ಪಾವಂಜೆ : ತುಳುನಾಡ ಕೃಷಿ ಜನಪದೋತ್ಸವ

ಕಿನ್ನಿಗೋಳಿ: ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳ ಬಾಕಿಮಾರು ಗದ್ದೆಯಲ್ಲಿ ಕೆಸರುಗದ್ದೆ ಕ್ರೀಡೋತ್ಸವ ಅಪಾರ ಜನಮನ್ನಣೆ ಗಳಿಸಿದ್ದಿ ಇದೀಗ ಜೂ.24 ಮತ್ತು 25ರಂದು 8ನೇ ವರ್ಷದ ಕೃಷಿ ಜನಪದೋತ್ಸವಕ್ಕೆ ಎಲ್ಲಾ ರೀತಿಯಲ್ಲೂ ವ್ಯವಸ್ಥೆ ಮಾಡಲಾಗಿದೆ. 25ಕ್ಕೂ ಹೆಚ್ಚು ಸಂಘ ಸಂಸ್ಥೆಗಳು ಕ್ರೀಡೋತ್ಸವದಲ್ಲಿ ಪರಸ್ಪರ ಕೈ ಜೋಡಿಸಿದೆ ಎಂದು ಕ್ರೀಡೋತ್ಸವದ ಪ್ರಮುಖ ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಚಂದ್ರಶೇಖರ ನಾನಿಲ್ ಹೇಳಿದರು.
ಹಳೆಯಂಗಡಿಯ ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಬಾಕಿಮಾರು ಗದ್ದೆಯಲ್ಲಿ ನಡೆಯಲಿರುವ ತುಳುನಾಡ ಕೃಷಿ ಜನಪದೋತ್ಸವ ಕಾರ್ಯಕ್ರಮದ ಪೂರ್ವ ಭಾವಿ ಸಭೆಯಲ್ಲಿ ಮಾಹಿತಿ ನೀಡಿ ಮಾತನಾಡಿದರು.
ಯುವಜನರನ್ನು ಕೃಷಿ ಬದುಕಿನತ್ತ ಸೆಳೆಯಲು ಹಾಗೂ ತುಳುನಾಡ ಸಂಸ್ಕೃತಿ ಆಚಾರ ವಿಚಾರ ಹಾಗೂ ಕ್ರೀಡೆಯ ಮೂಲಕ ಪಸರಿಸಲು ವೇದ ಕೃಷಿಕರಾದ ಕೆ.ಎಸ್.ನಿತ್ಯಾನಂದ ಅವರ ಪ್ರೇರಣೆಯಿಂದ ನಡೆಯಲಿರುವ ಈ ಜನಪದೋತ್ಸವದ ಜವಬ್ದಾರಿಗಳನ್ನು ವಿವಿಧ ಸಂಘ ಸಂಸ್ಥೆಗಳು ಸಾಂಘಿಕ ಪ್ರಯತ್ನ ಪಡುತ್ತಿವೆ ಎಂದರು.
ಪಾವಂಜೆ ಕ್ಷೇತ್ರದ ಆಡಳಿತ ಮೊಕ್ತೇಸರ ಎಂ.ಶಶೀಂದ್ರಕುಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ ಪಾವಂಜೆ ಕ್ಷೇತ್ರದಲ್ಲಿ ನಿರಂತರವಾಗಿ ಸಾಂಸ್ಕೃತಿಕತೆಯ ವಾತಾವರಣ ನಿರ್ಮಾಣ ಆದಂತೆ ಕೃಷಿ ಸಂಸ್ಕೃತಿ ಹಾಗೂ ಪ್ರಕೃತಿಯ ಆರಾಧನೆಯ ಮೂಲಕ ತುಳುನಾಡ ಕೃಷಿ ಜನಪದೋತ್ಸವ ಮನುಷ್ಯ ಮತ್ತು ಪ್ರಕೃತಿಯ ನಡುವಿನ ಬಾಂಧವ್ಯ ಆಗಬೇಕು ಎಂದರು.
ಚರ್ಚೆಯಲ್ಲಿ ದೇವಳದ ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್, ಹಿಂದೂಸ್ಥಾನ್ ಯೂತ್ ಕ್ಲಬ್‌ನ ಅಧ್ಯಕ್ಷ ವಿನೋದ್ ಸಾಲ್ಯಾನ್ ಬೇಳ್ಳಾಯರು, ಉಪನ್ಯಾಸಕ ಜಗದೀಶ್ ಬಾಳ, ಹಳೆಯಂಗಡಿ ಮಹಿಳಾ ಮಂಡಳಿಯ ಅಧ್ಯಕ್ಷೆ ಜ್ಯೋತಿ ರಾಮಚಂದ್ರ, ಯುವತಿ ಮಂಡಳದ ಅಧ್ಯಕ್ಷೆ ದಿವ್ಯಶ್ರೀ, ಹಳೆಯಂಗಡಿ ರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಚಂದ್ರಶೇಖರ ಕದಿಕೆ, ಪಿಸಿಎ ಬ್ಯಾಂಕ್ ನಿರ್ದೇಶಕ ಹಿಮಕರ ಕದಿಕೆ, ಓಂ ಕ್ರಿಕೇಟರ‍್ಸ್‌ನ ಸುಖೇಶ್ ಪಾವಂಜೆ, ಯೋಗಗುರು ಎಂ. ಜಗದೀಶ್ ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು.
ಎಚ್.ರಾಮಚಂದ್ರ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Kinnigoli-28061704

Comments

comments

Comments are closed.

Read previous post:
Kinnigoli-28061703
ಹಳೆಯಂಗಡಿ -ವಿದ್ಯಾರ್ಥಿ ಸಂಘ ಉದ್ಘಾಟನೆ

ಕಿನ್ನಿಗೋಳಿ: ವಿದ್ಯಾರ್ಥಿಗಳ ಶಿಕ್ಷಣದ ಜೊತೆಗೆ ಮನೋವಿಕಸನಕ್ಕೂ ಪ್ರೋತ್ಸಾಹವನ್ನು ಶಿಕ್ಷಣ ಸಂಸ್ಥೆಗಳು ನೀಟಬೇಕು ಹಾಗಾದಾಗ ಭವಿಷ್ಯದಲ್ಲಿ ಭದ್ರವಾದ ಭಾರತವನ್ನು ನಿರ್ಮಾಣ ಮಾಡಬಹುದು. ಎಂದು ರಾಷ್ಟ್ರೀಯ ಸೇವಾ ಯೋಜನೆಯ ಕೇಂದ್ರ ಸಮಿತಿ...

Close