ಶಿಕ್ಷಣ ನಮ್ಮೆಲ್ಲರ ಹಕ್ಕು

ಕಿನ್ನಿಗೋಳಿ: ಶಿಕ್ಷಣ ನಮ್ಮೆಲ್ಲರ ಹಕ್ಕು ಹೆಣ್ಣು ಮಕ್ಕಳು ಶಿಕ್ಷಣ ವಂಚಿತರಾಗದೆ ನೈತಿಕ ಮಾನವೀಯ ಮೌಲ್ಯಯುತ ವಾದ ಶಿಕ್ಷಣ ಪಡೆದಾಗ ಭವಿಷ್ಯದಲ್ಲಿ ಉತ್ತಮ ಪ್ರಜೆಯಾಗಬಲ್ಲಳು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ ವಾರ್ತಾ ಮತ್ತು ಪ್ರಚಾರ ಸಚಿವಾಲಯ ಮಂಗಳೂರು ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಶಿವಮೊಗ್ಗ, ಶಿಶು ಅಭಿವೃದ್ಧಿ ಯೋಜನಾ ಕಛೇರಿ, ಮಹಿಳಾ ಮತ್ತು ಮಕ್ಕಳ ಅಬಿವೃದ್ಧಿ ಇಲಾಖೆ ಮಂಗಳೂರು (ಗ್ರಾಮಾಂತರ), ದ.ಕ ಜಿಲ್ಲಾ ಪಂಚಾಯಿತಿ, ಮಂಗಳೂರು ತಾಲೂಕು ಪಂಚಾಯಿತಿ, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ, ಇವರ ಸಹಯೋಗದಿಂದ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಮಂಗಳವಾರ ನಡೆದ ಸ್ವಚ್ಚ ಭಾರತ್ ಅಭಿಯಾನ, ಹೆಣ್ಣು ಮಗು ರಕ್ಷಿಸಿ – ಹೆಣ್ಣು ಮಗುವಿಗೆ ಶಿಕ್ಷಣ ಕೊಡಿಸಿ ಯೋಗದ ಮಹತ್ವ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪತಂಜಲಿ ಯೋಗ ಕೇಂದ್ರದ ಯೋಗ ಗುರು ವಿವೇಕ ಮಾತನಾಡಿ ದೈಹಿಕ -ಮಾನಸಿಕ ಸ್ಥಿರತೆ ಹಾಗೂ ಆರೋಗ್ಯ ಭರಿತ ಜೀವನಕ್ಕೆ ಯೋಗ ಸಹಕಾರಿ ಎಂದು ಹೇಳಿದರು. ಇಲಾಖೆಯ ಉಪ ನಿರ್ದೇಶಕ ಕೆ. ಪಿ. ರಾಜೀವನ್ ಕಾರ್ಯಕ್ರಮದ ಮಹತ್ವದ ಬಗ್ಗೆ ತಿಳಿಸಿದರು ಎಸಿಡಿಪಿ ಭಾರತಿ ಮಹಿಳಾ ಸಬಲೀಕರಣದ ಬಗ್ಗೆ ಮಾಹಿತಿ ನೀಡಿದರು. ಇಲಾಖಾ ವತಿಯಿಂದ ಜನರಿಗೆ ರಸಪ್ರಶ್ನೆ ಸ್ಪರ್ಧೆ ನಡೆದು ವಿಜೇತರಿಗೆ ಪುಸ್ತಕಗಳನ್ನು ನೀಡಲಾಯಿತು.
ಈ ಸಂದರ್ಭ ದ.ಕ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕಸ್ತೂರಿ ಪಂಜ, ಜಿಲ್ಲಾ ಪಂಚಾಯಿತಿ ಸದಸ್ಯ ವಿನೋದ್ ಬೊಳ್ಳೂರು, ತಾ. ಪಂ. ಸದಸ್ಯರಾದ ಶರತ್ ಕುಬೆವೂರು, ದಿವಾಕರ ಕರ್ಕೇರಾ, ಶುಭಲತಾ ಶೆಟ್ಟಿ, ಮೆನ್ನಬೆಟ್ಟು ಗ್ರಾ. ಪಂ. ಉಪಾಧ್ಯಕ್ಷ ಮೊರ್ಗನ್ ವಿಲಿಯಂ, ಉಪಸ್ಥಿತರಿದ್ದರು.
ಇಲಾಖಾಧಿಕಾರಿ ದರ್ಶನ್ ಸ್ವಾಗತಿಸಿದರು. ಅಶ್ವಿನಿ ವಂದಿಸಿದರು ರೋಹಿತ್ ಕಾರ್ಯಕ್ರಮ ನಿರೂಪಿಸಿದರು.

ಕಾರ್ಯಕ್ರಮದ ಮೊದಲು ಕಿನ್ನಿಗೋಳಿ ಬಸ್ ನಿಲ್ದಾಣದಿಂದ ಯುಗಪುರುಷ ಸಭಾಭವನದ ತನಕ ಜಾಥ ನಡೆಯಿತು.
ಕಾರ್ಯಕ್ರಮದ ನಂತರ ಸ್ವಚ್ಛ ಭಾರತ, ಬೇಟಿ ಬಚಾವೊ ಬೇಟಿ ಪಡಾವೊ ಯಕ್ಷಗಾನ ಬಯಲಾಟ ನಡೆಯಿತು.

Kinnigoli-22061701 Kinnigoli-22061702 Kinnigoli-22061703 Kinnigoli-22061704 Kinnigoli-22061705Kinnigoli-22061709 Kinnigoli-22061706 Kinnigoli-22061707 Kinnigoli-22061708

 

Comments

comments

Comments are closed.

Read previous post:
Kinnigoli-20061701
ಕಟೀಲು ತಾಳಮದ್ದಲೆ ಸಪ್ತಾಹ

ಕಟೀಲು: ಯಕ್ಷಗಾನ ತಾಳಮದ್ದಳೆ ಮೂಲಕವಾಗಿ ಜನರಿಗೆ ಧರ್ಮ ಭೋಧನೆ ಧರ್ಮ ಜಾಗೃತಿ , ಪುರಾಣ ಕಥೆಗಳ ಮೂಲಕವಾಗಿ ಜ್ಞಾನ ಯಜ್ಞ ನಡೆಯುತ್ತಿದೆ ಎಂದು ವಿದ್ವಾನ್ ಪಂಜ ಭಾಸ್ಕರ...

Close