ಕಟೀಲು : ಸಾಂಸ್ಕೃತಿಕ ತರಗತಿಗಳ ಉದ್ಘಾಟನೆ

ಕಿನ್ನಿಗೋಳಿ: ಭಾರತೀಯ ಕಲೆಗಳ ಶಿಕ್ಷಣ ಮಕ್ಕಳಿಗೆ ಬಾಲ್ಯದಿಂದಲೇ ಆಗಬೇಕು ಎಂದು ಉದ್ಯಮಿ ಗಿರೀಶ್ ಶೆಟ್ಟಿ ಅಜಾರು ಹೇಳಿದರು.
ಅವರು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಇಂಗ್ಲಿಷ್ ಮಾಧ್ಯಮ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಯೋಗ, ಸಂಗೀತ, ನೃತ್ಯ ಹಾಗೂ ಚಿತ್ರ ಕಲೆ ತರಗತಿಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದರು.
ಕಟೀಲು ದೇವಳ ಮೊಕ್ತೇಸರ ಹಾಗೂ ಶಾಲಾ ಸಂಚಾಲಕ ಸನತ್ ಕುಮಾರ್ ಶೆಟ್ಟಿ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ಯೋಗ ಶಿಕ್ಷಕ ಹರಿರಾಜ್, ಶಿಕ್ಷಕರಕ್ಷಕ ಸಂಘದ ಪ್ರಸನ್ನ ರಾವ್, ತಾ.ಪಂ. ಸದಸ್ಯೆ ಶುಭಲತಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ರಾವ್ ಸ್ವಾಗತಿಸಿದರು. ಸೌಮ್ಯ ಆಚಾರ್ ವಂದಿಸಿದರು.
ಶಿಕ್ಷಕಿ ಸೌಮ್ಯ ಕಾರ್ಯಕ್ರಮ ನಿರೂಪಿಸಿದರು.

Kinnigoli-01071702

Comments

comments

Comments are closed.