ಸೊಸೈಟಿಗೆ ಸಚಿವ ಖಾದರ್ ದಿಢೀರ್ ಭೇಟಿ

ಕಿನ್ನಿಗೋಳಿ: ಜಿಲ್ಲೆಯಾದ್ಯಂತ ರೇಷನ್ ಅಂಗಡಿಗಳಲ್ಲಿ ಗ್ರಾಹಕರಿಗೆ ಅಕ್ಕಿ ವಿತರಣೆ ಆಗುತ್ತಿದ್ದರೂ ಹಳೆಯಂಗಡಿಯ ಪಡುಪಣಂಬೂರು ವ್ಯವಸಾಯ ಸಹಕಾರಿ ಬ್ಯಾಂಕಿನಲ್ಲಿ ಗ್ರಾಹಕರಿಗೆ ಅಕ್ಕಿ ವಿಳಂಬವಾಗಿ ವಿತರಣೆಯಾಗುತ್ತಿದೆ ಎಂಬ ದೂರು ಬಂದ ಹಿನ್ನಲೆಯಲ್ಲಿ ಶನಿವಾರ ರಾಜ್ಯ ಆಹಾರ ಹಾಗೂ ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ದಿಢೀರ್ ಭೇಟಿ ನೀಡಿ ಸೊಸೈಟಿಯ ಅಕಾರಿಗಳನ್ನು ವಿಚಾರಿಸಿದರು.
ಈ ಸಂದರ್ಭ ಸ್ಥಳೀಯರು ರೇಷನ್ ವಿಳಂಬ ವಿತರಣೆ ಹಾಗೂ ಸರಿಯಾಗಿ ಕಾರ್ಯ ನಿರ್ವಹಿಸದ ಬಯೋಮ್ಯಾಟ್ರಿಕ್ ಪದ್ದತಿ ಬಗ್ಗೆ ತೊಂದರೆಗಳನ್ನು ಸಚಿವರ ಬಳಿ ಮನವರಿಕೆ ಮಾಡಿಕೊಂಡರು.
ಹಳೆಯಂಗಡಿಯ ಪಡುಪಣಂಬೂರು ವ್ಯವಸಾಯ ಸಹಕಾರಿ ಬ್ಯಾಂಕಿನ ನ್ಯಾಯಬೆಲೆ ಅಂಗಡಿಯಲ್ಲಿ ಈ ತಿಂಗಳ ಅಕ್ಕಿ ಸಹಿತ ರೇಷನ್ ಸಾಮಾಗ್ರಿಗಳು ಬಂದು ಒಂದು ವಾರವಾದರೂ ಗ್ರಾಹಕರಿಗೆ ಸಮರ್ಪಕವಗಿ ವಿತರಣೆಯಾಗುತ್ತಿಲ್ಲ ಬಗ್ಗೆ ವಿಚಾರಿಸಿದಾಗ ಸರಕಾರದ ನಿಯಮಾ ಆದೇಶದ ಪ್ರಕಾರ ‘ಥಂಬ್ ಇಂಪ್ರಶನ್’ ಆಗಬೇಕು ಸೊಸೈಟಿ ಅಕಾರಿಗಳು ಹೇಳುತ್ತಾರೆ. ಹಬ್ಬಗಳು ಸಮೀಪಿಸುತ್ತಿದೆ ಸೊಸೈಟಿ ಗ್ರಾಹಕರಿಗೆ ಇದರಿಂದಾಗಿ ತೊಂದರೆ ರೇಷನ್ ಗೆ ಕಾದು ಕಾದು ಹಿಂದೆ ಹೋಗುವಂತಹ ಪರಿಸ್ಥಿತಿ ಏರ್ಪಟ್ಟಿದೆ. ಸಸಿಹಿತ್ಲು ವಿನಿಂದ ರಿಕ್ಷಾಕ್ಕೆ ೭೦ ರೂಪಾಯಿ ಬಾಡಿಗೆ ಕೊಡಬೇಕಾಗುತ್ತದೆ ಸುಮಾರು ಹತ್ತು ಕಿಲೋಮೀಟರ್ ವ್ಯಾಪ್ತಿಯ ಸಸಿಹಿತ್ಲು, ಹಳೆಯಂಗಡಿ ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೪೦೦೦ ಕಾರ್ಡುದಾರರು ಈ ಒಂದೇ ರೇಷನ್ ಅಂಗಡಿಯನ್ನು ಅವಲಂಬಿಸಿದ್ದಾರೆ ಎಂದು ಹಳೆಯಂಗಡಿ ಪಂಚಾಯಿತಿ ಸದಸ್ಯರಾದ ಅಬ್ದುಲ್ ಖಾದರ್ ಹಾಗೂ ಅಬ್ದುಲ್ ಅಝೀಝ್ ಸಚಿವ ಯುಟಿ ಖಾದರ್‌ಗೆ ಪಡಿತರ ವ್ಯವಸ್ಥೆಗೆ ಬಗ್ಗೆ ಮಾಹಿತಿ ನೀಡಿದರು.
