ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪುರಸ್ಕಾರ

ಕಿನ್ನಿಗೋಳಿ: ಯಕ್ಷಗಾನದ ಮೇರು ವ್ಯಕ್ತಿತ್ವ ಸೂರಿಕುಮೇರು ಗೋವಿಂದ ಭಟ್ ವಿದ್ವತ್‌ಪೂರ್ಣ ಭಾಷಾ ಶುದ್ದಿ, ಉತ್ತಮ ವಾಗ್ಮಿ, ಅಭಿನಯಪಟುತ್ವ, ವೇಷಗಾರಿಕೆ, ಪ್ರಸಂಗ ನಿರ್ಮಾಣ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗೀಣವಾಗಿ ಬೆಳಗಿದ ಮಹಾನ್ ವ್ಯಕ್ತಿಯಾಗಿದ್ದಾರೆ ಎಂದು ಹಿರಿಯ ಯಕ್ಷಗಾನ ಕಲಾವಿದ ಸಂಘಟಕ ಅಶೋಕ್ ಭಟ್ ಉಜಿರೆ ಹೇಳಿದರು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಳದ ಶಾರಧ್ವತ ಯಜ್ಞಾಂಗಣದಲ್ಲಿ ಬುಧವಾರ ನಡೆದ ಪಾವಂಜೆ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾ ಪೋಷಕ ವೇದಿಕೆಯಿಂದ ನೀಡುತ್ತಿರುವ ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪುರಸ್ಕಾರವನ್ನು ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೆರು ಕೆ.ಗೋವಿಂದ ಭಟ್‌ರಿಗೆ ನೀಡಿದ ಕಾರ್ಯಕ್ರಮದಲ್ಲಿ ಅಭಿನಂದನಾ ಭಾಷಣದಲ್ಲಿ ಮಾತನಾಡಿದರು.
ಧರ್ಮದರ್ಶಿ ಯಾಜಿ ನಿರಂಜನ ಭಟ್ ಪೌರೋಹಿತ್ಯದಲ್ಲಿ ಆಸನ ಸಂಸ್ಕಾರ ಪಾದಪೂಜೆ,ಛತ್ರ ಚಾಮರ, ತಿಲಕ ,ಸುಗಂಧ ದ್ರವ್ಯ ಆರತಿ ಸಹಿತ ವೇದೋಕ್ತ ಸನ್ಮಾನವನ್ನು ಕೆ.ಗೋವಿಂದ ಭಟ್ ಮತ್ತು ಸಾವಿತ್ರಮ್ಮ ದಂಪತಿಗಳಿಗೆ ೧೦ ಸಾವಿರ ರೂ. ನಗದು ಹಾಗೂ ಆಳೆತ್ತರದ ಸನ್ಮಾನ ಪತ್ರದೊಂದಿಗೆ ಸನ್ಮಾನಿಸಲಾಯಿತು.
ದೇವಸ್ಥಾನದ ಧರ್ಮದರ್ಶಿ ಡಾ.ಯಾಜಿ.ನಿರಂಜನ ಭಟ್, ಮೊಕ್ತೇಸರ ಎಂ.ಶಶೀಂದ್ರಕುಮಾರ್, ಟ್ರಸ್ಟಿ ನಕ್ರೆ ಬಾಲಕೃಷ್ಣ ರಾವ್, ಪಾವಂಜೆ ಶ್ರೀ ಮಹಾಲಿಂಗೇಶ್ವರ ದೇವಳದ ಅರ್ಚಕ ಗಣೇಶ್ ಭಟ್, ಮಹಿಳಾ ಮಂಡಲದ ಸಾವಿತ್ರಿ ದಿವಾಕರ್, ಪ್ರಪುಲ್ಲ ಪ್ರಭಾಕರರಾವ್, ರತ್ನಾ ರಾವ್, ಪದ್ಮಿನಿ ರಮಾನಂದ ರಾವ್ ಉಪಸ್ಥಿತರಿದ್ದರು.

Kinnigoli-300617015

 

Comments

comments

Comments are closed.

Read previous post:
Kinnigoli-300617014
ಕಾಲಕಾಲಕ್ಕೆ ಮಳೆಗೆ ಗಿಡ ಬೆಳೆಸುವುದು ಅನಿವಾರ್ಯ

ಕಿನ್ನಿಗೋಳಿ: ಮಳೆಯ ಕೊರತೆ ಕಾಡುತ್ತಿದ್ದು ಬರವೇ ಹೆಚ್ಚಾಗಿದೆ. ನೈಸರ್ಗಿಕ ಸಂಪತ್ತನ್ನು ಅತಿಯಾಗಿ ಬಳಸಿಕೊಳ್ಳುತ್ತಿದ್ದೇವೆ. ಮೊದಲಿನ ಹಾಗೆ ಕಾಲಕಾಲಕ್ಕೆ ಮಳೆಯಾಗಬೇಕು, ಕೆರೆ, ನದಿಗಳು ತುಂಬಬೇಕು ಎಂದರೆ ಗಿಡ ಬೆಳೆಸುವುದು ಅನಿವಾರ್ಯ....

Close