ಶಿಕ್ಷಣ ಭವಿಷ್ಯದ ಮೆಟ್ಟಿಲು

ಕಿನ್ನಿಗೋಳಿ: ಶಿಕ್ಷಣ ಭವಿಷ್ಯದ ಮೆಟ್ಟಿಲು ಶಿಕ್ಷಣದ ಮಹತ್ವ ಬಗ್ಗೆ ಗ್ರಾಮಸ್ಥರಲ್ಲಿ ಪ್ರಜ್ಞಾವಂತರು ತಿಳಿಹೇಳಬೇಕು. ಶಿಕ್ಷಣಕ್ಕಾಗಿ ಸರಕಾರ ನೀಡುವ ಅನೇಕ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಫಿಲೋಮಿನಾ ಸಿಕ್ವೇರ ಹೇಳಿದರು.
ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಕ್ಕೊಳಪಟ್ಟ ಲಿಟ್ಲ್ ಫವರ್ , ಗುತ್ತಕಾಡು , ಪದ್ಮನೂರು, ಪುನರೂರು, ಎಳತ್ತೂರು ಶಾಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸುಮಾರು 180 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿ ಮಾತನಾಡಿದರು.
ಈ ಸಂದರ್ಭ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸುಜಾತ ಪೂಜಾರಿ, ಪಂಚಾಯಿತಿ ಸದಸ್ಯರಾದ ದೇವಪ್ರಸಾದ್ ಪುನರೂರು, ಟಿ. ಎಚ್ ಮಯ್ಯದ್ದಿ , ಹೇಮಲತಾ, ಸೇವಂತಿ, ಚಂದ್ರಶೇಖರ , ಸುಲೋಚನ, ಸೇವಂತಿ, ಶರತ್ ಶೆಟ್ಟಿಗಾರ್, ಅರುಣ್, ಸಂತೋಷ್ , ಹಾಗೂ ಶಾಲಾ ಶಿಕ್ಷಕರು ಮತ್ತಿತರರು ಉಅಪಸ್ಥಿತರಿದ್ದರು.
ಪಿಡಿಒ ಅರುಣ್ ಪ್ರದೀಪ್ ಡಿಸೋಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. Kinnigoli-27061701

Comments

comments

Comments are closed.

Read previous post:
Kinnigoli-300617010
ಕೃಷಿ ಸಂಸ್ಕೃತಿ ವಿಚಾರಗಳ ಬಗ್ಗೆ ಒಲವಿರಬೇಕು

ಕಿನ್ನಿಗೋಳಿ: ತುಳುನಾಡಿನ ಸಂಸ್ಕೃತಿ, ಸಂಸ್ಕಾರ, ಜನಪದ ಆಚಾರ ವಿಚಾರಗಳ ಒಲವಿರುವ ಹಿರಿಯರು ಅದನ್ನು ಉಳಿಸಿಕೊಂಡು ಬಂದಿದ್ದು ಅದನ್ನು ಇಂದಿನ ಮಕ್ಕಳಿಗೆ ತಿಳಿಹೇಳುವ ಕಾರ್ಯ ಮಾಡಬೇಕು. ಯುವ ಸಮುದಾಯ ಇದನ್ನು...

Close