ಕೃಷಿ ಸಂಸ್ಕೃತಿ ವಿಚಾರಗಳ ಬಗ್ಗೆ ಒಲವಿರಬೇಕು

ಕಿನ್ನಿಗೋಳಿ: ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಜನಪದ ಆಚಾರ ವಿಚಾರಗಳ ಒಲವಿರುವ ಹಿರಿಯರು ಅದನ್ನು ಉಳಿಸಿಕೊಂಡು ಬಂದಿದ್ದು ಅದನ್ನು ಇಂದಿನ ಮಕ್ಕಳಿಗೆ ತಿಳಿಹೇಳುವ ಕಾರ್ಯ ಮಾಡಬೇಕು. ಯುವ ಸಮುದಾಯ ಇದನ್ನು ಅರ್ಥೈಸಿದರೆ ಮಾತ್ರ ನಮ್ಮತನ ಉಳಿಯುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷೀ ಶಾಂತಿಗೋಡು ಹೇಳಿದರು.
ಹಳೆಯಂಗಡಿ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಬಾಕಿಮಾರು ಗದ್ದೆಯಲ್ಲಿ ಶನಿವಾರ ನಡೆದ ತುಳುನಾಡ ಕೃಷಿ ಜನಪದೋತ್ಸವದ ಪ್ರಾಥಮಿಕ ಮತ್ತು ಫ್ರೌಢಶಾಲಾ ವಿದ್ಯಾರ್ಥಿಗಳ ಕೆಸರುಗದ್ದೆ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಿ ಮಾತನಾಡಿದರು.
ಕರ್ನಾಟಕ ಬ್ಯಾಂಕ್ ಜನರಲ್ ಮ್ಯಾನೇಜರ್ ಬಿ.ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಳದ ಮೊಕ್ತೇಸರ ಬಾಲಚಂದ್ರ ಭಟ್, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜಾ, ಮಾಜಿ ಅಧ್ಯಕ್ಷ ಸಂತೋಷ್‌ಕುಮಾರ್, ಹಳೆಯಂಗಡಿ ಸಾರ್ವಜನಿಕ ಗಣೇಶೋತ್ಸವ ಸೇವಾ ಸಮಿತಿ ಅಧ್ಯಕ್ಷ ನರೇಂದ್ರ ಪ್ರಭು, ಮೂಲ್ಕಿ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರ, ಸಸಿಹಿತ್ಲು ರಂಗಸುದರ್ಶನ ಸಂಸ್ಥೆಯ ಪರಮಾನಂದ ಸಾಲ್ಯಾನ್, ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನದ ಧರ್ಮದರ್ಶಿ ಡಾ.ಯಾಜಿ ನಿರಂಜನ್ ಭಟ್, ದೇವಳದ ಮೊಕ್ತೇಸರ ಎಂ.ಶಶೀಂದ್ರಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುಧಾಕರ ಆರ್. ಅಮಿನ್ ಸ್ವಾಗತಿಸಿದರು, ಎಚ್.ರಾಮಚಂದ್ರ ಶೆಣೈ ವಂದಿಸಿದರು, ವಿನೋದ್ ಸಾಲ್ಯಾನ್ ಬೆಳ್ಳಾಯರು ನಿರೂಪಿಸಿದರು.

