ವಿದ್ಯೆ ಮತ್ತು ವಿನಯದಿಂದ ಉತ್ತಮ ವ್ಯಕ್ತಿತ್ವ

ಕಿನ್ನಿಗೋಳಿ: ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ವಿನಯದೊಂದಿಗೆ ಕಠಿಣ ಪರಿಶ್ರಮ ಸೇರಿಸಿಕೊಂಡರೆ ವಿದ್ಯಾರ್ಥಿಗಳಲ್ಲಿ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುತ್ತದೆ. ಗ್ರಾಮೀಣ ಪ್ರದೇಶದಲ್ಲಿನ ಆರ್ಥಿಕವಾಗಿ ಹಿಂದುಳಿದ ಯುವಕ ಯುವತಿಯರಿಗೆ ಗುಣಮಟ್ಟದ ಶಿಕ್ಷಣ ನೀಡುವುದೇ ಸಂಸ್ಥೆಯ ಮುಖ್ಯ ಧ್ಯೇಯವಾಗಿದೆ. ಎಂದು ಐಕಳ ಪೊಂಪೈ ಕಾಲೇಜು ಸಂಚಾಲಕ ರೆ..ಪಾ.ವಿಕ್ಟರ್ ಡಿ.ಮೆಲ್ಲೊ ಹೇಳಿದರು.
ಐಕಳ ಪೊಂಪೈ ಪದವಿ ಕಾಲೇಜಿನ 2017-18 ನೇ ಶೈಕಣಿಕ ವರ್ಷದ ಪ್ರಥಮ ಪದವಿ ವಿದ್ಯಾರ್ಥಿಗಳ ಓರಿಯಂಟೇಶನ್ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜು ಪ್ರಿನ್ಸಿಪಾಲ್ ಡಾ. ಜೋನ್ ಕ್ಲಾರೆನ್ಸ್ ಮಿರಾಂದ ಪ್ರಸ್ತಾವನೆಗೈದು ಸ್ವಾಗತಿಸಿದರು. ಪ್ರೊ. ಯೋಗಿಂದ್ರ, ಪ್ರೊ. ಪುರುಷೋತ್ತಮ.ಕೆ.ವಿ. ಹಾಗೂ ಡಾ. ಗುಣಕರ ಮಾಹಿತಿ ನೀಡಿದರು. ವಾಣಿಜ್ಯ ಶಾಸ್ತ್ರದ ಮುಖ್ಯಸ್ಥ ಪ್ರೊ. ಕೆ.ಜಗದೀಶ ಹೊಳ್ಳ ಕಾರ್ಯಕ್ರಮ ನಿರೂಪಿಸಿದರು.

Kinnigoli-01071701

Comments

comments

Comments are closed.

Read previous post:
Kinnigoli-300617015
ಹರಿದಾಸ ಲಕ್ಷ್ಮೀ ನಾರ್ಣಪ್ಪಯ್ಯ ಪುರಸ್ಕಾರ

ಕಿನ್ನಿಗೋಳಿ: ಯಕ್ಷಗಾನದ ಮೇರು ವ್ಯಕ್ತಿತ್ವ ಸೂರಿಕುಮೇರು ಗೋವಿಂದ ಭಟ್ ವಿದ್ವತ್‌ಪೂರ್ಣ ಭಾಷಾ ಶುದ್ದಿ, ಉತ್ತಮ ವಾಗ್ಮಿ, ಅಭಿನಯಪಟುತ್ವ, ವೇಷಗಾರಿಕೆ, ಪ್ರಸಂಗ ನಿರ್ಮಾಣ ಮೂಲಕ ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗೀಣವಾಗಿ ಬೆಳಗಿದ...

Close