ರೈಲ್ವೇ ಮೇಲ್ಸೇತುವೆ ಕಾಮಗಾರಿ ಸ್ಥಳ ಪರಿಶೀಲನೆ

ಬಾಲಕಿಯ ಬೇಡಿಕೆಗೆ ಸ್ಪಂದಿಸಿದ ಪ್ರಧಾನಿ ಹಾಗೂ ಅಕಾರಿಗಳು
ಕಿನ್ನಿಗೋಳಿ: ಕಳೆದ ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಹಳೆಯಂಗಡಿ ಇಂದಿರಾನಗರದ ರೈಲ್ವೇಗೇಟಿನ ಸಮಸ್ಯೆಗೆ ಪರಿಹಾರವಾಗಿ ಕೊನೆಗೂ ಮೇಲ್ಸೇತುವೆಯನ್ನು ನಿರ್ಮಿಸುವ ಬಗ್ಗೆ ರೈಲ್ವೇ ಅಕಾರಿಗಳು, ಸ್ಥಳೀಯ ಲೋಕೋಪಯೋಗಿ ಇಲಾಖೆಯ ಅಕಾರಿಗಳೊಂದಿಗೆ ಸ್ಥಳೀಯ ಜನಪ್ರತಿನಿಗಳು ಪರಿಶೀಲನೆ ನಡೆಸಿದರು. ಈ ಬಗ್ಗೆ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದ ಪುಟ್ಟ ಬಾಲಕಿಯ ಕನಸು ನನಸಲಾಗಲಿದೆ.
ಕಳೆದ ತಿಂಗಳ ಹಿಂದೆ ಕಿನ್ನಿಗೋಳಿ ಸಮೀಪದ ಶಿಮಂತೂರಿನ ಶಾರಾದ ಮಾಡೆಲ್ ಅಂಗ್ಲ ಮಾಧ್ಯಮ ಶಾಲೆಯಲ್ಲಿ 6ನೇ ತರಗತಿ ಕಲಿಯುತಿರುವ ದೃತಿ ಕುಲಾಲ್ ಕಿನ್ನಿಗೋಳಿ ಮಂಗಳೂರು ಮುಖ್ಯ ರಸ್ತೆಯ ಹಳೆಯಂಗಡಿಯ ಬಳಿಯ ಇಂದಿರಾನಗರದ ರೈಲ್ವೆ ಗೇಟ್ ಬಳಿಯ ಅವ್ಯವಸ್ಥೆ ಬಗ್ಗೆ ಪ್ರಧಾನ ಮಂತ್ರಿಯವರಿಗೆ ಪತ್ರ ಬರೆದಿದ್ದು ಕೂಡಲೇ ಮೇಲ್ಸೇತುವೆ ಮಾಡಬೇಕೆಂದು ಮನವಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮಂಗಳವಾರ ಉಡುಪಿ ರೈಲ್ವೇ ಇಲಾಖೆಯ ಅಕಾರಿಗಳಾದ ಎಂವಿ ಗೋಪಾಲಕೃಷ್ಣ ಹಾಗೂ ಅಶೋಕ್ ರಾಥೋಡ್ ಮಂಗಳೂರಿನ ಲೋಕೋಪಯೋಗಿ ಇಲಾಖೆಯ ಅಕಾರಿಗಳಾದ ದಾಸಪ್ರಕಾಶ್,ರವಿಕುಮಾರ್ ಹಾಗೂ ಮುಲ್ಕಿಯ ವಿಶೇಷ ತಹಶಿಲ್ದಾರ್ ಕಿಶೋರ್ ಕುಮಾರ್, ಗ್ರಾಮ ಕರಣಿಕ ಮೋಹನ್, ಮತ್ತು ಹಳೆಯಂಗಡಿ ಪಂಚಾಯತಿ ಅಧ್ಯಕ್ಷೆ ಜಲಜ, ಪಿಡಿಒ ಅಬೂಬಕ್ಕರ್ ಜಂಟಿಯಾಗಿ ಸ್ಥಳ ಸಮೀಕ್ಷೆ ನಡೆಸಿದ್ದಾರೆ.