ಫಲಿತಾಂಶ:
ಕೆಸರುಗದ್ದೆ ಓಟ (ಪ್ರಾಥಮಿಕ)
ಬಾಲಕರ ವಿಭಾಗ : ಅಕ್ಷರ್ ವ್ಯಾಸ ಮಹರ್ಷಿ ಕಿಲ್ಪಾಡಿ (ಪ್ರ), ಅಮೃತ್ ವ್ಯಾಸ ಮಹರ್ಷಿ ಕಿಲ್ಪಾಡಿ (ದ್ವಿ),
ಬಾಲಕಿಯರ ವಿಭಾಗ : ಪ್ರೀತಿ ವ್ಯಾಸ ಮಹರ್ಷಿ ಕಿಲ್ಪಾಡಿ (ಪ್ರ), ಲಮಿಷಾ ಸಿಎಸ್‌ಐ ಕಾರ್ನಾಡು (ದ್ವಿ).
ಫ್ರೌಢಶಾಲೆ ಬಾಲಕರ ವಿಭಾಗ:
ದೀಕ್ಷಿತ್ ಕೆನರಾ ಹೈಸ್ಕೂಲ್ ಉರ್ವ (ಪ್ರ), ಕನಿಷ್ಕ್ ನಾರಾಯಣಗುರು ಮೂಲ್ಕಿ (ದ್ವಿ), ಬಾಲಕಿಯರು : ಪ್ರಾಂಜಲಿ ಪಿ. ಸಿಎಸ್‌ಐ ಕಾರ್ನಾಡು (ಪ್ರ), ಚಾರ್ಲಿ ಸರಸ್ವತಿ ಸಿಎಸ್‌ಐ ಕಾರ್ನಾಡು (ದ್ವಿ).
ಹಿಮ್ಮುಖ ಓಟ (ಪ್ರಾಥಮಿಕ) :
ಬಾಲಕರು : ಅಮೃಜ್ ವ್ಯಾಸ ಮಹರ್ಷಿ ಕಿಲ್ಪಾಡಿ (ಪ್ರ), ವಿನಾಯಕ ಎನ್‌ಐಟಿಕೆ ಸುರತ್ಕಲ್ (ದ್ವಿ),
ಬಾಲಕಿಯರು : ಶಾಹಿದಾ ಸಿಎಸ್‌ಐ ಕಾರ್ನಾಡು (ಪ್ರ), ಅನ್ನಪೂರ್ಣ ವ್ಯಾಸ ಮಹರ್ಷಿ ಕಿಲ್ಪಾಡಿ(ದ್ವಿ).
ಹಿಮ್ಮುಖ ಓಟ ಫ್ರೌಢಶಾಲೆ
ಬಾಲಕರು : ಪೃಥ್ವಿ ದೇವಾಂಗ ಕೆನರಾ ಹೈಸ್ಕೂಲ್ ಉರ್ವ (ಪ್ರ), ಯಶ್ವಿನ್ ವಿದ್ಯಾದಾಯಿನಿ ಸುರತ್ಕಲ್ (ದ್ವಿ),
ಬಾಲಕಿಯರು : ಚಾರ್ಲಿ ಸರಸ್ವತಿ ಸಿಎಸ್‌ಐ ಕಾರ್ನಾಡು (ಪ್ರ), ಪ್ರಾಂಜಲಿ ಸಿಎಸ್‌ಐ ಕಾರ್ನಾಡು (ದ್ವಿ).
ಹಗ್ಗ ಜಗ್ಗಾಟ : (ಪ್ರಾಥಮಿಕ)
ಬಾಲಕರು : ವ್ಯಾಸ ಮಹರ್ಷಿ ಕಿಲ್ಪಾಡಿ (ಪ್ರ), ಶ್ರೀ ದುರ್ಗಾಪರಮೇಶ್ವರೀ ಕಟೀಲು (ದ್ವಿ), ಬಾಲಕಿಯರು : ವಿದ್ಯಾದಾಯಿನಿ ಸುರತ್ಕಲ್ (ಪ್ರ), ಶ್ರೀ ದುರ್ಗಾಪರಮೇಶ್ವರೀ ಕಟೀಲು (ದ್ವಿ),
ಹಗ್ಗ ಜಗ್ಗಾಟ : ಫ್ರೌಢಶಾಲಾ :
ಬಾಲಕರು ಳ ಮೇರಿವೆಲ್ ಕಿನ್ನಿಗೋಳಿ (ಪ್ರ), ಎಸ್‌ಐಟಿಕೆ ಸುರತ್ಕಲ್ (ದ್ವಿ),
ಬಾಲಕಿಯರು : ಶ್ರೀ ದುರ್ಗಾಪರಮೇಶ್ವರೀ ಕಟೀಲು (ಪ್ರ), ವ್ಯಾಸ ಮಹರ್ಷಿ ಕಿಲ್ಪಾಡಿ(ದ್ವಿ).
ಜಾನಪದ ಸಮೂಹ ನೃತ್ಯ : (ಪ್ರಾಥಮಿಕ):
ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಂತಾವರ (ಪ್ರ), ಶ್ರೀ ಸುಬ್ರಹ್ಮ ಹಿ.ಪ್ರಾ.ಶಾಲೆ ತೋಕೂರು (ದ್ವಿ).
ಜಾನಪದ ಸಮೂಹ ನೃತ್ಯ : ಫ್ರೌಢಶಾಲೆ:
ಮೇರಿವೆಲ್ ಕಿನ್ನಿಗೋಳಿ (ಪ್ರ), ರಾಮಣ್ಣ ಶೆಟ್ಟಿ ಫ್ರೌಢಶಾಲೆ ತೋಕೂರು (ದ್ವಿ).
ವಿಶೇಷ ಪ್ರಶಸ್ತಿ : (ಪ್ರಾಥಮಿಕ) ವಿನಾಯಕ ಎಸ್‌ಐಟಿಕೆ ಸುರತ್ಕಲ್ ಮತ್ತು ಪ್ರಿಯಾ ಶ್ರೀ ದುರ್ಗಾಪರಮೇಶ್ವರೀ ಕಟೀಲು. ಫ್ರೌಢಶಾಲೆ : ದೀಕ್ಷಿತ್ ಕೆನರಾ ಉರ್ವ ಮತ್ತು ಚಾರ್ಲಿ ಸರಸ್ವತಿ ಸಿಎಸ್‌ಐ ಕಾರ್ನಾಡು.

Kinnigoli-30061703 Kinnigoli-30061704 Kinnigoli-30061705 Kinnigoli-30061706 Kinnigoli-30061707 Kinnigoli-30061708 Kinnigoli-30061709 Kinnigoli-300617010

 

Comments

comments

Comments are closed.

Read previous post:
Kinnigoli-300617012
ಕಿನ್ನಿಗೋಳಿ -ಈದುಲ್ ಫಿತರ್

ಕಿನ್ನಿಗೋಳಿ:  ಕಿನ್ನಿಗೋಳಿ ಮಸೀದಿ ಈದುಲ್ ಫಿತರ್

Close