ಐಕಳ ಗ್ರಾಮ ಸಭೆ

ಕಿನ್ನಿಗೋಳಿ: ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟ ಐಕಳ ಏಳಿಂಜೆ ಮತ್ತು ಉಳೆಪಾಡಿ ಗ್ರಾಮಗಳ 2017-18 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಶನಿವಾರ ಐಕಳ ಗ್ರಾಮ ಪಂಚಾಯಿತಿಯ ರಾಜೀವಗಾಂ ಸೇವಾ ಕೇಂದ್ರದಲ್ಲಿ ಅಧ್ಯಕ್ಷ ದಿವಾಕರ ಚೌಟ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಪ್ರತೀ ಗ್ರಾಮ ಸಭೆಗೆ ಕೆಲವು ಇಲಾಖಾ ಅಕಾರಿಗಳ ಗೈರು ಹಾಜರು, ಮೂರುಕಾವೇರಿಯಿಂದ ಸಂಕಲಕರಿಯ ವರೆಗೆ ರಾಜ್ಯ ಹೆದ್ದಾರಿಯ ಚರಂಡಿ ಸಮಸ್ಯೆ ಲೋಕೋಪಯೋಗಿ ಅಕಾರಿಗಳು ಗ್ರಾಮ ಸಭೆಗೆ ಯಾಕೇ ಬಂದಿಲ್ಲ ಅವರು ಬಾರದೇ ಗ್ರಾಮ ಸಭೆ ಮಾಡುವುದು ಬೇಡ ಗ್ರಾಮ ಎಂದು ಗ್ರಾಮಸ್ಥರ ಪರವಾಗಿ ಪ್ಲಾವಿಯಾ ಸುವಾರಿಸ್ ಒತ್ತಾಯಿಸಿದರು.
ಪರಿಶಿಷ್ಟ ಜಾತಿ ಮನೆಗಳಿರುವ ಕಾಲೊನಿಗೆ ರಸ್ತೆ ವ್ಯವಸ್ಥೆ ಸರಿಇಲ್ಲ ಚರಂಡಿ ಇಲ್ಲ ಗ್ರಾಮ ಸಭೆಯ ಬಗ್ಗೆ ಮಾಹಿತಿ ಇಲ್ಲ ನಮ್ಮ ಪರಿಸರದ ಬಗ್ಗೆ ಗ್ರಾಮ ಪಂಚಾಯತ್ ಕಾಳಜಿ ಇಲ್ಲ ಎಂದು ಗ್ರಾಮಸ್ಥ ಶೀನ ಹಾಗೂ ನರಸಿಂಹ ಅಳಲು ತೋಡಿಕೊಂಡರು.
ಗ್ರಾ. ಪಂ, ಅಧ್ಯಕ್ಷ ದಿವಾಕರ ಚೌಟ ಮಾತನಾಡಿ ಉಳೆಪಾಡಿ ಕಾಲೋನಿ ರಸ್ತೆ ಖಾಸಗಿ ಜಾಗ ಸರಕಾರಿ ಜಾಗ ಅಲ್ಲ ಹಾಗಾಗಿ ಈ ಸಮಸ್ಯೆ ಎಂದು ಹೇಳಿದರು.
ಐಕಳ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕೈಕೊಡುತ್ತಿದೆ ಸಮಸ್ಯೆಗೆ ಪರಿಹಾರ ಏನು? ಕಳಪೆ ಗುಣಮಟ್ಟದ ವಿದ್ಯುತ್ ಸಲಕರಣೆ ಹಾಕಬೇಡಿ ಎಂದು ಗ್ರಾಮಸ್ಥರು ತಿಳಿಸಿದಾಗ ಮೆಸ್ಕಾಂ ಅಕಾರಿ ಚಂದ್ರಹಾಸ ಮಾತನಾಡಿ ದಾರಿ ದೀಪದ ಕಾಮಗಾರಿಯ ಟೆಂಡರು ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿದೆ, ಲೈನ್‌ನಲ್ಲಿ ದೋಷ ಕಂಡು ಬಂದಕೂಡಲೇ ಮುಂಜಾಗರೂಕತೆಯ ದೃಷ್ಟಿಯಿಂದ ವಿದ್ಯುತ್ ಸರಬರಾಜು ಸ್ಥಗಿತವಾಗುತ್ತಿದೆ ಎಂದು ತಿಳಿಸಿದರು.
ಕೃಷಿಗೆ ಸಂಬಂಸಿದ ಸಲಕರಣೆಗಳು ಬೀಜ ಗೊಬ್ಬರಗಳ ನಿಗದಿತ ಸಮಯಕ್ಕೆ ಸಿಗದಿರುವುದು, ಹಕ್ಕುಪತ್ರ, ಮನೆ ನಂಬ್ರ ಬಗ್ಗೆ ಎಂದು ಗ್ರಾಮ ಸಭೆಯಲ್ಲಿ ದೂರುಗಳು ಬಂದವು.
ಆರೋಗ್ಯ ಇಲಾಖೆಯ ಡಾ. ಭಾಸ್ಕರ ಕೋಟ್ಯಾನ್, ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶೀಲಾವತಿ, ಇಂಜಿನಿಯರ್ ವಿಭಾಗದ ಹರೀಶ್, ಪಶುಸಂಗೋಪಾನಾ ಇಲಾಖೆಯ ಡಾ. ಸತ್ಯ ಶಂಕರ್ ಮಾಹಿತಿ ನೀಡಿದರು.
ವಲಯ ಅರಣ್ಯಾಕಾರಿ ಕೆ.ವಿ. ನರೇಶ್ ನೋಡೆಲ್ ಅಕಾರಿಯಾಗಿ ಭಾಗವಹಿಸಿದ್ದರು. ಮಂಗಳೂರು ತಾ. ಪಂ. ಸದಸ್ಯೆ ರಶ್ಮಿ ಆಚಾರ್ಯ, ಐಕಳ ಗ್ರಾ. ಪಂ. ಉಪಾಧ್ಯಕ್ಷೆ ಸುಂದರಿ ಆರ್ ಸಾಲ್ಯಾನ್, ಪಿಡಿಒ ನಾಗರತ್ನ ಜಿ ಉಪಸ್ಥಿತರಿದ್ದರು.

Kinnigoli-30061702

Comments

comments

Comments are closed.

Read previous post:
Kinnigoli-30061701
ಸೊಸೈಟಿಗೆ ಸಚಿವ ಖಾದರ್ ದಿಢೀರ್ ಭೇಟಿ

ಕಿನ್ನಿಗೋಳಿ: ಜಿಲ್ಲೆಯಾದ್ಯಂತ ರೇಷನ್ ಅಂಗಡಿಗಳಲ್ಲಿ ಗ್ರಾಹಕರಿಗೆ ಅಕ್ಕಿ ವಿತರಣೆ ಆಗುತ್ತಿದ್ದರೂ ಹಳೆಯಂಗಡಿಯ ಪಡುಪಣಂಬೂರು ವ್ಯವಸಾಯ ಸಹಕಾರಿ ಬ್ಯಾಂಕಿನಲ್ಲಿ ಗ್ರಾಹಕರಿಗೆ ಅಕ್ಕಿ ವಿಳಂಬವಾಗಿ ವಿತರಣೆಯಾಗುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ...

Close