ಕಿನ್ನಿಗೋಳಿ : ಸ್ಟುಡಿಯೋಗೆ ಆಕಸ್ಮಿಕ ಬೆಂಕಿ

ಕಿನ್ನಿಗೋಳಿ: ಕಿನ್ನಿಗೋಳಿ ಮುಖ್ಯ ರಸ್ತೆಯ ಪಕ್ಕದ ಪ್ರತಿಮಾ ಸ್ಟುಡಿಯೋ ಕಟ್ಟಡ ಆಕಸ್ಮಿಕವಾಗಿ ಬೆಂಕಿಗಾಹುತಿಯಾದ ಘಟನೆ ಭಾನುವಾರ ತಡ ರಾತ್ರಿ ನಡೆದಿದೆ.
ಹಲವು ವರ್ಷಗಳಿಂದ ಕಾರ್ಯಚರಿಸುತ್ತಿರುವ ಸೇಸಪ್ಪ ಸಾಲಿಯಾನ್ ಮಾಲಕತ್ವದ ಪ್ರತಿಮಾ ಸ್ಟುಡಿಯೋ ಕಟ್ಟಡದ ಪ್ರತಿಮಾ ಸ್ಟುಡಿಯೋ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು ಕಟ್ಟಡದ ಒಂದು ಪಾರ್ಶ್ವದಲ್ಲಿ ಬಾಡಿಗೆಗೆ ಇರುವ ಪಿ. ಸತೀಶ್ ರಾವ್ ಅವರ ಸ್ವಾತಿ ಸ್ವೀಟ್ಸ್ ಬೇಕರಿಗೂ ಸಾಕಷ್ಟು ಹಾನಿಯಾಗಿದೆ.
ಸರಿಸುಮಾರು ಹತ್ತು ಗಂಟೆ ವೇಳೆಗೆ ಬೆಂಕಿ ಕಾಣಿಸಿದೆ ಎನ್ನಲಾಗುತ್ತಿದ್ದು ಇದ್ದಕ್ಕಿದ್ದಂತೆಯೇ ಬೆಂಕಿಯ ಜ್ವಾಲೆ ಮೊದಲ ಮಹಡಿಗೂ ಹಬ್ಬಿದ್ದನ್ನು ಕಂಡ ಸ್ಟುಡಿಯೋ ಮುಂಭಾಗದಲ್ಲಿನ ಎಟಿಎಂ ಸಿಬಂದಿ ಗಮನಿಸಿ, ಸ್ಟುಡಿಯೋ ಮಾಲಿಕರಿಗೆ ತಿಳಿಸಿದ್ದು ತಕ್ಷಣ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಮಂಗಳೂರು ಅಥವಾ ಮೂಡಬಿದಿರೆಯಿಂದ ಅಗ್ನಿಶಾಮಕ ಆಗಮಿಸಬೇಕಾದ್ದರಿಂದ ಸಾಕಷ್ಟು ಹಾನಿಯಾಗಿತ್ತು. ಈ ನಡುವೆ ಬೆಂಕಿ ನಂದಿಸಲು ಸ್ಥಳೀಯರು ಪ್ರಯತ್ನಿಸಿದ್ದು, ಜನರೇಟರ್ ಗೆ ಅಳವಡಿಸಲಾಗಿದ್ದ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು, ಬೆಂಕಿಯ ಜ್ವಾಲೆ ಇನ್ನಷ್ಟು ಪಸರಿಸಿತ್ತು. ನಂತರ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಸಾರ್ವಜನಿಕರ ಸಹಕಾರದಿಂದ ಬೆಂಕಿ ನಂದಿಸಲು ಪ್ರಾರಂಭಿಸಿ ನೀರು ಖಾಲಿಯಾದಾಗ ಮಂಗಳೂರಿಂದ ಇನ್ನೊಂದು ಟ್ಯಾಂಕರ್ ನೀರನ್ನು ತಂದು ಬೆಂಕಿ ನಂದಿಸಲಾಯಿತು. ಸ್ಟುಡಿಯೋ ಪಕ್ಕದ ಸ್ವಾತಿ ಸ್ವೀಟ್ಸ್ ನಲ್ಲಿದ್ದ ಬೇಕರಿ ವಸ್ತುಗಳನ್ನು ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ಸೇರಿ ಪಕ್ಕದ ಅಂಗಡಿ ಕೋಣೆಗೆ ಸ್ಥಳಾಂತರಿಸಿದರು.
