ಕಟೀಲು ತಾಳಮದ್ದಲೆ ಸಪ್ತಾಹ

ಕಟೀಲು: ಯಕ್ಷಗಾನ ತಾಳಮದ್ದಳೆ ಮೂಲಕವಾಗಿ ಜನರಿಗೆ ಧರ್ಮ ಭೋಧನೆ ಧರ್ಮ ಜಾಗೃತಿ , ಪುರಾಣ ಕಥೆಗಳ ಮೂಲಕವಾಗಿ ಜ್ಞಾನ ಯಜ್ಞ ನಡೆಯುತ್ತಿದೆ ಎಂದು ವಿದ್ವಾನ್ ಪಂಜ ಭಾಸ್ಕರ ಭಟ್ ಹೇಳಿದರು.
ಕಟೀಲು ದೇವಸ್ಥಾನದ ಸರಸ್ವತಿ ಸದನದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ೧೩ನೇ ವರ್ಷದ ತಾಳಮದ್ದಲೆ ಸಪ್ತಾಹ ಮಹೇಂದ್ರ ಚರಿತಮ್ ಉದ್ಘಾಟಿಸಿ ಮಾತನಾಡಿ ಕಟೀಲು ಭ್ರಾಮರೀಗೆ ಯಕ್ಷಗಾನವೆಂದರೇ ತುಂಬಾ ಪ್ರೀತಿ ಕಲೆಯ ಆರಾಧನೆ ನಡೆಯುತ್ತಿದೆ ಎಂದು ಹೇಳಿದರು.
ದೇವಳದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ ಶುಭಹಾರೈಸಿದರು. ಕಟೀಲು ದೇವಳದ ಅರ್ಚಕರಾದ ಅನಂತಪದ್ಮನಾಭ ಆಸ್ರಣ್ಣ , ಕೊಡೆತ್ತೂರು ಗುತ್ತು ಸುಧೀರ್ ಶೆಟ್ಟಿ , ಕೊಡೆತ್ತೂರು ಗುತ್ತು ಪ್ರವೀಣ್ ದಾಸ್ ಭಂಡಾರಿ, ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತ , ಹಿರಿಯ ಅರ್ಥಧಾರಿಗಳಾದ ಮೂಡಂಬಲು ಗೋಪಲಕೃಷ್ಣ ಶಾಸ್ತ್ರಿ, , ಡಾ| ಎಂ. ಪ್ರಭಾಕರ ಜೋಷಿ, ಯಕ್ಷಗಾನ ಬಯಲಾಟ ಆಕಾಡೆಮಿಯ ಸದಸ್ಯ ತಾರಾನಾಥ ಬಲ್ಯಾಯ , ಉದ್ಯಮಿ ಶ್ರೀಧರ ಶೆಟ್ಟಿ ಮಾಣಿಲ, ದಯಾನಂದ ಮಾಡ ಉಪಸ್ಥಿತರಿದ್ದರು. ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿ ಪ್ರಸ್ತಾವನೆಗೈದರು. ಶಿಕ್ಷಕ ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kinnigoli-20061701

Comments

comments

Comments are closed.

Read previous post:
Kinnigoli-200617020
ಶೇಣಿ ಸಂಸ್ಮರಣೆ, ಸನ್ಮಾನ, ತಾಳಮದ್ದಳೆ

ಕಿನ್ನಿಗೋಳಿ : ಶೇಣಿಯವರ ಸ್ಮರಣ ಶಕ್ತಿ ಹಾಗೂ ತಾಳಮದ್ದಳೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಕಲಾವಿಮರ್ಶಕ ಹಿರಿಯ ಪತ್ರಕರ್ತ ಕೆ. ಎಲ್ ಕುಂಡಂತಾಯ ಹೇಳಿದರು. ಶೇಣಿ ಗೋಪಾಲಕೃಷ್ಣ ಭಟ್...

Close