ಕೆಸರ್‌ದ ಕಂಡೊಡು ಗೊಬ್ಬುದ ಪಂಥ

ಸಸಿಹಿತ್ಲು : ಅಳಿಯುತ್ತಿರುವ ಕೃಷಿ ಸಂಸ್ಕ್ರತಿ ಬದುಕು ಪರಂಪರೆ, ಮರೆಯಾಗುತ್ತಿರುವ ಗ್ರಾಮೀಣ ಕ್ರೀಡಾ ಕೂಟ ಮತ್ತು ಆಹಾರ ಪದ್ದತಿಯನ್ನು ಇಂದಿನ ಯುವ ಸಮುದಾಯಕ್ಕೆ ಪರಿಚಯ ಮಾಡಿ ತಿಳಿ ಹೇಳುವ ಸದುದ್ದೇಶದೊಂದಿಗೆ ಗ್ರಾಮಗಳ ನಡುವಿನ ಸೌಹಾರ್ದವನ್ನೂ ಭದ್ರಗೊಳಿಸುವ ಸಸಿಹಿತ್ಲು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಕಾರ್ಯ ಶ್ಲಾಘನೀಯ ಎಂದು ಮುಲ್ಕಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್ ಹೇಳಿದರು.
ಭಾನುವಾರ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ) ಅಗ್ಗಿದಕಳಿಯ ಸಸಿಹಿತ್ಲು ಆಯೋಜಿಸಿದ್ದ ಮೂರನೇ ವರ್ಷದ ಗ್ರಾಮದ ಗೌಜಿ ಕೆಸರ್‌ದ ಕಂಡೊಡು ಗೊಬ್ಬುದ ಪಂಥ ಕ್ರೀಡಾ ಕೂಟದಲ್ಲಿ ಮಾತನಾಡಿದರು.
ಯುವಜನ ಮತ್ತು ಕ್ರೀಡಾ ಇಲಾಖೆಯ ಲಿಲ್ಲಿ ಪಾಯಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದಿನ ಯುವಜನತೆ ಕೃಷಿ ಬದುಕು ಅರಿಯಬೇಕಾದರೆ ಇಂತಹ ಕ್ರೀಡೆಗಳು ಸಹಕಾರಿ ಕೃಷಿ ಪ್ರೀತಿಯನ್ನು ಎಲ್ಲರಲ್ಲೂ ಹುಟ್ಟು ಹಾಕುವುದು ಅಸಾಧ್ಯ ಆದರೆ ಇಂತಹ ಕಾರ್ಯಕ್ರಮದ ಮೂಲಕ ಅಲ್ಪಸ್ವಲ್ಪವಾದರೂ ಕೃಷಿ ಜ್ಞಾನ ಉಂಟು ಮಾಡಬಹುದು ಎಂದರು.
ಅತಿಥಿಗಳು ಗದ್ದೆಗೆ ಹಾಲು, ಪವಿತ್ರ ನೀರು, ಎಳನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಗೌರವಾಧ್ಯಕ್ಷ ಚಂದಯ್ಯ ಬಿ ಕರ್ಕೇರ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಹಳೆಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಲಜ, ಉಪಾದ್ಯಕ್ಷೆ ಪದ್ಮಾವತಿ ಶೆಟ್ಟಿ, ಮಂಗಳೂರು ಮೂಡಾ ಸದಸ್ಯ ವಸಂತ ಬೆರ್ನಾಡ್, ಉದ್ಯಮಿ ಹರೀಶ್ ಮುಂಚೂರು, ಧನಂಜಯ ಕೋಟ್ಯಾನ ಸಸಿಹಿತ್ಲು ಮತ್ತಿತರರು ಉಪಸ್ಥಿತರಿದ್ದರು.
ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಅಧ್ಯಕ್ಷ ಪ್ರಕಾಶ್ ಕುಮಾರ್ ಬಿ.ಎನ್. ಸ್ವಾಗತಿಸಿದರು. ಸಂಚಾಲಕ ರಮೇಶ್ ಪೂಜಾರಿ ಚೇಳಾಯರು ಪ್ರಸ್ತಾವನೆಗೈದರು. ನರೇಶ್ ಕುಮಾರ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

ಮಳೆಯನ್ನೂ ಲೆಕ್ಕಿಸದೆ ಮಕ್ಕಳು ಮತ್ತು ಮಹಿಳೆಯರು ಗದ್ದೆಯಲ್ಲಿ ತಮ್ಮ ಪ್ರತಿಭೆ ಅನಾವರಣಗೊಳಿಸಿದರು. ವೇದಿಕೆಯಲ್ಲಿ ಮಾತ್ರ ಜಾನಪದ ನೃತ್ಯ ಮಾಡುತ್ತಿದ್ದ ಮಕ್ಕಳು ಮತ್ತು ಯುವತಿಯರು ಉಳುಮೆ ಮಾಡಿದ ಗದ್ದೆಯಲ್ಲಿ ನೃತ್ಯ ಪ್ರದರ್ಶನ ನಡೆಸಿ ಎಲ್ಲೂ ಹೆಜ್ಜೆ ಹಾಕಲು ನಾವು ಸೈ ಎನ್ನುವುದನ್ನು ತೋರಿಸಿಕೊಟ್ಟರು.

Kinnigoli-03071703 Kinnigoli-03071704 Kinnigoli-03071705 Kinnigoli-03071706

Comments

comments

Comments are closed.

Read previous post:
Kinnigoli-03071702
ಉಚಿತ ದಂತ ಚಿಕಿತ್ಸೆ ಮತ್ತು ಮಾಹಿತಿ ಶಿಬಿರ

ಕಿನ್ನಿಗೋಳಿ: ತೋಕೂರು ಎಂ.ಆರ್.ಪೂಂಜಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಎ.ಬಿ.ಶೆಟ್ಟಿ ಸ್ಮಾರಕ ದಂತ ಮಹಾ ವಿದ್ಯಾಲಯ, ದೇರಳಕಟ್ಟೆ, ರಾಷ್ಟ್ರೀಯ ಸೇವಾ ಯೋಜನೆ ಮತ್ತು ರೋವರ್ಸ್ ಘಟಕ, ಎಂ. ಆರ್.ಪೂಂಜಾ ಐ.ಟಿ.ಐ.,...

Close