ಕುಸಿದ ಮಹಡಿ
ಬೆಂಕಿಗಾಹುತಿಯಾದ ಕಟ್ಟಡ ಮರದ ಮೇಲ್ಚಾವಣಿ (ಮುಚ್ಚಿಗೆ) ಹೊಂದಿತ್ತು. ಬೆಂಕಿ ನಂದಿಸಲು ಅಗ್ನಿ ಶಾಮಕ ದಳದ ಸಿಬಂದಿ ಮತ್ತು ಸಾರ್ವಜನಿಕರು ಪ್ರಥಮ ಮಹಡಿಗೆ ಹೋದ ಸಂದರ್ಭ ಮಹಡಿ ಸಂಪೂರ್ಣ ಕುಸಿದು ಅಗ್ನಿ ಶಾಮಕ ದಳದ ಸಿಬಂದ್ದಿಗಳಾದ ಅಬ್ದುಲ್ ಹಮೀದ್, ವಿಜಯ ದೇವಾಡಿಗ, ಕೇಶವ, ಮತ್ತು ಸ್ಥಳೀಯ ನಿವಾಸಿಗಳಾದ ಇಬ್ರಾಹಿಂ, ಹನೀಪ್ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಲಕ್ಷಾಂತರ ರೂಪಾಯಿ ನಷ್ಟ
ಬೆಂಕಿ ಅವಘಡದಿಂದ ಸುಮಾರು 25ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ ಎಂದು ಅಂದಜಿಸಲಾಗಿದೆ. ಸ್ಟುಡಿಯೋದಲ್ಲಿ ಕ್ಯಾಮರ, 2 ಕಂಫ್ಯೂಟರ್, 2 ಪ್ರಿಂಟರ್, 1 ಸ್ಕ್ಯಾನರ್, ಜೆರಾಕ್ಸ್ ಮಿಶನ್, ಟಿವಿ, ಜನರೇಟರ್, ಹಾರ್ಡ್ ಡಿಸ್ಕ್, ಮದುವೆ ಸಿಡಿಗಳು, ಫೋಟೋ ಪ್ರೇಮ್‌ಗಳು, ಲ್ಯಾಮಿನೇಶನ್ ಪೋಟೋಗಳು, ಪೀಠೋಪಕರಣಗಳು ಹಾಗೂ ಹಲವು ವರ್ಷಗಳ ಫೋಟೋ ದಾಖಲೆಗಳು ಮತ್ತಿತರ ವಸ್ತುಗಳು ಸುಟ್ಟು ಕರಕಲಾಗಿದೆ.
ಸ್ಥಳಕ್ಕೆ ಮುಲ್ಕಿ ವಿಶೇಷ ತಹಶೀಲ್ದಾರ ಕಿಶೋರ್ ಕುಮಾರ್, ಗ್ರಾಮಕರಣಿಕ ಕಿರಣ್ ದ.ಕ. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ದ.ಕ. ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಮೋರ್ಗನ್ ವಿಲಿಯಂ ಭೇಟಿ ನೀಡಿದ್ದಾರೆ.

Kinnigoli-200617015 Kinnigoli-200617016 Kinnigoli-200617017 Kinnigoli-200617018

Kinnigoli-20061708 Kinnigoli-20061709 Kinnigoli-200617010 Kinnigoli-200617011 Kinnigoli-200617012 Kinnigoli-200617013 Kinnigoli-200617014

 

Comments

comments

Comments are closed.