ಸಚಿವರು ಹಳೆಯಂಗಡಿ ಸೊಸೈಟಿಗೆ ಆಗಮಿಸಿ ಸೊಸೈಟಿ ಅಧ್ಯಕ್ಷರು ಪದಾಕಾರಿಗಳು ಸಿಬ್ಬಂದಿಗಳು ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಅಕಾರಿಗಳಲ್ಲಿ ಪೂರ್ಣ ಮಾಹಿತಿ ಪಡಕೊಂಡು ತಾಂತ್ರಿಕ ವೈಫಲ್ಯಗಳನ್ನು ಇಲಾಖಾಕಾರಿಗಳು ತ್ವರಿತವಾಗಿ ಸರಿಪಡಿಸಿಕೊಳ್ಳಿ ಎಂದರು. ಈ ತಿಂಗಳ ರೇಷನ್ ನ್ನು (ಮ್ಯಾನುವಲ್ ಆಗಿ) ಬಯೋಮೆಟ್ರಿಕ್ ಇಲ್ಲದೆ ನೀಡಿ ಜುಲೈ ತಿಂಗಳಿನಿಂದ ಬಯೋಮೆಟ್ರಿಕ್ ತಂತ್ರಜ್ಞಾನಕ್ಕೆ ಹೊಂದಿಸಿಕೊಳ್ಳಿ ಎಂದು ಆದೇಶಿಸಿದರು.
.ಪಡುಪಣಂಬೂರು ವ್ಯವಸಾಯ ಸೊಸೈಟಿಯ ಅಧ್ಯಕ್ಷ ಸತೀಶ್ ಭಟ್ ಕೊಳವೈಲು ಮಾತನಾಡಿ ಸೊಸೈಟಿ ಎರಡು ಮೂರು ತಿಂಗಳಿಗೊಮ್ಮೆಯಾದರೂ ಇಲಾಖಾಕಾರಿಗಳು ಬರುತ್ತಿಲ್ಲ ಅಲ್ಲದೆ ಗ್ರಾಹಕರ ಕಷ್ಟಗಳನ್ನು ತಿಳಿಯಲು ಅಕಾರಿಗಳು ಗ್ರಾಮಸಭೆಗೂ ಹಾಜರಾಗುತ್ತಿಲ್ಲ ಎಂದು ಸಚಿವರಿಗೆ ಹೇಳಿದಾಗ ಸಚಿವ ಖಾದರ್ ಅಕಾರಿಗಳಾದ ವಾಸುಶೆಟ್ಟಿ ಹಾಗೂ ಜಯಪ್ಪ ಅವರಿಗೆ ಪಡಿತರ ಗ್ರಾಹಕರ ಕಷ್ಟಗಳಿಗೆ ತ್ವರಿತವಾಗಿ ಸ್ಪಂದಿಸಬೇಕೆಂದು ತಿಳಿ ಹೇಳಿದರು.
ಈ ಸಂದರ್ಭ ಮಂಗಳೂರು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು, ತಾಲೂಕು ಪಂಚಾಯಿತಿ ಸದಸ್ಯ ಜೀವನ್ ಪ್ರಕಾಶ್, ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾಧ್ಯಕ್ಷೆ ಪದ್ಮ ಶೆಟ್ಟಿ, ಮುಲ್ಕಿ ನಗರ ಪಂಚಾಯಿತಿ ಸದಸ್ಯ ಅಸೀಫ್, ಸಸಿಹಿತ್ಲು ಭಾಸ್ಕರ್ ಹಾಗೂ ಸಸಿಹಿತ್ಲು ನಾಗರಿಕರು ಉಪಸ್ಥಿತರಿದ್ದರು