ಬಳಿಕ ರೈಲ್ವೇ ಅಕಾರಿ ಎಂ. ವಿ. ಗೋಪಾಲಕೃಷ್ಣ ಮಾತನಾಡಿ ಈಗ ಇರುವ ಹಳೆಯಂಗಡಿ ಹಾಗೂ ಪಡುಪಣಂಬೂರು ರೈಲ್ವೇ ಗೇಟಿನ ಮದ್ಯ ಭಾಗದಲ್ಲಿ ಸರ್ವೆ ನಡೆಸಿ ಭೂಸ್ವಾದೀನ ಮಾಡಿಕೊಂಡು ಶೇ 50:50 (ಕೇಂದ್ರ:ರಾಜ್ಯ) ಆಧಾರದಲ್ಲಿ ಕೂಡಲೇ ರೈಲ್ವೇ ಮೇಲ್ಸೇತುವೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದ್ದಾರೆ.

ಸಂಚಾರದ ಒತ್ತಡಕ್ಕೆ ಅತೀ ಅಗತ್ಯವಾದ ಮೇಲ್ಸೇತುವೆಯ ಬಗ್ಗೆ ಈಗಾಗಲೇ ಮೂರು ಪ್ರಸ್ತಾವನೆ ಸಲ್ಲಿಸಲಾಗಿದ್ದು ಕಲ್ಲಾಪು ಮತ್ತು ಹಳೆಯಂಗಡಿ ರೈಲ್ವೇಗೇಟಿನ ಮಧ್ಯ ಭಾಗ, ಪ್ರಸ್ತುತ ರೈಲ್ವೇ ಗೇಟ್ ಇರುವಲ್ಲಿಯೇ ಮೇಲ್ಸೇತುವೆ ಮತ್ತು ಈಗಿರುವ ರೈಲ್ವೇ ಗೇಟಿನಿಂದ ಸುಮಾರು 100ಮೀ. ದೂರದಲ್ಲಿ ಮೇಲ್ಸೇತುವೆಯನ್ನು ನಿರ್ಮಿಸುವ ಮೂರು ಪ್ರಸ್ತಾವಿತ ಯೋಜನೆಯು ನೀಲನಕ್ಷೆಯೊಂದಿಗೆ ತಯಾರಾಗಿದೆ ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಯರ್‌ಗಳು ಅಕಾರಿಗಳು ತಿಳಿಸಿದರು.
ಮೂಲ್ಕಿ ವಿಶೇಷ ತಹಶೀಲ್ದಾರ್ ಕಿಶೋರ್‌ಕುಮಾರ್ ಮಾತನಾಡಿ, ಪ್ರಸ್ತುತ ಮೂರೂ ಯೋಜನೆಯಲ್ಲಿ ಸರಕಾರಿ ಭೂಮಿ ಮತ್ತು ಖಾಸಗಿ ಭೂಮಿಗಳ ಲಭ್ಯತೆ, ಮಾರುಕಟ್ಟೆ ಮೌಲ್ಯ, ಸಾಧಕ ಬಾಧಕ ಹಾಗೂ ಪರ್ಯಾಯ ರಸ್ತೆಯ ಜೊತೆಗೆ ಹೆದ್ದಾರಿ ಸಂಪರ್ಕಕ್ಕೆ ಅನುಕೂಲ ಆಗುವ ಬಗ್ಗೆ ಮೂರು ಯೋಜನೆಯಲ್ಲಿ ಒಂದನ್ನು ರೂಪಿಸಲು ಉದ್ದೇಶಿಲಾಗಿದೆ. ಜಮೀನು ಲಭ್ಯತೆಯ ಬಗ್ಗೆ ಪರಿಶೀಲನಾ ವರದಿಯನ್ನು ನೀಡಿದ ನಂತರ ಕಾಮಗಾರಿ ವೇಗ ಪಡೆಯಬಹುದು ಎಂದು ತಿಳಿಸಿದರು.

Kinnigoli-300617013Kinnigoli-30061701

Comments

comments

Comments are closed.