ವಿದ್ಯಾರ್ಥಿಗಳು ಯೋಗ ವಿದ್ಯೆಯನ್ನು ಕಲಿಯಬೇಕು

ಕಿನ್ನಿಗೋಳಿ: ವಿದ್ಯಾರ್ಥಿಗಳು ಯೋಗ ವಿದ್ಯೆಯನ್ನು ಕಲಿಯಬೇಕು ಯೋಗ ದೈಹಿಕ ವ್ಯಾಯಾಮಕ್ಕೆ ಸೀಮಿತವಾಗಿಲ್ಲ. ಜೀವನ ವಿಧಾನ, ಶರೀರ, ಮನಸ್ಸು, ಬುದ್ಧಿ ಮತ್ತು ಆತ್ಮಗಳ ನಡುವೆ ಯೋಗವು ಸಮನ್ವಯವನ್ನು ಸಾಸುತ್ತದೆ ಎಂದು ರಾಜ್ಯ ಭಾರತ್ ಸ್ವಾಭಿಮಾನ್ ಟ್ರಸ್ಟ್ ಸಹ ಪ್ರಭಾರಿ ಡಾ. ಜ್ಞಾನೇಶ್ವರ್ ನಾಯಕ್ ಹೇಳಿದರು.
ನಿಟ್ಟೆ ವಿದ್ಯಾ ಸಂಸ್ಥೆ, ಮಂಗಳೂರು ಇದರ ಅಂಗ ಸಂಸ್ಥೆಯಾದ ಮುಲ್ಕಿ ರಾಮಕೃಷ್ಣ ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆ ತಪೋವನ ಇದರ ಎನ್.ಎಸ್. ಎಸ್. ಘಟಕ ಮತ್ತು ಎನ್‌ಇಟಿ ರೋವರ್ಸ್ ಪತಂಜಲಿ ಯೋಗ ಸಮಿತಿ, ದ.ಕ. ಇವರ ಸಂಯುಕ್ತ ಆಶ್ರಯದಲ್ಲಿ ಬುಧವಾರ ನಡೆದ ವಿಶ್ವಯೋಗ ದಿನಾಚರಣೆ ಮತ್ತು ಹತ್ತು ದಿವಸಗಳ ಯೋಗ ಶಿಬಿರ ಉದ್ಘಾಟಿಸಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಸಂಸ್ಥೆಯ ಪ್ರಿನ್ಸಿಪಾಲ್ ವೈ.ಎನ್. ಸಾಲಿಯಾನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಪತಂಜಲಿ ಯೋಗ ಸಮಿತಿ ಅಧ್ಯಕ್ಷ ಯೋಗ ಗುರು ರಾಘವೇಂದ್ರ ರಾವ್, ಸಂಸ್ಥೆಯ ತರಬೇತಿ ಅಕಾರಿ ರಘುರಾಮ್ ರಾವ್, ಸಂಜೀವ ದೇವಾಡಿಗ, ಹರಿ ಹೆಚ್. ಉಪಸ್ಥಿತರಿದ್ದರು.
ಕಿರಿಯ ತರಬೇತಿ ಅಕಾರಿ ರಕ್ಷಿತಾ ಪ್ರಾರ್ಥನೆಗೈದು ಸುರೇಶ್ ಎಸ್. ವಂದಿಸಿದರು. ವಿಶ್ವನಾಥ್ ರಾವ್ ಕಾರ್ಯಕ್ರಮ ನಿರೂಪಿಸಿದರು.

Kinnigoli-29061703

Comments

comments

Comments are closed.

Read previous post:
Kinnigoli-29061702
ಸಾಮರಸ್ಯ ಮತ್ತು ಶಾಂತಿಗಾಗಿ ಯೋಗ

ಕಿನ್ನಿಗೋಳಿ: ಯೋಗ ದೇಹ ಮತ್ತುಮನಸ್ಸಿನ ನಡುವೆ ಹೊಂದಾಣಿಕೆ ಸಾಸಲು ಅಗತ್ಯ. ಜಗತ್ತಿನಲ್ಲಿ ಶಾಂತಿ ಮತ್ತು ಸಾಮರಸ್ಯ ಕಾಪಾಡಲು ಯೋಗ ಪೂರಕವಾಗಿದೆ ಎಂದು ಐಕಳ ಪೊಂಪೈ ಕಾಲೇಜು ಪ್ರಿನಿಪಾಲ್ ಡಾ....

Close