ಈ ಮೊದಲು ಸಸಿಹಿತ್ಲು ಪ್ರದೇಶದಲ್ಲಿ ಹಲವು ವರ್ಷಗಳ ಹಿಂದೆ ಸೊಸೈಟಿಯ ಶಾಖೆಯೊಂದಿದ್ದು ಆವಾಗಾವಾಗ ಕಳ್ಳತನ ಸೂಕ್ತ ಭದ್ರತೆ ಸಹಕಾರವಿಲ್ಲದ ಕಾರಣ ಹಳೆಯಂಗಡಿ ಮುಖ್ಯ ಕಛೇರಿಗೆ ಸ್ಥಳಾಂತರಗೊಂಡಿತ್ತು. ಸುಮಾರು 4000 ಕಾರ್ಡುದಾರರಿದ್ದು 1600 ಬಿಪಿಎಲ್ ಕಾರ್ಡುದಾರರಿದ್ದಾರೆ. ಹೆಚ್ಚುವರಿ ಕಾರ್ಡುಗಳಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಕಷ್ಟ ಸಾಧ್ಯ ಎಂದು ಅರಿತ ಸೊಸೈಟಿ ಎರಡು ವರ್ಷ ಮೊದಲೇ ತಹಶೀಲ್ದಾರರಿಗೆ ಬೇರೆ ನ್ಯಾಯ ಬೆಲೆ ಅಂಗಡಿಗೆ ಪರವಾನಿಗೆ ನೀಡಿ ಗ್ರಾಹಕರಿಗೆ ಸಮರ್ಪಕ ಸೇವೆ ನೀಡಬಹುದು ಎಂದು ಮನವಿ ಮಾಡಿಕೊಂಡಿತ್ತು.

ಸ್ವಸಹಾಯ ಸಂಘ, ಇನ್ನಿತರ ಸಂಘ ಸಂಸ್ಥೆಗಳು ಹಾಗೂ ಹಳೆಯಂಗಡಿ ಪಂಚಾಯಿತಿ ನ್ಯಾಯಬೆಲೆ ಅಂಗಡಿ ತೆರೆಯಲು ಇಚ್ಚಿಸಿದಲ್ಲಿ ಅಂಗಡಿಗೆ ಅನುಮತಿ ನೀಡಲಾಗುವುದು. ನೆಟ್‌ವರ್ಕ್ ಸಮಸ್ಯೆ, ಬಯೋಮೆಟ್ರಿಕ್ ತಾಂತ್ರಿಕ ಸಮಸ್ಯೆಯಿಂದ ಪಡಿತರ ಅಕ್ಕಿ ನೀಡಲು ತಡವಾಗಿದೆ. ಮುಂದಿನ ತಿಂಗಳಿನಿಂದ ಎಲ್ಲಾ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗುವುದು
ಯು.ಟಿ ಖಾದರ್
ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ

Kinnigoli-30061701

 

Comments

comments

Comments are closed.