ಯಕ್ಷಗಾನದಿಂದ ಮಕ್ಕಳ ಶಿಕ್ಷಣಕ್ಕೆ ಸಹಕಾರಿ

ಮೂಲ್ಕಿ: ಮಕ್ಕಳಲ್ಲಿನ ಯಕ್ಷಗಾನದ ಆಸಕ್ತಿಯಿಂದ ಅವರ ಕಲಿಕೆಯಲ್ಲಿ ಬಹಳಷ್ಟು ಸಹಕಾರಿಯಾಗಿದ್ದು, ಯಕ್ಷಗಾನದಲ್ಲಿನ ಕಲಾಸಕ್ತಿಯನ್ನು ಬೆಳೆಸುವ ವಾತಾವರಣ ನಿರ್ಮಿಸಬೇಕು ಎಂದು ಕಟೀಲು ಶ್ರಿ ದುರ್ಗಾಪರಮೇಶ್ವರೀ ದೇವಸ್ಥಾನದ ಅರ್ಚಕರಾದ ಶ್ರಿಹರಿನಾರಾಯಣ ಆಸ್ರಣ್ಣ ಹೇಳಿದರು.
ಅವರು ಹಳೆಯಂಗಡಿಯ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮೀ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ಮಂಗಳೂರಿನ ಸನಾತನ ಯಕ್ಷಾಲಯದ ೮ನೇ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕೇಂದ್ರದ ವಿದ್ಯಾರ್ಥಿಗಳಾದ ಎನ್.ಆರ್. ಅನನ್ಯ ರಾವ್, ಕೃತಿ ವಿ. ರಾವ್ ಹಾಗೂ ಪಿ.ಸೌಂದರ್ಯ ಲಕ್ಷ್ಮೀ ಅವರನ್ನು ವಿಶೇಷ ಸಾಧಕರ ನೆಲೆಯಲ್ಲಿ ಸನ್ಮಾನಿಸಲಾಯಿತು.
ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಂ.ಶಶೀಂದ್ರಕುಮಾರ್, ಎ.ಜೆ. ದಂತ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವೈ.ಭರತ್ ಶೆಟ್ಟಿ, ಉಡುಪಿ ರೋಬೋಸೋಫ್ಟ್ ಟೆಕ್ನೋಲಜೀಸ್‌ನ ಶ್ರೀಪಾದ ಹೆಬ್ಬಾರ್, ಉದ್ಯಮಿ ಚಿತ್ತರಂಜನ್ ಶೆಟ್ಟಿ ನುಳಿಯಾಲು ಗುತ್ತು, ಮಂಗಳೂರಿನ ತುಳುನಾಡು ಚಿಟ್ಸ್ ಪ್ರೈ.ಲಿನ ನಿರ್ದೇಶಕ ಸಂದೇಶ್ ಶೆಟ್ಟಿ, ಯಕ್ಷಗಾನ ಸಂಘಟಕಿ ಮುಂಬೈಯ ಗೋಪಿಕಾ ಸತೀಶ್ ಮಯ್ಯ, ಭಾರತೀಯ ನೌಕಾ ಸೇನೆಯ ಸುನಿಲ್ ಕುಮಾರ್ ಕುಲಾಲ್ ಮುಂಬ, ಸಂಸ್ಥೆಯ ಎಂ.ಚಂದ್ರಶೇಖರ್, ಶಂಕರ ಅರಿಗ, ದೀಪಕ್ ರೈ ವಾಮಂಜೂರು, ಲೀಲಾಧರ ಶೆಟ್ಟಿ, ಸುಕನ್ಯಾ ಶೇಖರ್, ಜಯಂತ್ ರಾವ್, ಬಾಲಕೃಷ್ಣ ರೈ ನುಳಿಯಾಲು ಗುತ್ತು, ರಾಕೇಶ್ ರೈ ಅಡ್ಕ, ಮಂಜುಳಾ ಶೆಟ್ಟಿ ಇದ್ದರು.

Kinnigoli-030717011

Comments

comments

Comments are closed.

Read previous post:
Kinnigoli-030717010
ಮುಲ್ಕಿ: ಪ್ರತಿಭಾ ಪುರಸ್ಕಾರ

ಮುಲ್ಕಿ:  ಶ್ರೀ ನವದುರ್ಗಾ ಯುವಕ ವೃಂದ, ಕೋಟೆಕೇರಿ, ಮುಲ್ಕಿ ನಗರ ಪಂಚಾಯಿತಿಗೆ ಒಳಪಟ್ಟ ವಿವಿಧ ಶಾಲೆ / ಕಾಲೇಜುಗಳಲ್ಲಿ ಮಾರ್ಚ್ / ಏಪ್ರಿಲ್ 2017 ರ ಎಸ್.ಎಸ್.ಎಲ್.ಸಿ....

Close