ಕಾಲಕಾಲಕ್ಕೆ ಮಳೆಗೆ ಗಿಡ ಬೆಳೆಸುವುದು ಅನಿವಾರ್ಯ

ಕಿನ್ನಿಗೋಳಿ: ಮಳೆಯ ಕೊರತೆ ಕಾಡುತ್ತಿದ್ದು ಬರವೇ ಹೆಚ್ಚಾಗಿದೆ. ನೈಸರ್ಗಿಕ ಸಂಪತ್ತನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಮೊದಲಿನ ಹಾಗೆ ಕಾಲಕಾಲಕ್ಕೆ ಮಳೆಯಾಗಬೇಕು, ಕೆರೆ, ನದಿಗಳು ತುಂಬಬೇಕು ಎಂದರೆ ಗಿಡ ಬೆಳೆಸುವುದು ಅನಿವಾರ್ಯ. ಇನ್ನು ಮುಂದಾದರೂ ಪಾಠ ಕಲಿಯದಿದ್ದರೆ ಸಂಕಷ್ಟ ತಪ್ಪಿದ್ದಲ್ಲ ಎಂದು ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಮತ್ತು ಕಟೀಲು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಆಶ್ರಯದಲ್ಲಿ ಕಟೀಲು ಸಹಕಾರಿ ಸಂಘದ ಆವರಣದಲ್ಲಿ ಮಂಗಳವಾರ ನಡೆದ ಕೋಟಿ ಸಸಿ ನೆಡುವ ಅಭಿಯಾನದ ಅಂಗವಾಗಿ ಅರಣ್ಯ ಸಸಿಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಕೃತಿ, ಸಂಸ್ಕಾರವನ್ನು ಮರೆತು ಮನುಷ್ಯ ಬದುಕುತ್ತಿದ್ದಾನೆ. ಪ್ರಕೃತಿ ಉಳಿಸುವುದು ನಮ್ಮ ಕರ್ತವ್ಯ. ಈ ವರ್ಷ ನೆಟ್ಟ ಸ್ಥಳದಲ್ಲಿಯೇ ಮುಂದಿನ ವರ್ಷವೂ ಗಿಡಗಳನ್ನು ನೆಡುವ ಪರಿಸ್ಥಿತಿ ಬರಬಾರದು. ಗಿಡ ನೆಡುವ ಜೊತೆಗೆ ಅವುಗಳನ್ನು ಪೋಷಿಸುವ ಕೆಲಸವಾಗಬೇಕು ಎಂದರು.
ಈ ಸಂದರ್ಭ ಕೋಟಿ ಸಸಿ ನೆಡುವ ಅಭಿಯಾನದ ಅಂಗವಾಗಿ ಅರಣ್ಯ ಸಸಿಗಳನ್ನು ಸಂಘದ ಸದಸ್ಯರಿಗೆ ವಿತರಿಸಲಾಯಿತು.
ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ವ್ಯವಸ್ಥಾಪಕ ಬಿ.ವಿ. ಸತ್ಯನಾರಾಯಣ, ಉಪವ್ಯವಸ್ಥಾಪಕ ಡಾ. ಮಧುಸೂಧನ್ ಕಾಮತ್, ಕೃಷಿ ಅಕಾರಿ ಪ್ರಭಾಕರ ಎಸ್., ವಿಸ್ತರಣಾಕಾರಿ ಮಾಲತಿ, ಕಟೀಲು ಹಾಲು ಉತ್ಪಾದಕರ ಸಂಘದ ಅಧ್ಯಕ್ಷೆ ವಸಂತಿ ಉಪಸ್ಥಿತರಿದ್ದರು.

Kinnigoli-300617014

Comments

comments

Comments are closed.

Read previous post:
Kinnigoli-300617013
ರೈಲ್ವೇ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ

ಬಾಲಕಿಯ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ಹಾಗೂ ಅಕಾರಿಗಳು ಕಿನ್ನಿಗೋಳಿ: ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೆಯಂಗಡಿ ಇಂದಿರಾನಗರದ ರೈಲ್ವೇಗೇಟಿನ ಸಮಸ್ಯೆಗೆ ಪರಿಹಾರವಾಗಿ ಕೊನೆಗೂ ಮೇಲ್ಸೇತುವೆಯನ್ನು ನಿರ್ಮಿಸುವ ಬಗ್ಗೆ...

Close