮ ದಂಪತಿಗಳು ಟೈಲರಿಂಗ್ ವೃತ್ತಿಯನ್ನು ನಿರ್ವಹಿಸುತ್ತಿದ್ದಾರೆ. ಕಿನ್ನಿಗೋಳಿ ಸಮೀಪದ ಪದ್ಮನೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಎರಡು ಮಂದಿ ಹೆಣ್ಣು ಮಕ್ಕಳಲ್ಲಿ ಮೊದಲನೆಯವಳಾದ ಧೃತಿ ಕಿನ್ನಿಗೋಳಿ ಸಮೀಪದ ಶಾರದಾ ಮೊಡೆಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ 6 ತರಗತಿಯಲ್ಲಿ ಕಲಿಯುತ್ತಿದ್ದು ಬಹುಮುಖ ಪ್ರತಿಭೆ ಯೋಗ ,ಸಂಗೀತ, ಕರಾಟೆ, ಈಜು, ನೃತ್ಯ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಎತ್ತಿದ ಕೈ, ಕಿನ್ನಿಗೋಳಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ 10 ವರ್ಷದ ಈ ಬಾಲಕಿ 14 ವರ್ಷ ಪ್ರಾಯದ ಮದ್ಯ ಪ್ರದೇಶದ ಪೈಟರ್ ಶೋಭಾಳನ್ನು ಸೋಲಿಸಿ, ಚಿನ್ನದ ಪದಕ ಪಡೆದು ಅಂತರಾಷ್ತ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಳು. ಕೇವಲ ಮೂರು ವರ್ಷದಲ್ಲಿ 11 ಚಿನ್ನದ ಪದಕ 4ಬೆಳ್ಳಿಯ ಪದಕ ಪಡೆದು ದೊಡ್ಡ ಸಾಧನೆ ಮಾಡಿದ್ದಾಳೆ, ಈ ತಿಂಗಳ ಕೊನೆಯಲ್ಲಿ ಮದ್ಯಪ್ರದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಕರಾಟೆ ಸ್ಪರ್ದೆಯಲ್ಲಿ ಭಾಗವಹಿಸಲಿದ್ದು, ಈ ವರ್ಷ ಮಲೇಶಿಯದಲ್ಲಿ ನಡೆಯಲಿರುವ ಕರಾಟೆ ಸ್ಪರ್ಧೆಗೂ ಆಯ್ಕೆಯಾಗಿದ್ದಾಳೆ, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನ ಸ್ವೀಕರಿಸಿದ ಈಕೆಯ ಕುಟುಂಬ ಆರ್ಥಿಕವಾಗಿ ಹಿಂದುಳಿದಿದ್ದು ಆ ಕಾರಣ ಅನೇಕ ಸದವಕಾಶಗಳನ್ನು ಕಳೆದುಕೊಳ್ಳಬೇಕಾಗಿ ಬಂದಿದೆ. ಇಂತಹ ಸಾಧನೆ ಮಾಡಿದರೆ ದೇಶದ ಯಶಸ್ಸಿನ ಕಿರೀಟಕ್ಕೆ ಇನ್ನೊಂದು ಗರಿಯಾಗಲಿದ್ದಾಳೆ.

Kinnigoli-16061703 Kinnigoli-16061704

Comments

comments

Comments are closed.

Read previous post:
Kinnigoli-16061702
ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ: ಮೆನ್ನಬೆಟ್ಟು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪ.ಜಾತಿ ಹಾಗೂ ಪ.ಪಂಗಡದ ಶಾಲಾ ಮಕ್ಕಳಿಗೆ ಪ.ಜಾತಿ ಮತ್ತು ಪ.ಪಂಗಡದ ಶ್ರೇಯೋಭಿವೃದ್ದಿ ನಿಯಿಂದ ಉಚಿತ ಪುಸ್ತಕಗಳನ್ನು ಬುಧವಾರ ಮಂಗಳೂರು ತಾಲೂಕು ಪಂಚಾಯಿತಿ...

Close