ಹಳೆಯಂಗಡಿ -ವಿದ್ಯಾರ್ಥಿ ಸಂಘ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಮನೋವಿಕಸನಕ್ಕೂ ಪ್ರೋತ್ಸಾಹವನ್ನು ಶಿಕ್ಷಣ ಸಂಸ್ಥೆಗಳು ನೀಟಬೇಕು ಹಾಗಾದಾಗ ಭವಿಷ್ಯದಲ್ಲಿ ಭದ್ರವಾದ ಭಾರತವನ್ನು ನಿರ್ಮಾಣ ಮಾಡಬಹುದು. ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕೇಂದ್ರ ಸಮಿತಿ ಸದಸ್ಯ ಮಿಥುನ್ ರೈ ಹೇಳಿದರು.
ಹಳೆಯಂಗಡಿ ಶ್ರೀ ನಾರಾಯಣ ಸನಿಲ್ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿವಿಧ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಎಚ್.ವಸಂತ ಬೆರ್ನಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ ಸರಕಾರಿ ಶಿಕ್ಷಣ ಸಂಸ್ಥೆಯ ಬಗ್ಗೆ ವಿದ್ಯಾಭಿಮಾನಿಗಳಲ್ಲಿ ಹೆಚ್ಚಿನ ಅಭಿಮಾನ ಮೂಡಿಸಲು ನಿರಂಂತರವಾಗಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಸಂಘಗಳು ಹಮ್ಮಿಕೊಳ್ಳಬೇಕು ಎಂದರು.
ಕಾಲೇಜು ಪ್ರಿನ್ಸಿಪಾಲ್ ಜಯಶ್ರೀ ಅವರು ಎನ್‌ಎಸ್‌ಎಸ್ ಘಟಕ, ಕ್ರೀಡಾ ಸಂಘ, ತುಳು-ಕನ್ನಡ ಸಾಹಿತ್ಯ ಸಂಘ, ಪರಿಸರ ಸಂಘ, ವಿಜ್ಞಾನ ಸಂಘಗಳ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಭೋಧಿಸಿದರು.
ಹಳೆಯಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಅಬ್ದುಲ್ ಅಝೀಜ್ ಹಾಗೂ ಸಹಾಯಕಿ ಪ್ರಾಧ್ಯಾಪಕಿ ರೋಶನಿ ಯಶವಂತ್ ಶುಭ ಹಾರೈಸಿದರು.
ಉಪನ್ಯಾಸಕ ಅನಿಲ್ ಚೆರಿಯನ್ ಸ್ವಾಗತಿಸಿದರು, ವಿದ್ಯಾರ್ಥಿನಿ ನಿಶ್ಮಿತಾ ವಂದಿಸಿದರು, ಉಪನ್ಯಾಸಕರಾದ ರೇವತಿ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿದರು.

Kinnigoli-28061703

Comments

comments

Comments are closed.