ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಸರಕಾರ ಬದ್ದವಾಗಿದೆ

ಕಿನ್ನಿಗೋಳಿ: ವಿವಿಧ ಯೋಜನೆಗಳ ಮೂಲಕ ಸ್ವಾವಲಂಬಿಗಳಾಗಿ ಅಲ್ಪಸಂಖ್ಯಾತರ ಮುಖ್ಯವಾಹಿನಿಗೆ ಬರಬೇಕು. ರಾಜ್ಯ ಸರಕಾರವು ಅಲ್ಪಸಂಖ್ಯಾತ ವರ್ಗದ ಕಲ್ಯಾಣಕ್ಕೆ ಬದ್ಧವಾಗಿದೆ. ಸಾಮರಸ್ಯದ ಸಮಬಾಳ್ವೆಯ ಮೂಲಕ ಸಮಾಜದ ಬಗ್ಗೆ ಚಿಂತನೆ ನಡೆಸಬೇಕು ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಹಳೆಯಂಗಡಿ ಸಾಗ್ ಮಸೀದಿಗೆ ರಾಜ್ಯ ಸರಕಾರದ ಆರಾಧನಾ ಯೋಜನೆಯಲ್ಲಿ ಮಂಜೂರಾದ ಒಂದು ಲಕ್ಷ ರೂ. ಚೆಕ್‌ನ್ನು ಆಡಳಿತ ಮಂಡಳಿಗೆ ವಿತರಿಸಿ ಮಾತನಾಡಿದರು.
ಮಸೀದಿಯ ಆಡಳಿತ ಮಂಡಳಿಯ ಅಬ್ದುಲ್ ರಜಾಕ್, ಮೂಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧನಂಜಯ ಮಟ್ಟು, ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೋ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಚ್.ವಸಂತ ಬೆರ್ನಾಡ್, ಕರಾವಳಿ ಪ್ರಾಧಿಕಾರದ ಸದಸ್ಯ ಸಾಹುಲ್ ಹಮೀದ್ ಬಜಪೆ, ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಹಮೀದ್ ಸಾಗ್, ಸ್ಥಳೀಯ ನಾಯಕರಾದ ಪೂವಪ್ಪ ಅಂಚನ್, ಧನ್‌ರಾಜ್ ಕೋಟ್ಯಾನ್ ಸಸಿಹಿತ್ಲು, ಮಂಜುನಾಥ ಕಂಬಾರ ಕೆ.ಎಸ್.ರಾವ್.ನಗರ ಹಾಗೂ ಮಸೀದಿಯ ಆಡಳಿತ ಮಂಡಳಿಯ ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Kinnigoli-20061707

Comments

comments

Comments are closed.

Read previous post:
Kinnigoli-20061706
ಶಿಕ್ಷಣದಲ್ಲಿ ಭವಿಷ್ಯ ಉಜ್ವಲ

ಕಿನ್ನಿಗೋಳಿ: ಶಿಕ್ಷಣ ಸಂಸ್ಥೆಗಳ ನಿಯಮ ಅನುಸಾರವಾಗಿ ನಡೆದು ಪಾಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವೂ ಪೂರ್ಣ ಪ್ರಮಾಣದಲ್ಲಿತೊಡಗಿಸಿಕೊಂಡಾಗ ಭವಿಷ್ಯ ಉಜ್ವಲವಾಗುವುದು. ಎಂದು ಮೇರಿವೆಲ್ ಆಂಗ್ಲ ಮಾಧ್ಯಮ ಮುಖ್ಯ...

Close