ಶೇಣಿ ಸಂಸ್ಮರಣೆ, ಸನ್ಮಾನ, ತಾಳಮದ್ದಳೆ

ಕಿನ್ನಿಗೋಳಿ : ಶೇಣಿಯವರ ಸ್ಮರಣ ಶಕ್ತಿ ಹಾಗೂ ತಾಳಮದ್ದಳೆ ಕ್ಷೇತ್ರಕ್ಕೆ ಅವರ ಕೊಡುಗೆ ಅಪಾರ ಎಂದು ಕಲಾವಿಮರ್ಶಕ ಹಿರಿಯ ಪತ್ರಕರ್ತ ಕೆ. ಎಲ್ ಕುಂಡಂತಾಯ ಹೇಳಿದರು.
ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್ ( ರಿ ) ಸುರತ್ಕಲ್ , ಕಿನ್ನಿಗೋಳಿ ಯಕ್ಷಲಹರಿ ( ರಿ ) ಕಿನ್ನಿಗೋಳಿ, ಯುಗಪುರುಷ ಕಿನ್ನಿಗೋಳಿ ಸಂಯೋಜನೆಯಲ್ಲಿ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಬಾನುವಾರ ನಡೆದ ಶೇಣಿ ಶತಮಾನೋತ್ಸವ ಕಾರ್ಯಕ್ರಮ – ೧೯ ಇದರ ಅಂಗವಾಗಿ ಶೇಣಿ ಸಂಸ್ಮರಣೆ , ಸಮ್ಮಾನ, ತಾಳಮದ್ದಳೆ ಕಾರ್ಯಕ್ರಮದಲ್ಲಿ ಶೇಣಿ ಅವರ ಸಂಸ್ಮರಣೆ ಬಾಷಣಗೈದು ಮಾತನಾಡಿ ಯಕ್ಷಗಾನದಲ್ಲಿ ದಿಗ್ಗಜರಾಗಿ ಸಾಮಗ ಶೇಣಿ ಜೋಡಿ ಜನಮನ್ನಣೆ ಪಡೆದುಕೊಂಡಿದ್ದಾರೆ. ಎಂದು ಹೇಳಿದರು.
ಯಕ್ಷಗಾನ ಪ್ರಸಂಗಕರ್ತ ಶಿಮಂತೂರು ನಾರಾಯಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮೂಡಬಿದಿರೆಯ ಉದ್ಯಮಿ ಕಲಾ ಸಂಘಟಕ ಕೆ. ಶ್ರೀಪತಿ ಭಟ್ ಅವರನ್ನು ಸನ್ಮಾನಿಸಲಾಯಿತು, ಕೃಷ್ಣ ಪ್ರಕಾಶ್ ಉಳಿತ್ತಾಯ ಅಭಿನಂದನಾ ಭಾಷಣಗೈದರು. ಕಟೀಲು ದೇವಳ ಅರ್ಚಕ ಕೆ. ಲಕ್ಷ್ಮೀನಾರಾಯಣ ಆಸ್ರಣ್ಣ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಯುಗಪುರುಷ ಸಂಪಾದಕ ಕೆ. ಭುವನಾಭಿರಾಮ ಉಡುಪ, ಯಕ್ಷಲಹರಿ ಅಧ್ಯಕ್ಷ ಪಿ. ಸತೀಶ್ ರಾವ್, ಶೇಣಿ ಗೋಪಾಲಕೃಷ್ಣ ಭಟ್ ಚಾರಿಟೇಬಲ್ ಟ್ರಸ್ಟ್‌ನ ಪಿ. ವಿ. ರಾವ್ ಸುರತ್ಕಲ್, ಉಪನ್ಯಾಸಕಿ ಸಾವಿತ್ರಿ ಶಾಸ್ತ್ರಿ, ವಸಂತ ದೇವಾಡಿಗ ಮತ್ತಿತರರು ಉಪಸ್ಥಿತರಿದ್ದರು.

Kinnigoli-200617020

Comments

comments

Comments are closed.

Read previous post:
Kinnigoli-200617019
ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ದೃಡಕಲಶ

ಕಿನ್ನಿಗೋಳಿ: ಅತ್ತೂರು ಕೆಮ್ರಾಲ್ ಕಿಲೆಂಜೂರು ಗ್ರಾಮಕ್ಕೊಳಪಟ್ಟ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದಲ್ಲಿ ದೃಡಕಲಶ ನಡೆಯಿತು. ಈ ಸಂದರ್ಭ ಬ್ರಹ್ಮಶ್ರೀ ಶಿಬರೂರು ವೇದವ್ಯಾಸ ತಂತ್ರಿ, ಪವಿತ್ರ ಪಾಣಿ ಲಕ್ಷ್ಮೀನಾರಾಯಣ...

Close